More

  ಇರಾನ್ ಜನರಲ್ ಸುಲೇಮಾನಿ ಸ್ಮರಣೆ ವೇಳೆ ಸ್ಫೋಟ; ದಾಳಿಯ ಹೊಣೆ ಹೊತ್ತ ಐಸಿಸ್

  ನವದೆಹಲಿ: 2020 ರಲ್ಲಿ ಅಮೆರಿಕದ ಡ್ರೋನ್‌ನಿಂದ ಕೊಲ್ಲಲ್ಪಟ್ಟ ಟಾಪ್ ಕಮಾಂಡರ್ ಖಾಸಿಂ ಸುಲೇಮಾನಿ ಸ್ಮರಣೆ ಕಾರ್ಯಕ್ರಮದ ವೇಳೆ ಸಂಭವಿಸಿದ್ದ ಅವಳಿ ಬಾಂಬ್​​ ಸ್ಫೋಟದ ಹೊಣೆಯನ್ನು ಉಗ್ರ ಸಂಘಟನೆ ಐಸಿಸ್​ ಹೊತ್ತುಕೊಂಡಿದೆ.

  ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ ಐಸಿಸ್​ ವಕ್ತಾರರೊಬ್ಬರು, ನಮ್ಮ ಇಬ್ಬರು ಆತ್ಮಾಹುತಿ ಬಾಂಬರ್‌ಗಳು ಕೆರ್ಮಾನ್‌ ನಗರದಲ್ಲಿ ಅವಳಿ ಬಾಂಬ್ ಸಿಡಿಸಿದ್ದಾರೆ. ಈ ದಾಳಿಯ ಸಂಪೂರ್ಣ ಹೊಣೆಯನ್ನು ಐಸಿಸ್​ ಹೊತ್ತುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: ಕ್ರಿಕೆಟ್​ ದಿಗ್ಗಜ ಸಚಿನ್​​ ದಾಖಲೆ ಸರಿಗಟ್ಟಿದ 12 ವರ್ಷದ ಪೋರ

  ಆಗ್ನೇಯ ನಗರವಾದ ಕೆರ್ಮನ್‌ನಲ್ಲಿ ಸುಲೇಮಾನಿ ಅವರನ್ನು ಸಮಾಧಿ ಮಾಡಿರುವ ಸ್ಥಳದ ಬಳಿ ಸಂಸ್ಮರಣ ಕಾರ್ಯಕ್ರಮ ನಡೆಯುತ್ತಿತ್ತು, ಕಾರ್ಯಕ್ರಮವನ್ನು ಗುರಿಯಾಗಿಸಿ ನಡೆದ ಅವಳಿ ಬಾಂಬ್​ ದಾಳಿಯಲ್ಲಿ 84ಕ್ಕೂ ಹೆಚ್ಚು ಮೃತಪಟ್ಟು, 382 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಮೃತರ ಪಾರ್ಥಿವ ಶರೀರಗಳನ್ನು ಮೆರವಣಿಗೆ ಮಾಡಿ ಶುಕ್ರವಾರ ಇರಾನ್ ಸೇನಾಡಳಿತ ಸಂಬಂಧಿಕರಿಗೆ ಹಸ್ತಾಂತರಿಸಿತು.

  ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ಕಮಾಂಡರ್‌ ಮೇಜರ್‌ ಜನರಲ್‌ ಆಗಿದ್ದ ಖಾಸಿಂ ಸುಲೇಮಾನಿ ಅವರು, 2020ರ ಜನವರಿ 3ರಂದು ಅಮೆರಿಕ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದರು. 1979 ರ ನಂತರ ಇರಾನ್‌ನಲ್ಲಿ ಸಂಭವಿಸಿದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts