ಮುಂಬೈ: ಬಾಲಿವುಡ್ನ ದಿ ಮೋಸ್ಟ್ ಫೇವರಿಟ್ ಕಪಲ್ಗಳೆಂದರೆ ಮೊದಲಿಗೆ ಕೇಳಿ ಬರುವ ಹೆಸರು ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರದ್ದು. ಇತ್ತೀಚಿನ ದಿನಗಳಲ್ಲಿ ದಂಪತಿಗಳ ನಡುವೆ ಏನು ಸರಿ ಇಲ್ಲವೆಂಬುದು ಸ್ಪಷ್ಟವಾಗಿ ಕಾಣುತ್ತಿದ್ದು, ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿಯ ನಡುವೆಯೇ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮದಲ್ಲಿ ಸಪರೇಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಡಿವೋರ್ಸ್ ಸುದ್ದಿಗೆ ಈ ಜೋಡಿ ಇಂಬು ನೀಡಿತ್ತು. ಇದರ ನಡುವೆಯೇ ನಟಿ, ಸಂಸದೆ ಜಯಾ ಬಚ್ಚನ್ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದ್ದು, ಐಶ್ವರ್ಯಾ ಹಾಗೂ ಅಮಿತಾಭ್ ನಡುವಿನ ಬಾಂಡಿಂಗ್ ಕುರಿತು ವಿವರಿಸಿದ್ದಾರೆ.
ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಂಡುವ ವಿವಾದಾತ್ಮಕ ಟಿಲಿವಿಷನ್ ಶೋ ಕಾಫಿ ವಿತ್ ಕರಣ್ನಲ್ಲಿ ಈ ಕುರಿತು ಮಾತನಾಡಿರುವ ಜಯಾ ಪತಿ ಅಮಿತಾಭ್ರನ್ನು ಹಾಡಿ ಹೊಗಳಿದ್ದಾರೆ. ಅಮಿತಾಭ್ ಐಶ್ವರ್ಯಾರನ್ನು ಎಂದಿಗೂ ತಮ್ಮ ಸೊಸೆಯಂತೆ ನೋಡಲಿಲ್ಲ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಕೋಚ್ ಸ್ಥಾನದಲ್ಲಿ ಹೆಚ್ಚು ದಿನ ಉಳಿಯಲ್ಲ; ಗೌತಿ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ವಿಶ್ವಕಪ್ ವಿಜೇತ ತಂಡದ ಆಟಗಾರ
ಅಮಿತಾಭ್ ಐಶ್ವರ್ಯಾರನ್ನು ಎಂದಿಗೂ ಸೊಸೆಯಂತೆ ನೋಡಿಲ್ಲ. ನಮ್ಮ ಮನೆ ಮಗಳಂತೆ ನೋಡಿದ್ದಾರೆ. ಪ್ರತಿಬಾರಿಯೂ ಅವರು ಆಕೆಯನ್ನು ನೋಡಿದಾಗ ಖುಷಿ ಪಡುತ್ತಾರೆ. ನಮ್ಮ ಮಗಳು ಶ್ವೇತಾ ಮದುವೆಯಾಗಿ ಗಂಡನ ಮನೆಗೆ ಹೋದ ಬಳಿಕ ಆಕೆಯ ಜಾಗವನ್ನು ಐಶ್ವರ್ಯಾ ತುಂಬಿದ್ದಾಳೆ. ಐಶ್ವರ್ಯಾ ಬರುತ್ತಿದ್ದರೆ, ಶ್ವೇತಾನೇ ಎಂದು ಅಮಿತಾಭ್ ಖುಷಿ ಪಡುತ್ತಾರೆ. ಆಕೆ ನಮ್ಮ ಮನೆ ಮಗಳಿದ್ದಂತೆ ಎಂದು ಜಯಾ ಬಚ್ಚನ್ ಹೇಳಿದ್ದಾರೆ. ಅಭಿಷೇಕ್-ಐಶ್ವರ್ಯಾ ವಿಚ್ಛೇದನ ವದಂತಿಯ ನಡುವೆಯೇ ಜಯಾ ಬಚ್ಚನ್ ಅವರ ಈ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ನಟ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ವದಂತಿ ಹಬ್ಬಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ ಕಾರ್ಯಕ್ರಮದಲ್ಲಿ ಇಬ್ಬರೂ ಬೇರೆ ಬೇರೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಐಶ್ವರ್ಯಾ ಹಾಗೂ ಅಭಿ ಡಿವೋರ್ಸ ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಇಬ್ಬರು ಇದರ ಬಗ್ಗೆ ಮಾತನಾಡಿರಲಿಲ್ಲ. ಡಿವೋರ್ಸ್ ಸುದ್ದಿ ಬೆನ್ನಲ್ಲೇ ಮಗಳು ಆರಾಧ್ಯಳ ಶಾಲಾ ಕಾರ್ಯಕ್ರಮದಲ್ಲಿ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದರು. ಇದೀಗ ಮತ್ತೊಮ್ಮೆ ಬೇರೆ ಬೇರೆ ಕಾಣಿಸಿಕೊಳ್ಳುವ ಮೂಲಕ ವಿಚ್ಛೇದನ ವದಂತಿಗೆ ಮತ್ತೊಮ್ಮೆ ಪುಷ್ಠಿ ಸಿಕ್ಕಂತಾಗಿದೆ. ಇವರಿಬ್ಬರ ವಿಚ್ಛೇದನ ವದಂತಿ ಸುಳ್ಳಾಗಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.