ಶಿವಣ್ಣ ಆಯ್ತು; ಈಗ 'ಜೈಲರ್​' ಚಿತ್ರಕ್ಕೆ ಎಂಟ್ರಿ ಕೊಟ್ಟ ಮೋಹನ್​ ಲಾಲ್​

Rajanikanth - Mohan Lal
Published on

ಚೆನ್ನೈ: ರಜನಿಕಾಂತ್​ ಅಭಿನಯದ 'ಜೈಲರ್​' ಚಿತ್ರದಲ್ಲಿ ಶಿವರಾಜಕುಮಾರ್​ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಇದೀಗ ಬಂದಿರುವ ಸುದ್ದಿಯ ಪ್ರಕಾರ, ಮಲಯಾಳಂ ನಟ ಮೋಹನ್​ ಲಾಲ್​ ಸಹ ಚಿತ್ರಕ್ಕೆ ಸೇರ್ಪಡೆಯಾಗಿದ್ದು, ಅವರು ಸಹ ಒಂದು ವಿಶೇಷ ಪಾತ್ರ ಮಾಡಲಿದ್ದಾರಂತೆ.

ಹೌದು, 'ಜೈಲರ್​' ಚಿತ್ರದಲ್ಲಿ ಮೋಹನ್​ ಲಾಲ್​ ನಟಿಸುತ್ತಾರೆ ಎಂಬ ಹಾಟ್​ ಸುದ್ದಿಯೊಂದು ಇದೀಗ ಕೇಳಿ ಬಂದಿದೆ. ಇದೊಂದು ಅತಿಥಿ ಪಾತ್ರವಾಗಿದ್ದು, ಎರಡ್ಮೂರು ದಿನಗಳ ಕಾಲ ಮೋಹನ್​ ಲಾಲ್​ ಭಾಗದ ಚಿತ್ರೀಕರಣ ನಡೆಯಲಿದೆಯಂತೆ. ಮೂಲಗಳ ಪ್ರಕಾರ, ಜ.8ರಿಂದ ರಜನಿಕಾಂತ್​ ಮತ್ತು ಮೋಹನ್​ ಲಾಲ್​ ಅವರ ಭಾಗದ ದೃಶ್ಯಗಳ ಚಿತ್ರೀಕರಣ ನಡೆಯಲಿದೆ.

‘'ಜೈಲರ್​' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ ಕೆಲವು ತಿಂಗಳುಗಳೇ ಆಗಿದ್ದು, ಶೇ. 50ರಷ್ಟು ಭಾಗದ ಚಿತ್ರೀಕರಣ ಈಗಾಗಲೇ ಮುಗಿದಿದೆಯಂತೆ. ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ನಡೆದ ಚಿತ್ರೀಕರಣದಲ್ಲಿ ಶಿವಣ್ಣ ಭಾಗವಹಿಸಿ, ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಈಗ ಮೋಹನ್​ ಲಾಲ್​ ಸಹ ಸೇರ್ಪಡೆಯಾಗಿದ್ದು, ದಕ್ಷಿಣ ಭಾರತದ ಚಿತ್ರರಂಗದ ಮೂರು ಪ್ರಮುಖ ಸ್ಟಾರ್​ ನಟರು ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

'ಜೈಲರ್​' ಚಿತ್ರವು ರಜನಿಕಾಂತ್​ ಅಭಿನಯದ 169ನೇ ಚಿತ್ರವಾಗಿದ್ದು, ಅವರ ಜತೆಗೆ ರಮ್ಯಾ ಕೃಷ್ಣ, ಪ್ರಿಯಾಂಕಾ ಅರುಳ್​ ಮೋಹನ್​ ಮುಂತಾದವರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸನ್​ ಪಿಕ್ಚರ್ಸ್​ ಸಂಸ್ಥೆಯು ನಿರ್ಮಿಸುತ್ತಿದ್ದು, ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net