

Kamal Haasan: ಸಕಲಕಲಾವಲ್ಲಭ ಕಮಲ್ ಹಾಸನ್, ಸಿಂಬು ಮತ್ತು ತ್ರಿಷಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಮಣಿರತ್ನಂ ನಿರ್ದೇಶನದ ಈ ಚಿತ್ರದ 'ಜಿಂಗುಚಾ' ಹಾಡು ಇತ್ತೀಚೆಗಷಷ್ಟೇ ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಂದಹಾಗೆ ಜಿಂಗುಚಾ ಹಾಡು ಬಿಡುಗಡೆ ಸಮಾರಂಭದಲ್ಲಿ, ಎಲ್ಲ ಕಲಾವಿದರಿಗೆ ಮದುವೆಯ ಬಗ್ಗೆ ಪ್ರಶ್ನಿಸಲಾಯಿತು. ಈ ವೇಳೆ ತ್ರಿಷಾ ಅವರು ಮದುವೆಯಲ್ಲಿ ನಂಬಿಕೆಯಿಲ್ಲ ಎಂದು ಹೇಳಿದರು. ತಾನು ಮದುವೆಯಾಗುತ್ತಿನೋ? ಇಲ್ಲವೋ? ಎಂಬುದು ಇಲ್ಲಿ ಮುಖ್ಯವಲ್ಲ ಎಂದರು.
ಕಮಲ್ ಹಾಸನ್ ಅವರು ಈ ಹಿಂದೆ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡರು. ಅದು 15 ವರ್ಷಗಳ ಹಿಂದಿನದು ಎಂದು ನಾನು ಭಾವಿಸುತ್ತೇನೆ. ಸಂಸದ ಜಾನ್ ಬ್ರಿಟಾಸ್ ನನ್ನ ಒಳ್ಳೆಯ ಸ್ನೇಹಿತ. ಕಾಲೇಜು ಸಮಾರಂಭವೊಂದರಲ್ಲಿ ವಿದ್ಯಾರ್ಥಿಗಳ ಮುಂದೆಯೇ ನನಗೆ ಒಂದು ಪ್ರಶ್ನೆ ಕೇಳಿದರು. ನಾನು ಒಳ್ಳೆಯ ಬ್ರಾಹ್ಮಣ ಕುಟುಂಬದಿಂದ ಬಂದು ಎರಡು ಬಾರಿ ಮದುವೆಯಾಗಲು ಕಾರಣವೇನು ಎಂದು ಪ್ರಶ್ನಿಸಿದರು. ಒಳ್ಳೆಯ ಕುಟುಂಬ ಮತ್ತು ಮದುವೆಯ ನಡುವಿನ ಸಂಬಂಧವೇನು? ಎಂದು ನಾನು ಮರು ಪ್ರಶ್ನೆ ಮಾಡಿದೆ.
ನೀವು ರಾಮನನ್ನು ಪೂಜಿಸುತ್ತೀರಿ ಮತ್ತು ನೀವು ಅವನಂತೆ ಬದುಕಬೇಕು ಎಂದರು. ಅದಕ್ಕೆ ನಾನು ಕೊಟ್ಟ ಉತ್ತರವೆಂದರೆ, ಮೊದಲನೆಯದಾಗಿ ನಾನು ಯಾವುದೇ ದೇವರನ್ನು ಪ್ರಾರ್ಥಿಸುವುದಿಲ್ಲ. ನಾನು ರಾಮನ ಹೆಜ್ಜೆಗಳನ್ನು ಅನುಸರಿಸುವುದಿಲ್ಲ ಬದಲಾಗಿ ನಾನು ರಾಮನ ತಂದೆಯ (ದಶರಥನ ಮೂವರು ಪತ್ನಿಯರು) ಹೆಜ್ಜೆಗಳನ್ನು ಅನುಸರಿಸುತ್ತೇನೆ ಎಂದು ಉತ್ತರಿಸಿದ ಎಂದರು.
ಅಂದಹಾಗೆ, ಕಮಲ್ ಹಾಸನ್ ಅವರು 1978ರಲ್ಲಿ ನಾಯಕಿ ವಾಣಿ ಗಣಪತಿ ಅವರನ್ನು ವಿವಾಹವಾದರು. ಒಂದು ದಶಕದ ನಂತರ, ಅವರಿಂದ ವಿಚ್ಛೇದನ ಪಡೆದು 1988ರಲ್ಲಿ ಸಾರಿಕಾ ಅವರನ್ನು ವಿವಾಹವಾದರು. ಅದಕ್ಕೂ ಮೊದಲೇ ಅಂದರೆ 1986ರಲ್ಲಿ ಅವರ ಮೊದಲ ಮಗಳು ಶ್ರುತಿ ಹಾಸನ್ ಜನಿಸಿದರು ಮತ್ತು 1991 ರಲ್ಲಿ ತಮ್ಮ ಎರಡನೇ ಮಗಳು ಅಕ್ಷರಾ ಜನಿಸಿದರು. ಈ ಸಂಬಂಧವೂ ಕೂಡ ಉಳಿಯಲಿಲ್ಲ. 2002ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. 2004 ರಲ್ಲಿ ಡಿವೋರ್ಸ್ ಅಂತಿಮಗೊಂಡಿತು. ನಂತರ 2005 ರಿಂದ 2016 ರವರೆಗೆ ನಟಿ ಗೌತಮಿಯೊಂದಿಗೆ ಡೇಟಿಂಗ್ ಮಾಡಿದರು.
ಅಂದಹಾಗೆ, ಜೂನ್ 5 ರಂದು ಥಗ್ ಲೈಫ್ ಸಿನಿಮಾ ಬಿಡುಗಡೆಯಾಗಲಿದೆ. (ಏಜೆನ್ಸೀಸ್)