ತುಂಬಾ ಕಷ್ಟಪಟ್ಟು ಓದಿ ಪಡೆದ ಐಪಿಎಸ್​ ಕೆಲಸಕ್ಕೆ ರಾಜೀನಾಮೆ ನೀಡಿದ ಇಬ್ಬರು ಅಧಿಕಾರಿಗಳು!

IPS Officers

ಪಟನಾ: ಬಿಹಾರದಲ್ಲಿ ಕೇವಲ ಎರಡು ತಿಂಗಳ ಅಂತರದಲ್ಲಿ ಇಬ್ಬರು ಐಪಿಎಸ್​ ಅಧಿಕಾರಿಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿರುವ ಸುದ್ದಿ ಭಾರಿ ಚರ್ಚೆಯಾಗುತ್ತಿದೆ. ಕಳೆದ ಆಗಸ್ಟ್​ನಲ್ಲಿ ಐಪಿಎಸ್​ ಕಾಮ್ಯಾ ಮಿಶ್ರಾ ಅವರು ರಾಜೀನಾಮೆ ನೀಡಿದರು. ಇದೀಗ ಮತ್ತೊಬ್ಬ ಅಧಿಕಾರಿ ಶಿವದೀಪ್ ವಾಮನರಾವ್ ಲಾಂಡೆ ಕೂಡ ರಾಜೀನಾಮೆ ಕೊಟ್ಟಿದ್ದಾರೆ. ತಮ್ಮ ಭವಿಷ್ಯದ ಯೋಜನೆ ಪ್ರಕಾರ ಕೆಲಸ ಮಾಡಲು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಲಾಂಡೆ ಅವರನ್ನು ಇತ್ತೀಚೆಗೆ ಪೂರ್ಣಿಯಾ ರೇಂಜ್‌ನ ಐಜಿಯಾಗಿ ನೇಮಿಸಲಾಗಿತ್ತು. ಅವರೇ ತಮ್ಮ ರಾಜೀನಾಮೆ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಐಪಿಎಸ್ ಲಾಂಡೆ ಅವರು ತಮ್ಮ 18 ವರ್ಷಗಳ ಅಧಿಕಾರಾವಧಿಯಲ್ಲಿ ಬಿಹಾರಕ್ಕೆ ಸೇವೆ ಸಲ್ಲಿಸಿದರು. ಇದಕ್ಕೂ ಮುನ್ನ ಐಪಿಎಸ್ ಕಾಮ್ಯಾ ಮಿಶ್ರಾ ಕೂಡ ರಾಜೀನಾಮೆ ನೀಡಿದ್ದು, ಇನ್ನೂ ಅಂಗೀಕಾರವಾಗಿಲ್ಲ. ಇಬ್ಬರು ಕೂಡ ತಮ್ಮ ಭವಿಷ್ಯದ ಯೋಜನೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಕ್ಟೋಬರ್ 2 ರಂದು ಪ್ರಾರಂಭವಾಗಲಿರುವ ಪ್ರಶಾಂತ್ ಕಿಶೋರ್ ಅವರ ಹೊಸ ಪಕ್ಷಕ್ಕೆ ಸೇರಬಹುದು ಎಂಬ ಊಹಾಪೋಹಗಳು ದಟ್ಟವಾಗಿವೆ.

