Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ, ಅದು ಕನಸು. ಕನಸು ಕಾಣುವುದು ಸಾಮಾನ್ಯ. ಕೆಲವೊಮ್ಮೆ ಕನಸಿನಲ್ಲಿ ಬೆಟ್ಟಗಳು, ನದಿಗಳು, ಕಾಡುಗಳು, ವಸ್ತುಗಳು ಮತ್ತು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಹಾವು, ಹುಲಿ, ಸಿಂಹ ಮತ್ತು ಆನೆಗಳು ಕಾಣಸಿಕೊಂಡಾಗ ಕೆಲವರು ಭಯ ಪಡುತ್ತಾರೆ. ಮರುದಿನ ಬೆಳಗ್ಗೆ ಎದ್ದಾಗ ಅದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಅಲ್ಲದೆ, ಏನಾಗುತ್ತದೆ ಎಂದು ಚಿಂತಿಸುತ್ತಾರೆ.
ಕನಸಿನಲ್ಲಿ ಏನೇ ಕಂಡರು ಅದರ ಹಿಂದೆ ಒಂದು ಸೂಚನೆ ಇರುತ್ತದೆ ಎಂದು ದೊಡ್ಡವರು ಹೇಳುವುದನ್ನು ನೀವು ಕೇಳುತ್ತೀರುತ್ತೀರಿ. ಅದೇ ರೀತಿ ಹಾವುಗಳು ಕಂಡರೂ ಅಲ್ಲೊಂದು ಸೂಚನೆ ಇದೆಯಂತೆ. ಶಾಸ್ತ್ರಗಳ ಪ್ರಕಾರ, ಕನಸಿನಲ್ಲಿ ಹಾವು ಕಾಣಿಸಿಕೊಂಡರೆ, ನಮ್ಮ ಭವಿಷ್ಯದ ಬಗ್ಗೆ ನಾವು ಅನೇಕ ಮುನ್ಸೂಚನೆಗಳನ್ನು ತಿಳಿದುಕೊಳ್ಳಬಹುದು ಎಂದು ಹೇಳಲಾಗುತ್ತದೆ.
ನಿರ್ದಿಷ್ಟವಾಗಿ ಹೇಳುವುದಾದರೆ ಕನಸಿನಲ್ಲಿ ಹಾವುಗಳು ನಮಗೆ ಯಾವ ರೀತಿಯ ಸೂಚನೆಗಳನ್ನು ನೀಡುತ್ತವೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ, ಹಾವುಗಳು ನಮಗೆ ಕೆಟ್ಟದ್ದನ್ನು ಸಹ ತಿಳಿಸಿಕೊಡುತ್ತವೆ. ಹೀಗಾಗಿ ನಿಮ್ಮ ಕನಸಿನಲ್ಲಿ ಹಾವು ಕಂಡರೆ ಯಾವ ರೀತಿಯ ಸೂಚನೆಗಳು ಸಿಗುತ್ತವೆ ಎಂಬುದನ್ನು ಮುಂದಿನ ನಾವೀಗ ತಿಳಿಯೋಣ.
ಹಾವಿನ ಕನಸು ಕಂಡರೆ ಅದೃಷ್ಟವೇ?
1. ನಿಮ್ಮ ತಲೆಯ ಮೇಲೆ ಹಾವು ಇದೆ ಎಂದು ನೀವು ಕನಸು ಕಂಡರೆ, ಭವಿಷ್ಯದಲ್ಲಿ ನಿಮ್ಮ ಖ್ಯಾತಿ ಮತ್ತು ಗೌರವವನ್ನು ಹೆಚ್ಚಿಸುವ ರೀತಿಯಲ್ಲಿ ನೀವು ವರ್ತಿಸಬೇಕು ಎಂದರ್ಥ. ಅಲ್ಲದೆ, ಹಾವು ನಿಮ್ಮನ್ನು ನುಂಗಿದಂತಹೆ ಕನಸು ಕಂಡರೆ, ನೀವು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುವಿರಿ ಎಂದರ್ಥ.
2. ಹಾವು ನಿಮ್ಮನ್ನು ಬೇಟೆಯಾಡಿ ಕಚ್ಚುತ್ತಿರುವ ಕನಸು ಕಂಡರೆ ನೀವು ಗೆಲುವಿನ ಹತ್ತಿರ ಇದ್ದೀರಿ ಎಂದರ್ಥ. ನಿಮ್ಮ ಶತ್ರುಗಳನ್ನು ಸೋಲಿಸುವ ಸಮಯ ಬಂದಿದೆ ಎಂದರ್ಥ.
3. ನಿಜ ಜೀವನದಲ್ಲಿ ಬಿಳಿ ಹಾವುಗಳನ್ನು ನೋಡುವುದು ತುಂಬಾ ಅಪರೂಪ. ಆದರೆ, ಕೆಲವರು ಕನಸಿನಲ್ಲಿ ಬಿಳಿ ಹಾವುಗಳನ್ನು ನೋಡುತ್ತಾರೆ. ಇದನ್ನು ನೋಡಿದರೆ ಹಣ ಸಿಗುತ್ತದೆ ಮತ್ತು ನಿಮಗೆ ಸಂಭವಿಸುವ ಎಲ್ಲವೂ ಒಳ್ಳೆಯದಕ್ಕಾಗಿ ಸಂಭವಿಸುತ್ತದೆ ಎಂದರ್ಥ.
4. ಹಾವು ತನ್ನ ಚರ್ಮವನ್ನು ಉದುರಿಸುವ ಅಂದರೆ, ಪೊರೆ ಕಳಚುವ ಕನಸು ಕಂಡರೆ ನಿಮಗೆ ಲಾಭವಾಗುತ್ತದೆ ಎಂದರ್ಥ.
5. ನೀವು ಚಿನ್ನದ ಅಥವಾ ಬಿಳಿ ಹಾವಿನ ಕನಸು ಕಂಡರೆ, ನಿಮಗೆ ಅದೃಷ್ಟ ಖುಲಾಯಿಸಲಿದೆ ಎಂದರ್ಥ. ನಿಮ್ಮ ಪೂರ್ವಜರ ಆಶೀರ್ವಾದವೂ ನಿಮಗೆ ದೊರೆಯುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.
ನಿಮ್ಮ ಕನಸಿನಲ್ಲಿ ಆನೆ ಕಾಣಿಸಿಕೊಂಡಿದೆಯೇ? ಇಲ್ಲಿದೆ ನೋಡಿ ನಿಮಗೆ ಖುಷಿಯಾಗುವ ಸಂಗತಿ | Elephant in a Dream