

Vaibhav Suryavanshi : ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
14 ವರ್ಷ 23 ದಿನಗಳ ವಯಸ್ಸಿನಲ್ಲಿ ಐಪಿಎಲ್ 2025ರಲ್ಲಿ ವೈಭವ್ ಅವರು ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದರು. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯವನ್ನು ಆಡಿದ ವೈಭವ್, 20 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 34 ರನ್ ಗಳಿಸಿದರು. ಬಿಹಾರದವರಾದ ವೈಭವ್ ಅವರನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ರಾಜಸ್ಥಾನವು 1.10 ಕೋಟಿ ರೂ.ಗೆ ಖರೀದಿಸಿತು. ಆ ಸಮಯದಲ್ಲಿ ಅವರು ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಸಹ ಸೃಷ್ಟಿಸಿದರು.
ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರನ ದಾಖಲೆಯನ್ನು ಈ ಹಿಂದೆ ರೇ ಬರ್ಮನ್ (16 ವರ್ಷ 157 ದಿನಗಳು) ಹೊಂದಿದ್ದರು. ಇದೀಗ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಪರ ಆಡಿದಾಗ ವೈಭವ್ ಸೂರ್ಯವಂಶಿ ಬರ್ಮನ್ ಅವರ ದಾಖಲೆಯನ್ನು ಮುರಿದರು.
ಮುಜೀಬುರ್ ರೆಹಮಾನ್ (17 ವರ್ಷ 11 ದಿನಗಳು), ರಿಯಾನ್ ಪರಾಗ್ (17 ವರ್ಷ 152 ದಿನಗಳು), ಸರ್ಫರಾಜ್ ಖಾನ್ (17 ವರ್ಷ 182 ದಿನಗಳು), ವಾಷಿಂಗ್ಟನ್ ಸುಂದರ್ (17 ವರ್ಷ 199 ದಿನಗಳು), ರಾಹುಲ್ ಚಾಹರ್ (17 ವರ್ಷ 247 ದಿನಗಳು), ಅಭಿಷೇಕ್ ಶರ್ಮಾ (17 ವರ್ಷ 250 ದಿನಗಳು), ಮತ್ತು ಇಶಾನ್ ಕಿಶನ್ (17 ವರ್ಷ 262 ದಿನಗಳು) ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.
* ವೈಭವ್ ಸೂರ್ಯವಂಶಿ (14 ವರ್ಷ 23 ದಿನಗಳು) - ರಾಜಸ್ಥಾನ್ ರಾಯಲ್ಸ್, 2025
* ಪ್ರಯಾಸ್ ರೇ ಬರ್ಮನ್ (16 ವರ್ಷ 157 ದಿನಗಳು) - ರಾಯಲ್ ಚಾಲೆಂಜರ್ಸ್ ಬೆಂಗಳೂರು, 2019
* ಮುಜೀಬುರ್ ರೆಹಮಾನ್ (17 ವರ್ಷ 11 ದಿನಗಳು) - ಪಂಜಾಬ್ ಕಿಂಗ್ಸ್, 2018
* ರಿಯಾನ್ ಪರಾಗ್ (17 ವರ್ಷ 152 ದಿನಗಳು) - ರಾಜಸ್ಥಾನ ರಾಯಲ್ಸ್, 2019
* ಪ್ರದೀಪ್ ಸಾಂಗ್ವಾನ್ (17 ವರ್ಷ 179 ದಿನಗಳು) - ಡೆಲ್ಲಿ ಡೇರ್‌ಡೆವಿಲ್ಸ್, 2008
* ಸರ್ಫರಾಜ್ ಖಾನ್ (17 ವರ್ಷ 182 ದಿನಗಳು) - ರಾಯಲ್ ಚಾಲೆಂಜರ್ಸ್ ಬೆಂಗಳೂರು, 2015
* ವಾಷಿಂಗ್ಟನ್ ಸುಂದರ್ (17 ವರ್ಷ 199 ದಿನಗಳು) - ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, 2017
* ರಾಹುಲ್ ಚಹಾರ್ (17 ವರ್ಷ 247 ದಿನಗಳು) - ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, 2017
* ಅಭಿಷೇಕ್ ಶರ್ಮಾ (17 ವರ್ಷ 250 ದಿನಗಳು) - ದೆಹಲಿ ಕ್ಯಾಪಿಟಲ್ಸ್, 2018
* ಇಶಾನ್ ಕಿಶನ್ (17 ವರ್ಷ 262 ದಿನಗಳು) – ಗುಜರಾತ್ ಲಯನ್ಸ್, 2017