ನನ್ನ ಪ್ರೀತಿಯ ಬಿಹಾರ. ಕಳೆದ 18 ವರ್ಷಗಳಿಂದ ಸರ್ಕಾರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ನಾನು ಇಂದು ರಾಜೀನಾಮೆ ನೀಡಿದ್ದೇನೆ. ಬಿಹಾರ ನನ್ನ ಕುಟುಂಬವಿದ್ದಂತೆ. ನಾನು ಸರ್ಕಾರದ ಭಾಗವಾಗಿದ್ದಾಗ ಯಾವುದೇ ತಪ್ಪು ಮಾಡಿದ್ದರೆ ನನ್ನ ಕ್ಷಮಿಸಿ. ನಾನಿಂದು ಭಾರತೀಯ ಪೊಲೀಸ್ ಸೇವೆಗೆ (IPS) ರಾಜೀನಾಮೆ ನೀಡಿದ್ದೇನೆ. ಆದರೆ, ನಾನು ಬಿಹಾರದ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಶಿವದೀಪ್​ ಲಾಂಡೆ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಂದಹಾಗೆ ಶಿವದೀಪ್​ ಲಾಂಡೆ ಅವರು 2006ರ ಬ್ಯಾಚ್​ನ ಐಪಿಎಸ್ ಅಧಿಕಾರಿ. ಮಹಾರಾಷ್ಟ್ರದ ಅಕೋಲಾ ಮೂಲದವರು. ರೈತ ಕುಟುಂಬದ ಶಿವದೀಪ್ ಸ್ಕಾಲರ್‌ಶಿಪ್‌ ಸಹಾಯದಿಂದ ಓದಿ ಇಂಜಿನಿಯರಿಂಗ್ ಪದವಿ ಪಡೆದರು. ಇದಾದ ನಂತರ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿ IPS ಅಧಿಕಾರಿಯಾದರು. ಶಿವದೀಪ್ ಲಾಂಡೆ ಬಿಹಾರ ಕೇಡರ್ ಅಧಿಕಾರಿಯಾಗಿದ್ದರೂ ಮಹಾರಾಷ್ಟ್ರದಲ್ಲಿಯೂ ಕೆಲಕಾಲ ಸೇವೆ ಸಲ್ಲಿಸಿದ್ದರು. ಬಿಹಾರದಲ್ಲಿ ಎಸ್‌ಟಿಎಫ್ ಎಸ್‌ಪಿಯಾಗಿದ್ದಾಗ ಅವರನ್ನು ಮಹಾರಾಷ್ಟ್ರ ಕೇಡರ್‌ಗೆ ವರ್ಗಾಯಿಸಲಾಗಿತ್ತು. ಮಹಾರಾಷ್ಟ್ರದ ಎಟಿಎಸ್‌ನಲ್ಲಿ ಡಿಐಜಿವರೆಗೆ ಕೆಲಸ ಮಾಡಿದ್ದಾರೆ. ಅದರ ನಂತರ ಅವರು ಬಿಹಾರಕ್ಕೆ ಮರಳಿದರು.

ಕಾಮ್ಯಾ ಮಿಶ್ರಾ ರಾಜೀನಾಮೆ
ಶಿವದೀಪ್ ಲಾಂಡೆ ಅವರಿಗಿಂತ ಮೊದಲು ಐಪಿಎಸ್ ಕಾಮ್ಯಾ ಮಿಶ್ರಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ದರ್ಭಾಂಗದಲ್ಲಿ ಗ್ರಾಮಾಂತರ ಎಸ್ಪಿಯಾಗಿ ನೇಮಕಗೊಂಡ ಐಪಿಎಸ್ ಕಾಮ್ಯಾ ಮಿಶ್ರಾ ಅವರನ್ನು ಬಿಹಾರದಲ್ಲಿ ‘ಲೇಡಿ ಸಿಂಗಂ’ ಎಂದೂ ಕರೆಯುತ್ತಾರೆ. ದೆಹಲಿ ವಿಶ್ವವಿದ್ಯಾನಿಲಯದಿಂದ ಉತ್ತೀರ್ಣರಾದ ಕಾಮ್ಯಾ ಮಿಶ್ರಾ ಅವರು 2019ರಲ್ಲಿ ಮೊದಲ ಪ್ರಯತ್ನದಲ್ಲಿ UPSC ತೇರ್ಗಡೆಯಾದರು. UPSC ಪರೀಕ್ಷೆಯಲ್ಲಿ 172 ರ್ಯಾಂಕ್ ಪಡೆದರು. ಒಡಿಶಾದ ಕಾಮ್ಯಾ ಅವರಿಗೆ ಬಿಹಾರ ಕೇಡರ್‌ ನೀಡಲಾಗಿದೆ. ಕಾಮ್ಯಾ ಅವರ ಪತಿ ಅವಧೇಶ್ ದೀಕ್ಷಿತ್ ಬಿಹಾರ ಕೇಡರ್‌ನ ಐಪಿಎಸ್ ಅಧಿಕಾರಿ. ಅವರು ಪ್ರಸ್ತುತ ಮುಜಾಫರ್‌ಪುರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಬ್ಬರೂ 2021ರಲ್ಲಿ ಉದಯಪುರದಲ್ಲಿ ವಿವಾಹವಾದರು.

