Basil | ಈ ಬೇಸಿಗೆಯ ಸಂದರ್ಭದಲ್ಲಿ ಹೂವುಗಳು ಮತ್ತು ಸಸ್ಯಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ವಿಶೇಷವಾಗಿ ತುಳಸಿ ಗಿಡವನ್ನು ನಾವು ಬಿಸಿಲಿನಿಂದ ರಕ್ಷಿಸಬೇಕಾಗಿರುತ್ತದೆ. ಹಾಗಾದ್ರೆ ಬೇಸಿಗೆಯಲ್ಲಿ ನಿಮ್ಮ ತುಳಸಿ ಗಿಡ ಒಣಗಿದರೆ, ಈ ಹಣ್ಣಿನ ಸಿಪ್ಪೆಯನ್ನು ಬೇರುಗಳಿಗೆ ಹಾಕುವುದರಿಂದ ಅದು ಸದಾ ಹಸಿರಾಗಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಣ್ಣ-ಪುಟ್ಟ ಕಾರಣಕ್ಕೂ ಡೋಲೋ ಮಾತ್ರೆಗಳನ್ನು ಸೇವಿಸುತ್ತೀರಾ.! ಇದರಿಂದ ಆಗುವ ಪರಿಣಾಮವೇನು ಗೊತ್ತಾ..!ifestyle
ತುಳಸಿ ಗಿಡವು ಭಾರತೀಯ ಮನೆಗಳಲ್ಲಿ ಧಾರ್ಮಿಕ ಮಹತ್ವವನ್ನು ಹೊಂದಿದೆ. ಜೊತೆಗೆ ಇದು ಔಷಧೀಯ ಗುಣಗಳಿಂದ ಕೂಡಿದೆ. ಆಯುರ್ವೇದದಲ್ಲಿ ತುಳಸಿಯನ್ನು “ಗಿಡಮೂಲಿಕೆಗಳ ರಾಣಿ” ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಅನೇಕ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದನ್ನು ಮನೆಯಲ್ಲಿ ಇಡುವುದರಿಂದ ಸುತ್ತಮುತ್ತಲಿನ ವಾತಾವರಣ ಶುದ್ಧವಾಗುವ ಮೂಲಕ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಅಂದಹಾಗೆ ಈ ಬೇಸಿಗೆಯಲ್ಲಿ ತುಳಸಿ ಗಿಡ ಬೇಗನೆ ಒಣಗಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಹೆಚ್ಚಿನ ನೀರು ಮತ್ತು ಹೆಚ್ಚುತ್ತಿರುವ ತಾಪಮಾನದ ಹೊರತಾಗಿ, ಕಠಿಣ ಸೂರ್ಯನ ಬೆಳಕಿನಿಂದಾಗಿ ಅದರ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಕೆಲವೊಮ್ಮೆ ಇಡೀ ಸಸ್ಯವು ಒಣಗಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ವೈದ್ಯರಿಂದ ಗೂಂಡಾಗಿರಿ; 77 ವರ್ಷದ ವೃದ್ಧನಿಗೆ ಮನಬಂದಂತೆ ಥಳಿಸಿದ ಡಾಕ್ಟರ್ | Viral vedeo
ಬಿಸಿಲಿನ ಬೇಗೆಯಲ್ಲಿ ತುಳಸಿ ಒಣಗುವ ಸಮಸ್ಯೆಯನ್ನು ತಪ್ಪಿಸಲು, ಮನೆಯಲ್ಲಿಯೇ ನೈಸರ್ಗಿಕ ಗೊಬ್ಬರಗಳನ್ನು ತಯಾರಿಸುವುದು ಮುಖ್ಯವಾಗಿದೆ. ಮನೆಯಲ್ಲಿಯೇ ತುಳಸಿ ಗಿಡಗಳಿಗೆ ನೈಸರ್ಗಿಕ ಗೊಬ್ಬರವನ್ನು ಹೇಗೆ ತಯಾರಿಸುವುದು ಮತ್ತು ಸಸ್ಯ ಯಾವಾಗಲೂ ಹಸಿರಾಗಿರುವಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ.
ಯಾವ ಹಣ್ಣಿನ ಸಿಪ್ಪೆ ಹಾಕಬೇಕು?
