ಇಡೀ ಗ್ರಾಮಕ್ಕೆ ಚಪ್ಪಲಿಗಳು ಕಳುಹಿಸಿ ಕೊಟ್ಟ ಪವನ್​ ಕಲ್ಯಾಣ್​; ಕಾರಣ ಹೀಗಿದೆ.. | Pawan Kalyan

dk - 2025-04-20T165819.644
Published on

Pawan Kalyan : ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಹಳ್ಳಿಯೊಂದರ ಪ್ರವಾಸದ ವೇಳೆ ಅನೇಕರು ಬರಿಗಾಗಲಲ್ಲಿ ನಡೆಯುವುದನ್ನು ಗಮನಿಸಿದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್​ ಕಲ್ಯಾಣ್, ಇದೀಗ ಇಡೀ ಗ್ರಾಮಕ್ಕೆ ಪಾದರಕ್ಷೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ.

ಜಿಲ್ಲೆಯ ಅರಕು ಮತ್ತು ಡುಂಬ್ರಿಗೂಡ ಪ್ರದೇಶದಲ್ಲಿ ಎರಡು ದಿನಗಳ ಕಾಲ ಪ್ರವಾಸಕೈಗೊಂಡಿದ್ದ ಪವನ್​ ಕಲ್ಯಾಣ್​, ಸ್ಥಳೀಯ ಸಮಸ್ಯೆಗಳನ್ನು ಎಎಸ್​ಆರ್​ನ ​ಡುಂಬ್ರಿಗೂಡ ಮಂಡಲದ ಪೆದಪಾಡು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮದ ಜನರನ್ನು ನೋಡಿದ ಪವನ್​, ಬಹತೇಕರ ಕಾಲಲಲ್ಲಿ ಚಪ್ಪಲಿ ಧರಿಸಿದೇ ಬಂದಿರುವುದನ್ನು ಡಿಸಿಎಂ ಪವನ್ ಗಮನಿಸಿದ್ದಾರೆ. ​

ಇದೇ ಸಮಯದಲ್ಲಿ ಪಂಗಿ ಮಿಥು ಎಂಬ ವೃದ್ಧ ಮಹಿಳೆಯನ್ನು ಭೇಟಿಯಾದರು, ಅವರಿಗೆ ಪಾದರಕ್ಷೆಗಳಿಲ್ಲ. ಹಳ್ಳಿಯಲ್ಲಿ ಇನ್ನೂ ಹಲವರು ಬರಿಗಾಲಿನಲ್ಲಿ ಇರುವುದನ್ನು ಅವರು ಗಮನಿಸಿದರು. ಇದರಿಂದ ಭಾವುಕರಾದ ಡಿಸಿಎಂ, ಸುಮಾರು 350 ಜನರು ಅಲ್ಲಿ ವಾಸಿಸುತ್ತಿದ್ದಾರೆಂದು ತಿಳಿದ ನಂತರ, ಎಲ್ಲರಿಗೂ ಚಪ್ಪಲಿ ವ್ಯವಸ್ಥೆ ಮಾಡುವಂತೆ ತಮ್ಮ ಕಚೇರಿಗೆ ಸೂಚಿಸಿದ್ದಾರೆ. ಇದೀಗ ಗ್ರಾಮದ ಎಲ್ಲ ಜನರಿಗೆ ಪಾದರಕ್ಷೆಗಳು ತಲುಪಿದ್ದು, ಜನರು ಪವನ್​ಗೆ ಧನ್ಯವಾದ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net