ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲೇ ಒಮ್ಮೆಯೂ ಔಟಾಗದ ಟೀಮ್​ ಇಂಡಿಯಾ ಆಟಗಾರ ಈತ!

Tinu Yohannan

ನವದೆಹಲಿ: ನಿನ್ನೆಯಿಂದ (ಸೆ.19) ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್​ ಸರಣಿ ಆರಂಭವಾಗಿದೆ. ಬರೋಬ್ಬರಿ 6 ತಿಂಗಳ ಬಳಿಕ ಟೀಮ್​ ಇಂಡಿಯಾ ಟೆಸ್ಟ್​ ಪಂದ್ಯ ಆಡುತ್ತಿದೆ. ಟಿ20 ಪಂದ್ಯಗಳ ಜನಪ್ರಿಯತೆಯಿಂದಾಗಿ ಟೆಸ್ಟ್​ ಪಂದ್ಯಗಳ ಖ್ಯಾತಿ ಕುಗ್ಗುತ್ತಿದೆ. ಆದರೆ, ಟೆಸ್ಟ್ ಕ್ರಿಕೆಟ್ ಅತ್ಯುತ್ತಮ ಸ್ವರೂಪವೆಂದು ಅನೇಕರು ಪರಿಗಣಿಸುತ್ತಾರೆ. ಏಕೆಂದರೆ ಐದು ದಿನಗಳ ಅವಧಿಯಲ್ಲಿ ಇದು ಆಟಗಾರನ ಕೌಶಲ್ಯ ಮತ್ತು ಮನೋಭಾವವನ್ನು ಪರೀಕ್ಷೆ ಮಾಡುತ್ತದೆ. ಟಿ20 ಕ್ರಿಕೆಟ್​ಗೆ ಇರುವ ಗ್ಲಾಮರ್ ಮತ್ತು ಹೈಪ್​ ಹೊರತಾಗಿಯೂ ಟೆಸ್ಟ್​ ಕ್ರಿಕೆಟ್​ನ ಸಾರವನ್ನು ಕಿರು ಸ್ವರೂಪ ನೀಡಲು ಸಾಧ್ಯವಿಲ್ಲ.

ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್​ಗಳಲ್ಲಿ ಗೆಲ್ಲಲಾಗುತ್ತದೆ. ಪಂದ್ಯದ ಸಮತೋಲನವು ಯಾವಾಗ ಬೇಕಾದರೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬದಲಾಗಬಹುದು. ಒಬ್ಬನೇ ಆಟಗಾರ ಎದುರಾಳಿಯಿಂದ ಪಂದ್ಯವನ್ನು ಸುಲಭವಾಗಿ ಕಸಿದುಕೊಳ್ಳುವ ಟಿ20 ಆಟಕ್ಕಿಂತ ಭಿನ್ನವಾಗಿ ಟೆಸ್ಟ್ ಕ್ರಿಕೆಟ್‌ಗೆ ತಂಡದ ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಅಲ್ಲದೆ, ಟೆಸ್ಟ್​ ಪಂದ್ಯದಲ್ಲಿ ತಾಳ್ಮೆಯೇ ಆಯುಧ. ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿಗೆ ಟೆಸ್ಟ್​ ಸ್ವರೂಪ ಪೂರಕವಾಗಿದೆ.

ಪ್ರತಿಯೊಬ್ಬರು ಕೂಡ ತಂಡಕ್ಕೆ ಕೊಡುಗೆ ನೀಡಬಹುದು ಎಂಬುದನ್ನು ಟೆಸ್ಟ್​ ಸ್ವರೂಪಗಳು ತೋರಿಸಿಕೊಡುತ್ತವೆ. ಪ್ರಮುಖ ಬೌಲರ್‌ಗಳು ಕೂಡ ಟೆಸ್ಟ್​ ಕ್ರಿಕೆಟ್​ನಲ್ಲಿ ಬ್ಯಾಟಿಂಗ್ ದಾಖಲೆಯನ್ನು ಹೊಂದಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎಂದಿಗೂ ಔಟಾಗದ ನಾಲ್ವರು ಕ್ರಿಕೆಟಿಗರ ಪರಿಚಯವನ್ನು ನಾವೀಗ ಮಾಡಿಕೊಳ್ಳೋಣ.

