More

    ಮಗಳ ಮದುವೆಯಲ್ಲಿ ಮಾಜಿ ಪತ್ನಿಗೆ ಚುಂಬಿಸಿದ ಆಮೀರ್​ ಖಾನ್; ವಿಡಿಯೋ ವೈರಲ್

    ಮುಂಬೈ: ಬಾಲಿವುಡ್​ ನಟ ಆಮೀರ್​ ಖಾನ್​ ಅವರ ಪುತ್ರಿ ಇರಾ ಖಾನ್​ ತಮ್ಮ ಬಹುಕಾಲದ ಗೆಳೆಯ ಫಿಟ್​ನೆಸ್​ ಟ್ರೈನರ್​ ನೂಪುರ್ ಶಿಖರೆ ಅವರನ್ನು ಜನವರಿ 03ರಂದು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಮುಂಬೈನ ತಾಜ್​ ಲ್ಯಾಂಡ್ಸ್​​ ಎಂಡ್​​ ಹೋಟೆಲ್​ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ನಟ ಅಮೀರ್​ ಖಾನ್,​ ಅವರ ಇಬ್ಬರು ಮಾಜಿ ಪತ್ನಿಯರು ಸೇರಿದಂತೆ ಕೆಲವು ಆಪ್ತರು ಭಾಗಿಯಾಗಿದ್ದರು.

    ಮದುವೆ ಸಮಾರಂಭದಲ್ಲಿ ಮೊದಲ ಪತ್ನಿ ರೀನಾ ದತ್ತಾ ಹಾಗೂ ಎರಡನೇ ಪತ್ನಿ ಕಿರಣ್​ ರಾವ್​ ಭಾಗಿಯಾಗಿದ್ದರು. ಮದುವೆಯ ಸಂತೋಷದ ಸಂದರ್ಭದಲ್ಲಿ ಆಮೀರ್ ಅವರ ಮೊದಲ ಪತ್ನಿ ರೀನಾ ದತ್ತಾ, ಪುತ್ರ ಜುನೈದ್ ಖಾನ್ ಕೂಡಾ ಪಾಲುಗೊಂಡಿದ್ದು, ಹಾಗೆ ಆಮೀರ್ ಎರಡನೇ ಪತ್ನಿ ಕಿರಣ್ ರಾವ್ ಮತ್ತು ಮಗ ಅಜಾದ್ ರಾವ್ ಖಾನ್ ಕೂಡ ಭಾಗಿಯಾಗಿದ್ದರು.

    ಇದನ್ನೂ ಓದಿ: ಅಪರೂಪದ ವಿಶ್ವದಾಖಲೆ ಬರೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್​ ಪಂದ್ಯ

    ಮದುವೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಈ ಪೈಕಿ ಆಮೀರ್​ ತಮ್ಮ ಮಾಜಿ ಪತ್ನಿ ರೀನಾ ಕೆನ್ನೆಗೆ ಮುತ್ತು ಕೊಡುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಡಿವೋರ್ಸ್​​ ಪಡೆದಿದ್ದರೂ ಇಬ್ಬರ ನಡುವಿನ ಭಾಂದವ್ಯ ಹಾಗೆಯೇ ಉಳಿದಿದೆ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

    ಇರಾ ಖಾನ್​-ನೂಪುರ್​ ಶಿಖಾರೆ ಮದುವೆಯಲ್ಲಿ ಫ್ಯಾಮಿಲಿ ಜೊತೆ ಕ್ಯಾಮೆರಾಗೆ ಪೋಸ್​ ನೀಡುವಾಗ ಮಾಜಿ ಪತ್ನಿ ಕಿರಣ್ ರಾವ್​ ಕೆನ್ನೆಗೆ ಆಮೀರ್ ಖಾನ್​ ಚುಂಬಿಸಿದ್ದಾರೆ. ಫ್ಯಾನ್ಸ್​ ಪೇಜ್​ಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ. ವಿಚ್ಛೇದನ ಪಡೆದ ಬಳಿಕ ಮಾಜಿ ದಂಪತಿ ನಡುವೆ ಒಂದು ರೀತಿಯ ದ್ವೇಷ ಮನೆ ಮಾಡಿರುತ್ತದೆ. ಆದರೆ ಆಮೀರ್ ಖಾನ್​-ಕಿರಣ್​ ರಾವ್​ ವಿಚಾರದಲ್ಲಿ ಆ ರೀತಿ ಆಗಿಲ್ಲ ಎಂದು ವಿಡಿಯೋ ನೋಡಿದವರು ಕಮೆಂಟ್​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts