ಆಸ್ಪತ್ರೆಯಲ್ಲಿ ವೈದ್ಯರಿಂದ ಗೂಂಡಾಗಿರಿ; 77 ವರ್ಷದ ವೃದ್ಧನಿಗೆ ಮನಬಂದಂತೆ ಥಳಿಸಿದ ಡಾಕ್ಟರ್ | Viral vedeo

viral
Published on

Madhya Pradesh| ಪತ್ನಿಯ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ 77 ವರ್ಷದ ವೃದ್ಧನ ಮೇಲೆ ವೈದ್ಯರು ಕ್ರೂರವಾಗಿ ನಡೆದುಕೊಂಡಿದ್ದು, ಆ ವ್ಯಕ್ತಿಗೆ ಮನಬಂದಂತೆ ಥಳಿಸಿದ್ದಾರೆ. ವೈದ್ಯರು ಆ ಮುದುಕನ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದು, ಆ ವೃದ್ಧನ ಕಾಲುಗಳನ್ನು ಹಿಡಿದು ಆಸ್ಪತ್ರೆಯಿಂದ ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಲು ಪ್ರಾರಂಭಿಸಿದ್ದಾರೆ.

ಇನ್ನೂ ಈ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ವೈದ್ಯರು ವೃದ್ಧನನ್ನು ಥಳಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸರದಿಯಲ್ಲಿ ಕಾಯುತ್ತಿದ್ದ ನಂತರ ತನ್ನ ಸರದಿ ಬಂದಾಗ ವೈದ್ಯರು ತನ್ನನ್ನು ಒದ್ದು ಕಪಾಳಮೋಕ್ಷ ಮಾಡಿದರು ಎಂದು ಸಂತ್ರಸ್ತ ಹೇಳಿಕೊಂಡಿದ್ದಾರೆ. ಇನ್ನೂ ಆ ವೃದ್ಧ ವ್ಯಕ್ತಿ ಸರದಿಯಿಂದ ಹೊರಬಂದಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿಕೊಂಡಿದ್ದು, ಇದು ವೈದ್ಯರೊಂದಿಗೆ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವರದಿಯ ಪ್ರಕಾರ ಈ ಘಟನೆ ಏಪ್ರಿಲ್ 17 ರ ಗುರುವಾರ ನಡೆದಿದ್ದು, ವದ್ಧ ಜೋಶಿ ತಮ್ಮ ಪತ್ನಿಯ ವೈದ್ಯಕೀಯ ತಪಾಸಣೆಗಾಗಿ ಛತ್ತರ್ಪುರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ.

ವದ್ಧ ಹೇಳಿದ್ದೇನು?

ಈ ಭೀಕರ ಘಟನೆಯನ್ನು ವಿವರಿಸುತ್ತಾ ವೃದ್ಧ ಜೋಷಿ ಮಾತನಾಡಿದ್ದು, ವೈದ್ಯರು ಎದುರಾದಾಗ ನಾನು ಇತರರಂತೆ ಸರದಿಯಲ್ಲಿ ಕಾಯುತ್ತಿದ್ದೆ, ಜನಸಂದಣಿಯಿಂದ ಸಿಟ್ಟಿಗೆದ್ದ ವೈದ್ಯರು ಏಕಾಏಕಿ ನನಗೆ ಕಪಾಳಮೋಕ್ಷ ಮಾಡಿದರು. ನಂತರ ವೈದ್ಯರು ನನ್ನನ್ನು ಆಸ್ಪತ್ರೆ ಆವರಣದೊಳಗೆ ಎಳೆದೊಯ್ದರು. ನಾನು ಸರಿಯಾಗಿ ನಿಂತಿರಲಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ಆರೋಪಿಸಿ ಹೀಗೆ ಹಲ್ಲ ನಡೆಸಿದ್ದಾರೆ ಎಂದು ವೃದ್ಧ ಆರೋಪಿಸಿದ್ದಾರೆ.

ಸ್ಥಳವು ಜನದಟ್ಟಣೆಯಿಂದ ಕೂಡಿತ್ತು ಮತ್ತು ಜೋಶಿ ಸರತಿ ಸಾಲನ್ನು ತಪ್ಪಿದ ಕಾರಣ ಈ ರೀತಿಯ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಇನ್ನೂ ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net