ತಾಯಿಯಾಗ್ತಿದ್ದಾರಾ ಕತ್ರೀನಾ ಕೈಫ್​? ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ …

Katrina Kaif and Vicky Kauhsal
Published on

ಬೆಂಗಳೂರು: ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಾಲ್​ ದಂಪತಿ ಇತ್ತೀಚೆಗೆ ಅದೊಂದು ಬೆಳಿಗ್ಗೆ ಬೇಗ ಎದ್ದು, ಭಕ್ತಿಯಿಂದ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋಗಿದ್ದಾರೆ. ಗಣಪತಿ ಬಪ್ಪನಿಗೆ ಭಕ್ತಿಯಿಂದ ಕೈ ಮುಗಿದು, ನಮಸ್ಕಾರ ಮಾಡಿ ಬಂದಿದ್ದಾರೆ. ಈ ವಿಸಿಟ್​ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇದರಲ್ಲಿ ಚರ್ಚೆ ಏನಿದೆ ಎಂಬ ಪ್ರಶ್ನೆ ಬರಬಹುದು. ಹೊಸ ವರ್ಷವನ್ನು ಕೆಲವರು ದೇವಸ್ಥಾನಕ್ಕೆ ಹೋಗುವ ಮೂಲಕ ಶುರು ಮಾಡುವುದು ಸಹಜ. ಅದೇ ರೀತಿ ವಿಕ್ಕಿ ಮತ್ತು ಕತ್ರೀನಾ ಸಹ ಶುರು ಮಾಡಿದ್ದಾರೆ. ಆದರೆ, ಇದು ಬೇರೆ ತಿರುವು ಪಡೆದುಕೊಂಡಿದೆ. ಕತ್ರೀನಾ ತಾಯಿಯಾಗುತ್ತಿದ್ದಾರೆ ಮತ್ತು ಅದೇ ಕಾರಣಕ್ಕೆ ಅವರು ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ ಎಂಬ ಚರ್ಚೆ ಇದೀಗ ಸೊಷಿಯಲ್​ ಮೀಡಿಯಾದಲ್ಲಿ ನಡೆಯುತ್ತಿದೆ.

ಕತ್ರೀನಾ ತಾಯ್ತನದ ಬಗ್ಗೆ ಅಷ್ಟೆಲ್ಲ ಚರ್ಚೆಗಳಾಗುತ್ತಿದ್ದರೂ, ಅವರು ಮಾತ್ರ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಸಾಮಾನ್ಯವಾಗಿ ಸೋಷಿಯಲ್​ ಮೀಡಿಯಾದಿಂದ ದೂರವೇ ಇರುವ ಕತ್ರೀನಾಗೆ, ತಮ್ಮ ಬಗ್ಗೆ ಇಂಥದ್ದೊಂದು ಚರ್ಚೆ ಆಗುತ್ತಿದೆ ಎಂಬ ವಿಷಯವಾದರೂ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಜನ ಮಾತ್ರ ಅನೇಕ ಊಹಾಪೋಹಗಳನ್ನು ಹುಟ್ಟುಹಾಕುತ್ತಿದ್ದಾರೆ.

ಕತ್ರೀನಾ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿರುವುದು ಇದು ಮೊದಲೇನಲ್ಲ. ವಿಕ್ಕಿ ಕೌಶಲ್​ ಮತ್ತು ಕತ್ರೀನಾ ಮದುವೆಯಾಗಿದ್ದು 2021ರ ಡಿಸೆಂಬರ್​ನಲ್ಲಿ. ಅದಾಗಿ ಆರು ತಿಂಗಳಲ್ಲೇ ಅಂದರೆ ಕಳೆದ ವರ್ಷದ ಜುಲೈನಲ್ಲೇ ಕತರೀನಾ ತಾಯಿಯಾಗುತ್ತಿದ್ದಾರಂತೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಅದು ಸುಳ್ಳಾಯಿತು. ಈಗ ಮತ್ತೊಮ್ಮೆ ಅವರ ಬಗ್ಗೆ ಅದೇ ತರಹದ ಸುದ್ದಿಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net