ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ ಒಂದು. ಕೆಲ ಜ್ಯೋತಿಷಿಗಳು ಕೈಯಲ್ಲಿರುವ ರೇಖೆಗಳನ್ನು ನೋಡಿಯೇ ಜಾತಕವನ್ನು ಹೇಳುತ್ತಾರೆ.
ನಮ್ಮ ಕೈಗಳಲ್ಲಿ ಹಲವು ಗೆರೆಗಳು ಅಥವಾ ಗೀರುಗಳಿವೆ. ಆ ಗೆರೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆಲವರಿಗೆ ಅಂಗೈ ಮಧ್ಯದಲ್ಲಿ ಆಂಗ್ಲ ಅಕ್ಷರ ‘M’ ಆಕಾರದಲ್ಲಿ ಗುರುತು ಕಾಣಿಸುತ್ತದೆ. ನಿಮ್ಮ ಕೈಯಲ್ಲಿ ಈ ಗುರುತು ಇದೆಯಾ ಒಮ್ಮೆ ಚೆಕ್ ಮಾಡಿಕೊಳ್ಳಿ. ಅಂಗೈಯಲ್ಲಿ ಈ M ಚಿಹ್ನೆ ಇದ್ದರೆ ಏನಾಗುತ್ತದೆ ಎಂಬುದನ್ನು ನಾವೀಗ ತಿಳಿಯೋಣ.
ಈ M ಚಿಹ್ನೆಯು ಲೈಫ್ ಲೈನ್, ಹೆಡ್ ಲೈನ್ ಮತ್ತು ಹಾರ್ಟ್ ಲೈನ್ನಿಂದ ರೂಪುಗೊಂಡಿದೆ. ಲೈಫ್ ಲೈನ್ ಮಣಿಕಟ್ಟಿನಿಂದ ಮೇಲಕ್ಕೆ ವಿಸ್ತರಿಸುತ್ತದೆ ಮತ್ತು ಹೆಡ್ಲೈನ್, ಹಾರ್ಟ್ ಲೈನ್ ಅನ್ನು ದಾಟುತ್ತದೆ. ಇದು ಲೈಫ್ ಲೈನ್, ಹೆಡ್ ಲೈನ್ ಮತ್ತು ಹಾರ್ಟ್ಲೈನ್ನೊಂದಿಗೆ ಓರೆಯಾದ M ಚಿಹ್ನೆಯನ್ನು ರೂಪಿಸುತ್ತದೆ. ಅಂಗೈಯಲ್ಲಿರುವ M ಚಿಹ್ನೆಯು ಹಣ ಮತ್ತು ಪ್ರೀತಿಯ ಅದೃಷ್ಟವನ್ನು ಪ್ರತಿನಿಧಿಸುತ್ತದೆ.
M ಚಿಹ್ನೆಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ಉನ್ನತ ಮನಸ್ಸಿನವರು. ಅವರು ತಮ್ಮ ಕನಸುಗಳಿಗಾಗಿ ಶ್ರಮಿಸುತ್ತಾರೆ ಮತ್ತು ತಾವು ಬಯಸಿದನ್ನು ಸಾಧಿಸದೇ ಬಿಡುವುದಿಲ್ಲ. ಆದ್ದರಿಂದ, ಈ ಜನರು ಹೆಚ್ಚಾಗಿ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ಮನ್ನಣೆಯನ್ನೂ ಗಳಿಸುತ್ತಾರೆ. 40 ವರ್ಷಗಳಲ್ಲಿ ಖ್ಯಾತಿ ಮತ್ತು ಹಣವನ್ನು ಪಡೆಯುತ್ತಾರೆ.
M ಚಿಹ್ನೆಯನ್ನು ಹೊಂದಿರುವ ಜನರು ಉದ್ಯಮದಲ್ಲಿ ಮಾಸ್ಟರ್ಸ್ ಆಗಿರುತ್ತಾರೆ. ನಾಲ್ಕೈ ತಲೆಮಾರುಗಳಿಗೆ ಸಾಕಷ್ಟು ದೊಡ್ಡ ಸಂಪತ್ತನ್ನು ಸಂಗ್ರಹಿಸುತ್ತಾರೆ ಮತ್ತು ಮಿಲಿಯನೇರ್ ಆಗುತ್ತಾರೆ. ಈ ಚಿಹ್ನೆ ಉಳ್ಳವರು ಉತ್ಸಾಹಿ, ಸಹಾನುಭೂತಿ, ಸೃಜನಶೀಲರು ಮತ್ತು ಇತರರು ನಿರ್ಲಕ್ಷಿಸುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅವರಿಗೆ ಯಾವುದೇ ಕಾರ್ಯವನ್ನು ನಿಯೋಜಿಸಿದರೆ, ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. (ಏಜೆನ್ಸೀಸ್)
ಟೀಮ್ ಇಂಡಿಯಾಗಿಂತ IPL ತಂಡಕ್ಕೆ ಕೋಚ್ ಆಗುವುದೇ ಬೆಸ್ಟ್! ವೀರೂ ಕೊಟ್ಟ ಅಚ್ಚರಿಯ ಕಾರಣ ಹೀಗಿದೆ…
ಕ್ಯಾರವಾನ್ನಲ್ಲಿ ಬಟ್ಟೆ ಮಾತ್ರ ಬದಲಿಸಲ್ಲ ಅದು ಕೂಡ ನಡೆಯುತ್ತೆ! ಸ್ಫೋಟಕ ಸಂಗತಿ ಬಿಚ್ಚಿಟ್ಟ ಶಕೀಲಾ