ಸಣ್ಣ-ಪುಟ್ಟ ಕಾರಣಕ್ಕೂ ಡೋಲೋ ಮಾತ್ರೆಗಳನ್ನು ಸೇವಿಸುತ್ತೀರಾ.! ಇದರಿಂದ ಆಗುವ ಪರಿಣಾಮವೇನು ಗೊತ್ತಾ..!lifestyle

dolo 650
Published on

lifestyle: ಸಾಮಾನ್ಯ ಜನರು ಕೆಮ್ಮು, ಶೀತ ಅಥವಾ ದೇಹದಲ್ಲಿ ಸ್ವಲ್ಪ ಮಟ್ಟಿಗೆ ಆಯಾಸ ಕಂಡುಬಂದರೆ ಸಾಕು, ತಮ್ಮ ಅಕ್ಕ-ಪಕ್ಕದ ಸ್ಟೋರ್​​ಗಳಲ್ಲಿ ತಕ್ಷಣಕ್ಕೆ ಸಿಗುವ ಈ ಡೋಲೋ 650 ಮಾತ್ರೆಗಳನ್ನು ತೆಗೆದುಕೊಂಡು ಸೇವಿಸುವುದು ಸಾಮಾನ್ಯ. ಜ್ವರದ ಜೊತೆಗೆ, ಅನೇಕ ಜನರು ತಲೆನೋವು, ದೇಹದ ನೋವು ಮತ್ತು ಇತರ ಸಣ್ಣ-ಪುಟ್ಟ ಕಾಯಿಲೆಗಳಿಗೆ ವೈದ್ಯರನ್ನು ಸಂಪರ್ಕಿಸದೆ ಈ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನೂ ಈ ಮಾತ್ರೆಯನ್ನು ಹೆಚ್ಚಾಗಿ ಸೇವಿಸುವುದರಿಂದ ಹಲವು ಅಡ್ಡಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗಿದೆ.

ಕೊರೋನಾ ಕಾಲದಿಂದಲೂ ದೇಶದಲ್ಲಿ ಅನೇಕ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಡೋಲೋ 650 ಅನ್ನು ಬಳಸಲಾಗುತ್ತಿದೆ. ಜ್ವರ, ತಲೆನೋವು ಅಥವಾ ದೇಹದ ನೋವು ಏನೇ ಇರಲಿ, ಜನರು ವೈದ್ಯರನ್ನು ಸಂಪರ್ಕಿಸದೆ ಡೋಲೋ ತೆಗೆದುಕೊಳ್ಳುತ್ತಾರೆ. ಡೋಲೋ ತೆಗೆದುಕೊಂಡ ನಂತರ ಸಮಸ್ಯೆ ಬಗೆಹರಿಯುತ್ತದೆ, ಆದರೆ ಇದು ಅನೇಕ ಅಡ್ಡಪರಿಣಾಮಗಳನ್ನು ಹೊಂದಿದೆ. ಡೋಲೊ 650 ರ ಅತಿಯಾದ ಬಳಕೆಯಿಂದ ಮುಂದೆ ನಾನಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇನ್ನೂ ಅಮೆರಿಕದ ವೈದ್ಯರೊಬ್ಬರು ಭಾರತದಲ್ಲಿ ಡೋಲೋ 650 ತೆಗೆದುಕೊಳ್ಳುವ ಬಗ್ಗೆ ಟ್ವೀಟ್ ಮಾಡಿದ್ದು, ಭಾರತೀಯರು ಡೋಲೋ 650 ಅನ್ನು ಚಾಕೊಲೇಟ್‌ನಂತೆ ತಿನ್ನುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಡೋಲೊ 650 ಅನ್ನು ಕೊರೋನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಪರಿಚಯಿಸಲಾಯಿತು. ಈ ಸಮಯದಲ್ಲಿ, ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಈ ಔಷಧಿಯನ್ನು ನೀಡಲಾಗುತ್ತಿತ್ತು. ಆದರೆ ಈ ಕೊರೋನ ಸಮಯ ಕಳೆದು ಹೋದರೂ ಕೂಡ, ದೇಶದಲ್ಲಿ ಅದರ ಬಳಕೆ ನಿಲ್ಲಲಿಲ್ಲ. ಈ ಔಷಧವು ಪ್ರಸ್ತುತ ದೇಶಾದ್ಯಂತ ಬಳಕೆಯಲ್ಲಿದೆ. ಈ ಮಾತ್ರೆಯನ್ನು ವೈದ್ಯರ ಸಲಹೆಯಿಲ್ಲದೆ ಹೆಚ್ಚಾಗಿ ತೆಗೆದುಕೊಳ್ಳಲಾಗುತ್ತಿದೆ. ನೀವು ವೈದ್ಯರನ್ನು ಸಂಪರ್ಕಿಸದೆ ಯಾವುದೇ ಕಾರಣಕ್ಕೂ ಕೂಡ ಈ ಮಾತ್ರೆಗಳನ್ನು ಸೇವಿಸಬೇಡಿ.

ಅಡ್ಡಪರಿಣಾಮಗಳೇನು?

4) ಡೋಲೋ ಮಾತ್ರೆಯು ದೇಹದೊಳಗಿನ ಗಂಭೀರ ಕಾಯಿಲೆಗಳ ಲಕ್ಷಣಗಳನ್ನು ನಿಗ್ರಹಿಸುತ್ತದೆ ಹಾಗೂ ಇದು ಭವಿಷ್ಯದಲ್ಲಿ ಇತರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು.

3) ಈ ಮಾತ್ರೆಯ ನಿರಂತರ ಬಳಕೆಯು ಗಂಭೀರ ಯಕೃತ್ತು ಮತ್ತು ಮೂತ್ರಪಿಂಡದ ಸಮಸ್ಯೆಗಳನ್ನು ಉಂಟುಮಾಡಬಹುದು.

2) ಈ ಮಾತ್ರೆ ಒತ್ತಡವನ್ನು ಹೆಚ್ಚಿಸುತ್ತದೆ. ಈ ಔಷಧದ ಮಿತಿಮೀರಿದ ಸೇವನೆಯು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಅನೇಕ ಅಧ್ಯಯನಗಳು ತಿಳಿಸಿವೆ.

1) ಈ ಔಷಧಿಯನ್ನು ಅನಗತ್ಯವಾಗಿ ಅಥವಾ ಅಧಿಕವಾಗಿ ಸೇವಿಸುವುದರಿಂದ ದೇಹದಲ್ಲಿ ಅಲರ್ಜಿ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

(ಏಜೆನ್ಸೀಸ್)

ವೈದ್ಯರು ಸೂಚಿಸಿದರೆ ಮಾತ್ರ ಈ ಮಾತ್ರೆಗಳನ್ನು ನೀವು ಸೇವಿಸಬಹುದಾಗಿದೆ. ಬದಲಿಗೆ ತಲೆನೋವು ಮತ್ತು ದೇಹದ ನೋವುಗಳಿಗೆ ಕೆಲವು ಇತರ ಕ್ರಮಗಳನ್ನು ಸಹ ತೆಗೆದುಕೊಳ್ಳಬಹುದು. ಹಾಗಾಗಿ ನೀವು ಈ ಮಾತ್ರೆ ಸೇವನೆಗೂ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net