

Vaibhav Suryavanshi : ವೈಭವ್ ಸೂರ್ಯವಂಶಿ ಇನ್ನೂ ಹುಡುಗ. ಆತನಿಗೆ ಕೇವಲ 14 ವರ್ಷ ವಯಸ್ಸಷ್ಟೇ. ಆದರೆ, ಆತ ಬ್ಯಾಟಿಂಗ್ ಮಾಡಿದ ರೀತಿಯಂತೂ ಅದ್ಭುತವಾಗಿತ್ತು. ಹೌದು ಪ್ರಸ್ತುತ ನಡೆಯುತ್ತಿರುವ ಐಪಿಎಲ್ ನಲ್ಲಿ ಪದಾರ್ಪಣೆ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಮಿಂಚಿನಂತೆ ಆಡಿದ್ದಾನೆ. ಈ ಕುರಿತು ಇತನ ಬಗ್ಗೆ ಇದೀಗ ಗೂಗಲ್ ಸಿಇಒ ಸುಂದರ್ ಪಿಚೈ ಮಾತನಾಡಿದ್ದಾರೆ.
ಏ.19ರಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡದ ಪರ ಆಡಿದ ವೈಭವ್ ಸೂರ್ಯನ ಆಟವನ್ನು ಸುಂದರ್ ಪಿಚೈ ಲೈವ್ ಆಗಿ ವಿಕ್ಷಣೆ ಮಾಡಿದ್ದಾರೆ. ಈ ವಿಷಯವನ್ನು ಸ್ವತ ಪಿಚೈ ಹೇಳಿಕೊಂಡಿದ್ದಾರೆ.
ಹೌದು, ಶಾರ್ದೂಲ್ ಠಾಕೂರ್ ಅವರ ಮೊದಲ ಎಸೆತದಲ್ಲಿ ಅದ್ಭುತ ಸಿಕ್ಸ್ ಸಿಡಿಸಿದ್ದ ಈ ಯುವಕನ ನಿರ್ಭೀತ ಬ್ಯಾಟಿಂಗ್ ಪ್ರದರ್ಶನವನ್ನು ಪಿಚೈ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಶ್ಲಾಘಿಸಿದ್ದಾರೆ. "ಐಪಿಎಲ್‌ನಲ್ಲಿ 8ನೇ ತರಗತಿಯ ವಿದ್ಯಾರ್ಥಿಯ ಆಟವನ್ನು ನೋಡಲು ಎಚ್ಚರವಾಯಿತು!!!! ಎಂತಹ ಚೊಚ್ಚಲ ಪಂದ್ಯ!" ಎಂದು ಪಿಚೈ ಅವರ ಪೋಸ್ಟ್ ಹಂಚಿಕೊಂಡಿದ್ದಾರೆ.
ವೈಭವ್ ತನ್ನ ಮೊದಲ ಪಂದ್ಯದಲ್ಲಿ ಸಿಕ್ಸರ್‌ನೊಂದಿಗೆ ಇನ್ನಿಂಗ್ಸ್ ಪ್ರಾರಂಭಿಸಿದ ಅತ್ಯಂತ ಕಿರಿಯ ಆಟಗಾರನಾಗಿದ್ದು, ರಾಜಸ್ಥಾನ ರಾಯಲ್ಸ್ ತಂಡವು ಈ 14 ವರ್ಷದ ಹುಡುಗನನ್ನು ಹರಾಜಿನಲ್ಲಿ 1.10 ಕೋಟಿ ರೂ.ಗೆ ಖರೀದಿಸಿತು.
ವೈಭವ್ ಕೇವಲ 14 ವರ್ಷ ವಯಸ್ಸಿನವನು. ಆದರೆ ಅವನು ಆಡುವ ರೀತಿ ಅದ್ಭುತ ಎಂದು ಹೇಳಲಾಗುತ್ತದೆ. ವೈಭವ್ ಒಬ್ಬ ಅನುಭವಿ ಬ್ಯಾಟ್ಸ್‌ಮನ್‌ನಂತೆ ಆಡುವ ರೀತಿ ಆಶ್ಚರ್ಯಕರವಾಗಿದೆ. ಎಲ್ಲರೂ ಅವನ ಬ್ಯಾಟಿಂಗ್‌ಗೆ ಮಾರುಹೋಗಿದ್ದಾರೆ. ಅನುಭವಿ ಮತ್ತು ಅಸಾಧಾರಣ ಬೌಲರ್‌ಗಳನ್ನು ಹಲವು ಬಾರಿ ಎದುರಿಸಿದ ರೀತಿಯಲ್ಲೇ ಈ 14 ವರ್ಷದ ಹುಡುಗ ತುಂಬಾ ಆತ್ಮವಿಶ್ವಾಸದಿಂದ ಆಡಿದನು. ಅವನ ಹೊಡೆತಗಳು ಎಲ್ಲರನ್ನೂ ಬೆರಗುಗೊಳಿಸಿದವು.ಇನ್ನು ಈ ಪಂದ್ಯದಲ್ಲಿ ವೈಭವ್ 20 ಎಸೆತಗಳಲ್ಲಿ 34 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳು ಸೇರಿದ್ದವು.(ಏಜೆನ್ಸೀಸ್)