ಭುವನೇಶ್ವರ್: ಒಡಿಶಾದ ಖ್ಯಾತ ಗಾಯಕಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ರುಕ್ಸಾನಾ ಬಾನೋ ಕೇವಲ 27ನೇ ವಯಸ್ಸಿನಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಈ ಸಾವಿಗೆ ನಿಖರವಾದ ಕಾರಣ ಏನೆಂದು ತಿಳಿದುಬಂದಿಲ್ಲ. ಆದರೆ, ಅನೇಕ ಅನುಮಾನಗಳು ಹುಟ್ಟಿಕೊಂಡಿದ್ದು, ರುಕ್ಸಾನಾ ಸಾವು ಇದೀಗ ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ರುಕ್ಸಾನಾ ಒಡಿಶಾದ ಸಂಬಲ್‌ಪುರ ಮೂಲದವರು. ಆಲ್ಬಮ್ ಹಾಡುಗಳನ್ನು ಹಾಡುವ ಮೂಲಕ ತುಂಬಾ ಖ್ಯಾತಿ ಗಳಿಸಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಕಾರಣ ಆಕೆಯನ್ನು ಆಗಸ್ಟ್ 27ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬುಧವಾರ (ಸೆ.18) ಮೃತಪಟ್ಟಿದ್ದಾರೆ. ಆಕೆಯ ಸಾವು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
ಒಡಿಯಾ ಹಾಡುಗಳನ್ನು ಹಾಡುವುದರಲ್ಲಿ ಫೇಮಸ್ ಆಗಿದ್ದ ರುಕ್ಸಾನಾ ಬಾನೋ ಕೆಲವು ದಿನಗಳ ಹಿಂದೆ ಶೂಟಿಂಗ್‌ಗಾಗಿ ಬೋಲಂಗಿರ್‌ಗೆ ಹೋಗಿದ್ದರು. ಈ ವೇಳೆ ಅಲ್ಲಿ ಜ್ಯೂಸ್ ಕುಡಿದ ನಂತರ ಅಸ್ವಸ್ಥರಾದರು. ಕೂಡಲೇ ಅವರನ್ನು ಭವಾನಿಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು. ಇದೆಲ್ಲ ನಡೆದಿದ್ದು ಆಗಸ್ಟ್ 27 ರಂದು. ಬೋಳಂಗಿರ್‌ನಲ್ಲಿರುವ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಭುವನೇಶ್ವರದ ಏಮ್ಸ್‌ಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಚಿಕಿತ್ಸೆ ನೀಡಿದರೂ ಫಲ ಕಾಣಲಿಲ್ಲ. ಬುಧವಾರ (ಸೆ.18) ರಾತ್ರಿ ನಿಧನರಾಗಿದ್ದಾರೆ.
ರುಕ್ಸಾನಾ ಬಾನೋಗೆ ವಿಷಕಾರಿ ಕೀಟ ಕಚ್ಚಿ, ಸ್ಕ್ರಬ್ ಟೈಫಸ್ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳುತ್ತವೆ. ಆದರೆ, ಆಕೆಯ ತಾಯಿ ಮತ್ತು ಸಹೋದರಿ ಪ್ರತಿಸ್ಪರ್ಧಿ ಗಾಯಕ ಆಕೆಗೆ ವಿಷ ನೀಡಿ ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಹಿಂದೆಯೂ ಆಕೆಗೆ ಬೆದರಿಕೆ ಇತ್ತು ಎಂದಿದ್ದಾರೆ. ಇದೀಗ ಈ ವಿಷಯ ಒಡಿಶಾ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್)
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಒಮ್ಮೆಯೂ ಔಟಾಗದ ಟೀಮ್ ಇಂಡಿಯಾ ಆಟಗಾರ ಈತ!
ತುಂಬಾ ಕಷ್ಟಪಟ್ಟು ಓದಿ ಪಡೆದ ಐಪಿಎಸ್ ಕೆಲಸಕ್ಕೆ ರಾಜೀನಾಮೆ ನೀಡಿದ ಇಬ್ಬರು ಅಧಿಕಾರಿಗಳು!