More

    ಅಪರೂಪದ ವಿಶ್ವದಾಖಲೆ ಬರೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್​ ಪಂದ್ಯ

    ಕೇಪ್​ಟೌನ್: ಇಲ್ಲಿನ ನ್ಯೂಲ್ಯಾಂಡ್ಸ್​ ಮೈದಾನದಲ್ಲಿ ನಡೆದ ಎರಡನೇ ಹಾಗೂ ಸರಣಿಯ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಗೆದ್ದು ಬೀಗಿರುವ ಟೀಂ ಇಂಡಿಯಾ ಅತಿಥೇಯರ ವಿರುದ್ಧ ಸಮಬಲ ಸಾಧಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಹೊಸ ವರ್ಷದ ಸಂಭ್ರಮವನ್ನು ಗೆಲುವಿನೊಂದಿಗೆ ಆಚರಿಸಿತು.

    ಇದೀಗ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್​ ಪಂದ್ಯ ಅಪರೂಪದ ವಿಶ್ವದಾಖಲೆ ಒಂದಕ್ಕೆ ಸಾಕ್ಷಿಯಾಗಿದೆ. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಕಡಿಮೆ ಎಸೆತಗಳಲ್ಲಿ ಮುಕ್ತಾಯವಾದ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಇಲ್ಲಿನ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಈ ಪಂದ್ಯವು, ವೇಗಿಗಳ ಭರಾಟೆಯಲ್ಲಿ ಕೇವಲ ಒಂದೂವರೆ ದಿನದಲ್ಲೇ ಮುಕ್ತಾಯವಾಯಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಫ್ರಿಕನ್ನರು ಮೊದಲು ಇನಿಂಗ್ಸ್‌ನಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡರು. ಇದಕ್ಕುತ್ತರವಾಗಿ ಭಾರತ 153 ರನ್‌ ಗಳಿಸಿತು.

    ಇದನ್ನೂ ಓದಿ: ಮೈದಾನದಲ್ಲಿ ರಾಮನಂತೆ ಫೋಸ್​ ನೀಡಿ ಕೈ ಮುಗಿದ ವಿರಾಟ್​ ಕೊಹ್ಲಿ; ವಿಡಿಯೋ ವೈರಲ್​

    98 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಏಡೆನ್​ ಮಾರ್ಕ್ರಮ್​ (106 ರನ್, 103 ಎಸೆತ, 17 ಬೌಂಡರಿ, 2 ಸಿಕ್ಸರ್) ಶತಕದ ಫಲವಾಗಿ 176 ರನ್‌ಗಳಿಗೆ ಆಲೌಟ್​ ಆಯಿತು. 78 ರನ್​ಗಳ ಸುಲಭ ಗುರಿ ಬೆನ್ನತ್ತಿದ್ದ ರೋಹಿತ್​ ಪಡೆ 12 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 80 ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು.

    ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್‌ 23.2 ಓವರ್‌ಗಳಲ್ಲಿ ಕೊನೆಗೊಂಡರೆ, ಭಾರತದ ಇನಿಂಗ್ಸ್‌ 34.5 ಓವರ್‌ಗಳಲ್ಲಿ ಅಂತ್ಯವಾಯಿತು. ಆತಿಥೇಯರು ಎರಡನೇ ಇನಿಂಗ್ಸ್‌ನಲ್ಲಿ 36.5 ಓವರ್‌ ಆಡಿದರೆ, ಭಾರತ ಗುರಿ ಮುಟ್ಟಲು ಕೇವಲ 12 ಓವರ್‌ ತೆಗೆದುಕೊಂಡಿತು. ಹೀಗಾಗಿ ಈ ಪಂದ್ಯವು 107 ಓವರ್‌ಗಳಲ್ಲೇ (642 ಎಸೆತಗಳಲ್ಲೇ) ಫಲಿತಾಂಶ ಕಂಡಂತಾಯಿತು. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಈ ಹಿಂದೆ ಇಷ್ಟು ಕಡಿಮೆ ಎಸೆತಗಳಲ್ಲಿ ಯಾವುದೇ ಪಂದ್ಯ ಮುಗಿದಿಲ್ಲ.

    1932ರಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ನಡುವಣ ಪಂದ್ಯವು 656 ಎಸೆತಗಳಲ್ಲಿ ಪೂರ್ಣಗೊಂಡಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. 1935ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಇಂಗ್ಲೆಂಡ್‌ ಜಯ ಗಳಿಸಿದ್ದ ಪಂದ್ಯವು ಕೇವಲ 672 ಎಸೆತಗಳಲ್ಲಿ ಮುಗಿದಿದ್ದು, ಈ ಹಿಂದಿನ ದಾಖಲೆಯಾಗಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts