ಎಲ್ಲ ಹುಡ್ಗೀರಿಗೆ ಇಂಥಾ ಕೆಟ್ಟ ಅನುಭವ ಆಗಿರುತ್ತೆ: ರೈಲಿನಲ್ಲಿ ಆ ರಾತ್ರಿ ನಡೆದ ಘಟನೆ ಬಿಚ್ಚಿಟ್ಟ ಮಾಳವಿಕಾ! Malavika Mohanan

Malavika Mohanan
Published on

Malavika Mohanan : 2013ರಲ್ಲಿ ತೆರೆಕಂಡ ಪಟ್ಟಂ ಪೋಲ್​ ಸಿನಿಮಾ ಮೂಲಕ ಸಿನಿಮಾ ವೃತ್ತಿ ಜೀವನವನ್ನು ಆರಂಭಿಸಿದ ಮಲಯಾಳಿ ಬ್ಯೂಟಿ ಮಾಳವಿಕಾ ಮೋಹನನ್​, ಇದೀಗ ದಕ್ಷಿಣ ಭಾರತ ಸಿನಿರಂಗದ ಪ್ರಮುಖ ನಟಿಯರ ಸಾಲಲ್ಲಿ ಒಬ್ಬರಾಗಿದ್ದಾರೆ. ಅನೇಕ ದೊಡ್ಡ ದೊಡ್ಡ ಸಿನಿಮಾಗಳ ಭಾಗವಾಗಿರುವ ಮಾಳವಿಕಾ, ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ಕೂಡ ಹೌದು.

ಪ್ರಸ್ತುತ ಮಾಳವಿಕಾ ಅವರು ಸತ್ಯನ್ ಅಂತಿಕಾದ್ ಮತ್ತು ಮೋಹನ್ ಲಾಲ್ ನಟಿಸಿರುವ ಹೃದಯಪೂರ್ವತಂ ಚಿತ್ರದಲ್ಲಿ ನಿರತರಾಗಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ಒಮ್ಮೆ ರೈಲಿನಲ್ಲಿ ಸಂಭವಿಸಿದ ಕಹಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

ಇದು ವರ್ಷಗಳ ಹಿಂದೆ ನಡೆದ ಘಟನೆ. ಮಾಳವಿಕಾ ಮತ್ತು ಆಕೆಯ ಫ್ರೆಂಡ್ಸ್​ ರಾತ್ರಿ ಲೋಕಲ್ ರೈಲಿನ ಪ್ರಥಮ ದರ್ಜೆಯ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾಳವಿಕಾ ಕಿಟಕಿಯ ಗ್ರಿಲ್ ಬಳಿಯ ಸೀಟಿನಲ್ಲಿ ಕುಳಿತಿದ್ದರು. ಈ ವೇಳೆ ಒಬ್ಬ ವ್ಯಕ್ತಿ ಆಕೆಯನ್ನು ನೋಡಿ, ಗ್ರಿಲ್‌ಗೆ ತನ್ನ ಮುಖವನ್ನು ಒತ್ತಿ, ನನಗೊಂದು ಮುತ್ತು ಕೊಡಬಹುದೇ ಎಂದು ಮಾಳವಿಕಾರನ್ನು ಕೇಳಿದನಂತೆ.

ಆಗ ನನಗೆ ಕೇವಲ ಹತ್ತೊಂಬತ್ತು ಅಥವಾ ಇಪ್ಪತ್ತು ವರ್ಷ ವಯಸ್ಸು. ಆ ಸಮಯದಲ್ಲಿ ನಾನು ಸಂಪೂರ್ಣವಾಗಿ ಸ್ತಬ್ಧಳಾದೆ. ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ನಾನು ಏನಾದರೂ ಅಂದ್ರೆ ಆತ ರೈಲಿನ ಒಳಗೆ ಬಂದರೆ ಏನು ಮಾಡೋದು ಅನ್ನೋ ಭಯವಿತ್ತು. ತುಂಬಾ ಗಾಬರಿಯಾಗಿದ್ದೆ. ಮುಂದಿನ ನಿಲ್ದಾಣವನ್ನು ತಲುಪಲು ನನಗೆ ಹತ್ತು ನಿಮಿಷಗಳು ಬೇಕಾಯಿತು. ಅಲ್ಲಿಯವರೆಗೂ ಭಯದಲ್ಲೇ ಇದ್ದೆ. ಇಂಥಾ ಕೆಟ್ಟ ಅನುಭವಗಳು ಎಲ್ಲ ಹುಡುಗಿಯರಿಗೂ ಆಗಿರುತ್ತದೆ ಎಂದು ಮಾಳವಿಕಾ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net