

SSLC: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ, 10ನೇ ತರಗತಿಯ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವಾಗ, ಒಬ್ಬ ಅಭ್ಯರ್ಥಿಯು “ಪ್ರೀತಿ” ಗಾಗಿ ಮಾಲ್ಯಮಾಪಕರ ಬಳಿ ಮನವಿ ಮಾಡಿ ಬರೆದಿದ್ದು ಓದಿದ ನಂತರ, ಶಿಕ್ಷಕರು ತಲೆ ಕೆರೆದುಕೊಳ್ಳುತ್ತಿದ್ದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಅವಳು ನನ್ನ ಲವ್ ಮಾಡಬೇಕಾದರೆ ನೀವು ಪ್ಲೀಸ್ ನನ್ನ ಪಾಸ್ ಮಾಡಬೇಕು ಸರ್/ಮೇಡಂ. ದಯವಿಟ್ಟು ಪಾಸ್ ಮಾಡಿ ಎಂದು 500 ರೂ
. ನೋಟನ್ನು ಉತ್ತರ ಪತ್ರಿಕೆಯಲ್ಲಿ ಇಟ್ಟು ವಿದ್ಯಾರ್ಥಿಯೊಬ್ಬ ನಿವೇದನೆ ಮಾಡಿಕೊಂಡಿರುವ ಉತ್ತರಪತ್ರಿಕೆ ಪೋಟೋ ಎಲ್ಲೆಡೆ ವೈರಲ್ ಆಗಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವಿದ್ಯಾರ್ಥಿಯ ಉತ್ತರಪತ್ರಿಕೆ ಇದು ಎಂದು ಹೇಳಲಾಗುತ್ತಿದೆ. 'ಫೀಸ್ ನನ್ನ ಪಾಸ್ ಮಾಡಿ, ನನ್ನ ಲವ್ ನಿಮ್ಮ ಕೈಯಲ್ಲಿದೆ. ಪ್ಲೀಸ್...ಪ್ಲೀಸ್... ಪಾಸ್ ಮಾಡಿ ಸರ್/ಮೇಡಂ' ಎಂದು ವಿದ್ಯಾರ್ಥಿ ಬೇಡಿಕೊಂಡಿದ್ದಾನೆ. 'ನಾನು ಪಾಸಾದರೆ ಮಾತ್ರ ಅವಳು ನನ್ನ ಲವ್ ಮಾಡುತ್ತಾಳೆ. ಪಾಸ್ ಮಾಡಿ ನನ್ನ ಲವ್ ಉಳಿಸಿ' ಎಂದು ಚಹಾ ಕುಡಿಯಿರಿ ಎಂದೂ ಬರೆದಿದ್ದಾರೆ.
ಮತ್ತೊಂದು ಪತ್ರಿಕೆಯಲ್ಲಿ ಪ್ಲೀಸ್ ಮಿಸ್ ಅಂಡ್ ಸರ್ ನನ್ನನ್ನು ಪಾಸ್ ಮಾಡಿ ಎಂದು ಬರವಣಿಗೆ ಪತ್ತೆ. ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ ಎಂದು ಉಲ್ಲೇಖಿಸಲಾಗಿತ್ತು.
ಈ ಬಗ್ಗೆ ಚಿಕ್ಕೋಡಿ ಡಿಡಿಪಿಐ ಸೀತಾರಾಮು ಪ್ರತಿಕ್ರಿಯೆ ನೀಡಿದ್ದು, ವೈರಲ್ ಆಗಿರುವ ಉತ್ತರ ಪತ್ರಿಕೆ ಫೋಟೋ ನಮ್ಮ ವ್ಯಾಪ್ತಿಯದ್ದಲ್ಲ. ಇಂತಹ ಘಟನೆ ಗಮಕ್ಕೆ ಬಂದಿಲ್ಲ ಎಂದಿದ್ದಾರೆ.