

ಹೈದರಾಬಾದ್: ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಆರೋಗ್ಯ ಬಹಳ ಹದಗೆಟ್ಟಿದೆ, ಅದರಿಂದಾಗಿ ಅವರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬಂತಹ ಸುದ್ದಿಗಳು ಇತ್ತೀಚೆಗೆ ಕೇಳಿ ಬಂದಿದ್ದವು. ಆದರೆ, ಸಮಂತಾ ಮಾತ್ರ ತನಗೆ ಏನೂ ಆಗೇ ಇಲ್ಲದಂತೆ ಓಡಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇನ್ನು ಕೆಲವೇ ದಿನಗಳಲ್ಲಿ ಸಮಂತಾ ಪುನಃ ನಟಿಸುತ್ತಿರುವ ಸುದ್ದಿ ಹೊರಬಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.
ಇದನ್ನೂ ಓದಿ: ‘ಆರಾಮ್ ಅರವಿಂದ್ ಸ್ವಾಮಿ’ಗೆ ಜತೆಯಾದ ಮಿಲನಾ ನಾಗರಾಜ್ …
ಇದಕ್ಕೂ ಮುನ್ನ, ಕೆಲವು ತಿಂಗಳುಗಳ ಹಿಂದೆ ಮಯೋಸಿಟಿಸ್ ಎಂಬ ಖಾಯಿಲೆಯಿಂದ ತಾನು ಬಳಲುತ್ತಿರುವುದಾಗಿ ಸಮಂತಾ ಹೇಳಿಕೊಂಡಿದ್ದರು. ಯಾವಾಗ ಸಮಂತಾ ತಮಗೆ ಅನಾರೋಗ್ಯ ಎಂದು ಹೇಳಿಕೊಂಡರೋ, ಆಗ ಹಲವು ಊಹಾಪೋಹಗಳು ಎದ್ದವು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ ‘ಕಾಂತಾರ’ …
'ನನ್ನ ಆರೋಗ್ಯದ ಬಗ್ಗೆ ಕೆಲವು ಲೇಖನಗಳನ್ನು ಓದಿದೆ. ನನಗಿರುವ ಖಾಯಿಲೆಯು ನನ್ನ ಜೀವನವನ್ನೇ ತೆಗೆದುಬಿಡುತ್ತದೇನೋ ಎಂದು ಕೆಲವರು ಭಯ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ನಾನಿರುವ ಪರಿಸ್ಥಿತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ನಾನಿನ್ನೂ ಸತ್ತಿಲ್ಲ. ಅಷ್ಟೊಂದು ಆತಂಕಪಡುವ ಅವಶ್ಯಕತೆಯೂ ಇಲ್ಲ, ನನ್ನ ಆರೋಗ್ಯದ ಬಗ್ಗೆ ಗಾಳಿಸುದ್ದಿಗಳನ್ನು ಹರಡುವುದೂ ಅವಶ್ಯಕವಿಲ್ಲ' ಎಂದು ಹೇಳಿದ್ದಾರೆ.