ಹೈದರಾಬಾದ್: ಸ್ಯಾಂಡಲ್ವುಡ್ ಸೇರಿದಂತೆ ಹಲವು ವುಡ್ಗಳಲ್ಲಿ ಕೆಲಸ ಮಾಡಿರುವ ತ್ರಿಷಾ, ಇಂದಿಗೂ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಆಗಿ ಉಳಿದುಕೊಂಡಿದ್ದಾರೆ. ಅವರು ಎಲ್ಲಿಯೇ ಹೋದರು ಅಭಿಮಾನಿಗಳು ಕೇಳುವುದು ಒಂದೇ ಪ್ರಶ್ನೆ ಮದುವೆ ಯಾವಾಗ ಎಂಬುದು. ಆದರೆ, ಈವರೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಹಲವು ಭಾರಿ ಮದುವೆ ಸುದ್ದಿ ಹರಿದಾಡಿದರೂ ಅದು ವದಂತಿಯಾಗುವ ಮೂಲಕ ಅಭಿಮಾನಿಗಳನ್ನು ನಿರಾಸೆಗೆ ದೂಡುತ್ತಿದೆ. ಈ ಬಾರಿಯು ತ್ರಿಷಾ ಮದುವೆ ವಿಚಾರ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಈ ಸುದ್ದಿಯಾದರೂ ನಿಜವಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ವರದಿಗಳ ಪ್ರಕಾರ ತ್ರಿಷಾ ಅವರು ಮಲಯಾಳಂನ ಮುಂಚೂಣಿ ನಿರ್ಮಾಪಕರೊಬ್ಬರ ಜತೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಶೀಘ್ರದಲ್ಲೇ ಇಬ್ಬರ ಮದುವೆ ನಡೆಯಲಿದೆಯಂತೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಚರ್ಚೆ ಬಹಳ ಜೋರಾಗಿ ನಡೆಯುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ತ್ರಿಷಾ ಅವರಿಂದಾಗಲಿ ಅಥವಾ ಅವರ ಆಪ್ತ ಮೂಲಗಳಿಂದಾಗಿ ಹೊರಬಿದ್ದಿಲ್ಲ. ಆದರೆ, ಸಿನಿ ಗಲ್ಲಿಯಲ್ಲಿ ಇಂಥದ್ದೊಂದು ಮಾಹಿತಿ ಹರಿದಾಡುತ್ತಿದೆ.
ಇದನ್ನೂ ಓದಿ: 12 ಕೋಟಿ ರೂ ವೆಚ್ಚದಲ್ಲಿ ಡಿಸಿಸಿ ಬ್ಯಾಂಕ್ ನೂತನ ಕಟ್ಟಡ ನಿರ್ಮಾಣ: ಶಾಸಕ ರವಿಕುಮಾರ್ ಗಣಿಗ ಮಾಹಿತಿ
ಇನ್ನೂ ತ್ರಿಷಾ ಅವರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ತ್ರಿಷಾ, ಉದ್ಯಮಿ ಮತ್ತು ನಿರ್ಮಾಪಕ ವರುಣ್ ಮಣಿಯನ್ ಅವರೊಂದಿಗೆ ಖಾಸಗಿ ಸಮಾರಂಭದಲ್ಲಿ ಆಪ್ತರು, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ, ಅಜ್ಞಾತ ಕಾರಣಗಳಿಂದ ಈ ಮದುವೆ ನಡೆಯಲಿಲ್ಲ ಎಂದು ಸುದ್ದಿಯಾಗಿತ್ತು. ಅಲ್ಲದೆ, ನಟ ರಾಣಾ ದಗ್ಗುಬಾಟಿ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳೂ ಬಂದಿದ್ದವು.
ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ಕೇಳಿದಾಗ, ತ್ರಿಷಾ ತಾನು ಯಾವುದೇ ಆಲೋಚನೆ ಮಾಡಿಲ್ಲ ಎಂದು ಹೇಳಿದ್ದರು. ಸಾಮಾಜಿಕ ಒತ್ತಡದಲ್ಲಿ ಮದುವೆಯಾಗುವುದನ್ನು ಮತ್ತು ನಂತರ ವಿಚ್ಛೇದನದ ಪಡೆಯುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದರು. ತಾನು ಮದುವೆಯಾಗುವ ಆದರ್ಶ ಸಂಗಾತಿ ಇನ್ನೂ ಸಿಕ್ಕಿಲ್ಲ ಎಂದು ತ್ರಿಷಾ ಸ್ಪಷ್ಟಪಡಿಸಿದ್ದರು. (ಏಜೆನ್ಸೀಸ್)
ಅವಕಾಶಕ್ಕಾಗಿ ತ್ರಿಷಾ ಸುಮ್ಮನಿದ್ದರು! ಸೌತ್ ಬ್ಯೂಟಿ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ಮೀರಾ ಮಿಥುನ್