ನಾವು ತಿನ್ನುವ ಬಾಳೆಹಣ್ಣಿನಿಂದ ಬಾಳೆಹಣ್ಣಿನ ಸಿಪ್ಪೆಯ ಗೊಬ್ಬರವನ್ನು ತಯಾರಿಸಬಹುದು. ಇದಕ್ಕಾಗಿ ಐದರಿಂದ ಆರು ಬಾಳೆಹಣ್ಣುಗಳ ಸಿಪ್ಪೆಯನ್ನು ಸಂಪೂರ್ಣವಾಗಿ ಒಣಗಿಸಿ, ಈ ಸಿಪ್ಪೆ ಸಂಪೂರ್ಣವಾಗಿ ಒಣಗಿದ ನಂತರ, ಅದನ್ನು ಪುಡಿಮಾಡಬೇಕು. ನಂತರ ಈ ಸಾವಯವ ಗೊಬ್ಬರವನ್ನು ಪ್ರತಿದಿನ ತುಳಸಿ ಗಿಡಗಳಿಗೆ ಹಾಕಬೇಕು. ಇದರಲ್ಲಿ ಬಹಳಷ್ಟು ಪೊಟ್ಯಾಸಿಯಮ್ ಇರುತ್ತದೆ. ಇದು ತುಳಸಿಯ ಬೆಳವಣಿಗೆಯನ್ನು ಹೆಚ್ಚಿಸುವ ಮೂಲಕ ಅದು ಒಳಗುವುದನ್ನು ತಡೆಗಟ್ಟುತ್ತದೆ.
ತರಕಾರಿ ಗೊಬ್ಬರ ಸಿಂಪಡಿಸುವಿಕೆ:
ತರಕಾರಿ ಸಿಪ್ಪೆಗಳು, ಹಣ್ಣಿನ ತುಣುಕುಗಳು, ಟೀ ಬ್ಯಾಗ್‌ಗಳು ಮತ್ತು ಒಣಗಿದ ಎಲೆಗಳನ್ನು ಒಂದು ಪಾತ್ರೆಯಲ್ಲಿ ಸೇರಿಸಿ. ಅದಕ್ಕೆ ಸ್ವಲ್ಪ ಪ್ರಮಾಣದ ಗೊಬ್ಬರ ಅಥವಾ ಕೊಕೊಪೀಟ್ ಸೇರಿಸಿ. ಈ ಮಿಶ್ರಣವನ್ನು ಪ್ರತಿ 3 ರಿಂದ 4 ದಿನಗಳಿಗೊಮ್ಮೆ ಮಿಶ್ರಣ ಮಾಡಿ, ಇದರಿಂದ ಅದು ಚೆನ್ನಾಗಿ ಕೊಳೆಯುತ್ತದೆ. ಈ ಗೊಬ್ಬರ ಸುಮಾರು 3 ರಿಂದ 4 ವಾರಗಳಲ್ಲಿ ಸಿದ್ಧವಾಗುತ್ತದೆ. ಅದನ್ನು ತುಳಸಿ ಗಿಡದ ಸುತ್ತ ಮಣ್ಣಿನೊಂದಿಗೆ ಮಿಶ್ರಣ ಮಾಡಿ ಹಾಕಿರಿ.
ಬೇಸಿಗೆಯಲ್ಲಿ ತುಳಸಿ ರಕ್ಷಿಸುವುದೇಗೆ?
ಬೇಸಿಗೆಯಲ್ಲಿ ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ತುಳಸಿಗೆ ನೀರು ಹಾಕಿ. ಮಣ್ಣನ್ನು ಎಲ್ಲಾ ಸಮಯದಲ್ಲೂ ತೇವವಾಗಿಡಿ, ಆದರೆ ಅತಿಯಾಗಿ ನೀರು ಹಾಕಬೇಡಿ ಇದರಿಂದ ಬೇರುಗಳು ಕೊಳೆಯಬಹುದು. ತುಳಸಿಯನ್ನು ನೇರ ಬಿಸಿಲಿನ ಶಾಖದಿಂದ ರಕ್ಷಿಸಿ. ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ಸಸ್ಯಗಳ ಸುತ್ತಲೂ ಒಣಗಿದ ಎಲೆಗಳು ಅಥವಾ ಹುಲ್ಲನ್ನು ಇರಿಸಿ. ತುಳಸಿಯ ಎಲೆಗಳು ಮತ್ತು ಕಾಂಡಗಳನ್ನು ನಿಯಮಿತವಾಗಿ ಕತ್ತರಿಸುತ್ತಿರಿ. ಇದರಿಂದ ಸಸ್ಯವು ಆರೋಗ್ಯಕರವಾಗಿರುತ್ತದೆ. ಸಸ್ಯವು ಕೀಟಗಳಿಂದ ಬಾಧೆಯಾಗಿದ್ದರೆ, ಬೇವಿನ ಎಣ್ಣೆ ಅಥವಾ ಅರಿಶಿನ ನೀರನ್ನು ಸಿಂಪಡಿಸಿ.
(ಏಜೆನ್ಸೀಸ್)
ಆಸ್ಪತ್ರೆಯಲ್ಲಿ ವೈದ್ಯರಿಂದ ಗೂಂಡಾಗಿರಿ; 77 ವರ್ಷದ ವೃದ್ಧನಿಗೆ ಮನಬಂದಂತೆ ಥಳಿಸಿದ ಡಾಕ್ಟರ್ | Viral vedeo