ಐಪಿಎಸ್ ಶಿವದೀಪ್ ಲಾಂಡೆ ಮತ್ತು ಐಪಿಎಸ್ ಕಾಮ್ಯಾ ಮಿಶ್ರಾ ಅವರು ಬಿಹಾರದಲ್ಲಿ ಪ್ರಾಮಾಣಿಕ ಮತ್ತು ಶ್ರಮಶೀಲ ಅಧಿಕಾರಿಗಳೆಂದು ಗುರುತಿಸಲ್ಪಟ್ಟಿದ್ದಾರೆ. ಇವರಿಬ್ಬರ ರಾಜೀನಾಮೆ ಹಿಂದಿನ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಅವರು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸಲು ಬಯಸುತ್ತಾರೆ ಎಂದು ನಂಬಲಾಗಿದೆ. ಶಿವದೀಪ್​ ಲಾಂಡೆ ಭವಿಷ್ಯದಲ್ಲಿ ಏನು ಮಾಡಲಿದ್ದಾರೆ ಎಂಬುದರ ಕುರಿತು ಇನ್ನೂ ಅಧಿಕೃತ ಮಾತುಗಳಿಲ್ಲ. ದರ್ಭಾಂಗ ಗ್ರಾಮಾಂತರ ಎಸ್‌ಪಿ ಕಾಮ್ಯಾ ಮಿಶ್ರಾ ಕೂಡ ಶಿವದೀಪ್‌ಗಿಂತ ಮೊದಲು ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ರಾಜೀನಾಮೆ ನೀಡಿದ ಅಧಿಕಾರಿಗಳು ಅಕ್ಟೋಬರ್ 2 ರಂದು ಪ್ರಾರಂಭವಾಗಲಿರುವ ಪ್ರಶಾಂತ್ ಕಿಶೋರ್ ಅವರ ಪಕ್ಷಕ್ಕೆ ಸೇರಬಹುದು ಎಂಬ ಊಹಾಪೋಹಗಳು ಕೆಲವು ಮಾಧ್ಯಮಗಳಲ್ಲಿ ಇವೆ. (ಏಜೆನ್ಸೀಸ್​)

ನೀವದನ್ನು ಕೊಟ್ರೆ ನಾನು ನನ್ನ ಗಂಡನನ್ನೇ ಬಿಟ್ಟು ಹೋಗ್ತೀನಿ… ಜಾನಿ ಪತ್ನಿಯ ಆಕ್ರೋಶಭರಿತ ಅಚ್ಚರಿ ಹೇಳಿಕೆ

ಆಪತ್ಕಾಲದಲ್ಲಿ ಶತಕ ಸಿಡಿಸಿ ಟೀಮ್​ ಇಂಡಿಯಾ ಗೌರವ ಉಳಿಸಿದ ಅಶ್ವಿನ್​! ಈ ಯಶಸ್ಸಿನ ಹಿಂದಿದೆ ಈ ಕಾರಣ….

Share This Article

ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡ್ರೆ ಏನು ಮಾಡ್ಬೇಕು? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​ | Fish

ಮೀನು ( Fish ) ಗಳು ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಮೀನು ಆರೋಗ್ಯಕ್ಕೆ…

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರೋಲಿಂಗ್ ಮಾಡ್ತೀರಾ?  ಇದ್ರಿಂದಲೇ ಗೊತ್ತಾಗುತ್ತದೆ ನಿಮ್ಮ Personality traits…

ಬೆಂಗಳೂರು:  ಈಗ  ಕೆಲವು ಅಧ್ಯಯನಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality traits ) ಹುಟ್ಟಿದ ದಿನಾಂಕ, ಕಣ್ಣಿನ…

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