ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ ಎಂದು ಹೇಳಲಾಗುತ್ತದೆ. ಪ್ರತಿಯೊಂದು ಮನೆಯಲ್ಲಿ ಹಲ್ಲಿಗಳಿರುವುದು ಬಹಳ ಸಹಜ ಸಂಗತಿಯಾಗಿದೆ. ಈ ಹಿಂದೆ ಜನರು ಹಲ್ಲಿಗಳ ಉಪಸ್ಥಿತಿಯನ್ನು ಆಧರಿಸಿ ಅವರು ವಾಸಿಸುವ ಸ್ಥಳಗಳ ಪರಿಸ್ಥಿತಿಯನ್ನು ಊಹಿಸುತ್ತಿದ್ದರು.
ಮನೆಯಲ್ಲಿ ಹಲ್ಲಿಗಳಿದ್ದರೆ ಶುಭವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಮನೆಗಳಲ್ಲಿ ಮರಿ ಹಲ್ಲಿಗಳು ಕಾಣಸಿಗುವುದು ತೀರಾ ವಿರಳ. ಒಂದು ವೇಳೆ ಕಾಣಿಸಿಕೊಂಡರೆ ವಾಸ್ತು ಶಾಸ್ತ್ರದ ಪ್ರಕಾರ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈ ಪೋಸ್ಟ್ನಲ್ಲಿ ನೀವು ನೋಡಬಹುದು.
ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರಗಳ ಪ್ರಕಾರ, ಮನೆಯಲ್ಲಿ ಮರಿ ಹಲ್ಲಿಗಳ ಉಪಸ್ಥಿತಿಯು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮರಿ ಹಲ್ಲಿಗಳ ಚಲನೆಯು ಭವಿಷ್ಯದಲ್ಲಿ ಸಂಭವಿಸುವ ಮಂಗಳಕರ ಘಟನೆಯ ಮುನ್ಸೂಚನೆಯಾಗಿದೆ. ಅಂದರೆ, ಆರ್ಥಿಕವಾಗಿ ಮನೆಯು ಬೆಳವಣಿಗೆಯಾಗಲಿದೆ ಎಂಬುದನ್ನು ಇದು ಸೂಚಿಸುತ್ತದೆ.
ಒಂದಕ್ಕಿಂತ ಹೆಚ್ಚು ಹಲ್ಲಿ ಮರಿಗಳನ್ನು ಒಟ್ಟಿಗೆ ನೋಡುವುದು ಅಪರೂಪದ ಘಟನೆ. ಇದರರ್ಥ ನೀವು ರಾಜಯೋಗವನ್ನು ಪಡೆಯಲಿದ್ದೀರಿ ಎಂದರ್ಥ. ಮೇಲಾಗಿ ಗಂಡು ಮತ್ತು ಹೆಣ್ಣು ಹಲ್ಲಿ ಮನೆಗೆ ಸೇರಿದರೆ ಪತಿ-ಪತ್ನಿಯರ ನಡುವಿನ ಸಮಸ್ಯೆಗಳೆಲ್ಲವೂ ದೂರವಾಗಿ ಸುಖಸಂತೋಷ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಹಲ್ಲಿ ಮರಿ ಕಂಡರೆ ಅನಿರೀಕ್ಷಿತವಾಗಿ ದುಡ್ಡು ಹೆಚ್ಚುತ್ತದೆ ಎಂದರ್ಥ.
ಮನೆಯಲ್ಲಿ ಹಲ್ಲಿ ಮರಿ ಕಂಡರೆ ಓಡಿಸಬೇಡಿ ಅಥವಾ ಕೊಲ್ಲಬೇಡಿ. ನೀವು ಅದನ್ನು ಕೊಂದರೆ, ನೀವು ಅಶುಭ ಫಲಿತಾಂಶಗಳನ್ನು ಎದುರು ನೋಡಬೇಕಾಗುತ್ತದೆ. ಭಾರಿ ಹಣದ ಕೊರತೆಗೆ ಕಾರಣವಾಗುತ್ತದೆ. ಆದರೆ, ಅಕಸ್ಮಾತ್ ಮನೆಯಲ್ಲಿ ಹಲ್ಲಿ ಮರಿ ಸತ್ತಿರುವುದು ಕಂಡು ಬಂದರೆ ಭಯ ಪಡುವ ಅಗತ್ಯವಿಲ್ಲ, ಅದನ್ನು ನೆಲದಲ್ಲಿ ಹೂತು ಹಾಕಿದರೆ ಆ ರೀತಿಯ ಅನಾಹುತ ಸಂಭವಿಸುವುದಿಲ್ಲ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.
ಕೇವಲ 27ನೇ ವಯಸ್ಸಿಗೆ ಖ್ಯಾತ ಗಾಯಕಿ ದುರ್ಮರಣ! ಶಾಕಿಂಗ್ ಸಂಗತಿ ಬಿಚ್ಚಿಟ್ಟ ವೈದ್ಯರು
ತುಂಬಾ ಕಷ್ಟಪಟ್ಟು ಓದಿ ಪಡೆದ ಐಪಿಎಸ್ ಕೆಲಸಕ್ಕೆ ರಾಜೀನಾಮೆ ನೀಡಿದ ಇಬ್ಬರು ಅಧಿಕಾರಿಗಳು!
ನೀವದನ್ನು ಕೊಟ್ರೆ ನಾನು ನನ್ನ ಗಂಡನನ್ನೇ ಬಿಟ್ಟು ಹೋಗ್ತೀನಿ… ಜಾನಿ ಪತ್ನಿಯ ಆಕ್ರೋಶಭರಿತ ಅಚ್ಚರಿ ಹೇಳಿಕೆ