ನಿಮ್ಮ ಕನಸಿನಲ್ಲಿ ಆನೆ ಕಾಣಿಸಿಕೊಂಡಿದೆಯೇ? ಇಲ್ಲಿದೆ ನೋಡಿ ನಿಮಗೆ ಖುಷಿಯಾಗುವ ಸಂಗತಿ | Elephant in a Dream

Elephant in a Dream
Published on

Elephant in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ, ಅದು ಕನಸು. ಕನಸು ಕಾಣುವುದು ಸಾಮಾನ್ಯ. ಕೆಲವೊಮ್ಮೆ ಕನಸಿನಲ್ಲಿ ಬೆಟ್ಟಗಳು, ನದಿಗಳು, ಕಾಡುಗಳು, ವಸ್ತುಗಳು ಮತ್ತು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಹಾವು, ಹುಲಿ, ಸಿಂಹ ಮತ್ತು ಆನೆಗಳು ಕಾಣಸಿಕೊಂಡಾಗ ಕೆಲವರು ಭಯ ಪಡುತ್ತಾರೆ. ಮರುದಿನ ಬೆಳಗ್ಗೆ ಎದ್ದಾಗ ಅದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಅಲ್ಲದೆ, ಏನಾಗುತ್ತದೆ ಎಂದು ಚಿಂತಿಸುತ್ತಾರೆ.

ಕನಸಿನಲ್ಲಿ ಏನೇ ಕಂಡರು ಅದರ ಹಿಂದೆ ಒಂದು ಸೂಚನೆ ಇರುತ್ತದೆ ಎಂದು ದೊಡ್ಡವರು ಹೇಳುವುದನ್ನು ನೀವು ಕೇಳುತ್ತೀರುತ್ತೀರಿ. ಅದೇ ರೀತಿ ಆನೆ ಕಂಡರೂ ಅಲ್ಲೊಂದು ಸೂಚನೆ ಇದೆಯಂತೆ. ಅದೇನೆಂದರೆ, ಕನಸಿನಲ್ಲಿ ಆನೆ ಕಾಣಿಸಿಕೊಂಡರೆ ಒಳ್ಳೆಯದು ಎಂದು ಆಧ್ಯಾತ್ಮಿಕ ಗ್ರಂಥಗಳು ಹೇಳುತ್ತವೆ.

ಆನೆ ಕುಂಭಸ್ಥಳವನ್ನು ಲಕ್ಷ್ಮಿ ದೇವಿಯ ವಾಸಸ್ಥಾನ ಎಂದು ಹೇಳಲಾಗುತ್ತದೆ. ಆದ್ದರಿಂದ ಕನಸಿನಲ್ಲಿ ಆನೆಯನ್ನು ಕಂಡರೆ ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ. ಆನೆಯ ದರ್ಶನ ಮಾಡುವುದರಿಂದ ಬಡತನ ಮತ್ತು ದುಃಖ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಅದೃಷ್ಟವು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ.

ಪುಣ್ಯಕ್ಷೇತ್ರಗಳಲ್ಲಿ ಆನೆಯನ್ನು ದೇವರ ಸೇವೆಯಲ್ಲಿ ಬಳಸಲಾಗುತ್ತದೆ. ಗಣೇಶನು ಗಜ ಮುಖದಿಂದ ಮೊದಲ ಪೂಜೆಯನ್ನು ಸ್ವೀಕರಿಸುತ್ತಾನೆ ಮತ್ತು ಎಲ್ಲ ವಿಘ್ನಗಳನ್ನು ತೆಗೆದುಹಾಕುತ್ತಾನೆ. ಇಂತಹ ಆನೆ ಕನಸಿನಲ್ಲಿ ಕಂಡರೆ ಒಳ್ಳೆಯದು ಎಂದು ನಂಬಲಾಗಿದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net