ಜಾನ್ ಚೈಲ್ಡ್ಸ್ (ಇಂಗ್ಲೆಂಡ್​)

John Childs
ಗ್ಲೌಸೆಸ್ಟರ್‌ಶೈರ್ ಮತ್ತು ಎಸೆಕ್ಸ್‌ಗಾಗಿ ಕೌಂಟಿ ಕ್ರಿಕೆಟ್ ಆಡಿದ್ದ ಜಾನ್ ಚೈಲ್ಡ್ಸ್, 36ನೇ ವಯಸ್ಸಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡಕ್ಕೆ ಪಾದಾರ್ಪಣೆ ಮಾಡಿದರು. ಅವರು ಆಡಿದ ಎರಡೂ ಪಂದ್ಯಗಳಲ್ಲಿ 86 ಓವರ್‌ಗಳಿಂದ ಕೇವಲ ಮೂರು ವಿಕೆಟ್‌ಗಳನ್ನು ಪಡೆದರು. ವೆಸ್ಟ್ ಇಂಡೀಸ್ ಬೌಲರ್‌ಗಳ ಪ್ರಾಬಲ್ಯವಿರುವ ಸರಣಿಯಲ್ಲಿ, ಚೈಲ್ಡ್ಸ್ ಎಲ್ಲಾ ನಾಲ್ಕು ಸಂದರ್ಭಗಳಲ್ಲಿಯೂ ಕ್ರೀಸ್​ಗೆ ಆಗಮಿಸಿ ಔಟಾಗದೆ ಉಳಿಯುವಲ್ಲಿ ಯಶಸ್ವಿಯಾದರು.

ಪಂದ್ಯಗಳು: 2, ಇನ್ನಿಂಗ್ಸ್​: 4, ಗರಿಷ್ಠ ರನ್​: 2*

ಟಿನು ಯೋಹಾನನ್ (ಭಾರತ)

Tinu Yohannan
ಟಿನು ಯೋಹನನ್​ ಅವರು ಕೇರಳದ ಮೊದಲ ಕ್ರಿಕೆಟಿಗ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತಕ್ಕಾಗಿ ಆಡಿದ್ದಾರೆ. ಯೋಹಾನನ್ 2001ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾದರ್ಪಣೆ ಮಾಡಿದರು. ಈ ಸರಣಿಯಲ್ಲಿ ಬೌಲರ್​ ಆಗಿ ಇಬ್ಬರು ಆಂಗ್ಲ ಆರಂಭಿಕರನ್ನು ಔಟ್ ಮಾಡಿದರು ಮತ್ತು ಒಟ್ಟು 4 ವಿಕೆಟ್ ಪಡೆದರು. ಅವರು ಆಡಿದ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ತಲಾ ಒಂದು ವಿಕೆಟ್ ಮಾತ್ರ ಪಡೆದರು. ಒಟ್ಟು ಮೂರು ಪಂದ್ಯಗಳಲ್ಲಿ 51.20 ಸರಾಸರಿಯೊಂದಿಗೆ ಒಟ್ಟು ಆರು ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು. ಈ ಮೂರು ಪಂದ್ಯಗಳಲ್ಲಿ, ಯೋಹಾನನ್‌ ಅವರು ನಾಲ್ಕು ಬಾರಿ ಬ್ಯಾಟಿಂಗ್ ಮಾಡಿದರು. ಆ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಔಟಾಗಲಿಲ್ಲ. ತಮ್ಮ ಕೊನೆಯ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 8 ರನ್‌ ಗಳಿಸಿ ಅಜೇಯರಾಗಿ ಉಳಿದರು. ಇದೇ ಅವರ ಅತ್ಯಧಿಕ ಸ್ಕೋರ್‌. ಟಿನು ಯೋಹಾನನ್ ಅವರ ಬ್ಯಾಟಿಂಗ್‌ನ ಕುತೂಹಲಕಾರಿ ಸಂಗತಿಯೆಂದರೆ, ಏಕದಿನ ಪಂದ್ಯಗಳಲ್ಲಿಯೂ ಅವರು ಬ್ಯಾಟಿಂಗ್‌ಗೆ ಬಂದ ಎರಡು ಬಾರಿ ಔಟಾಗದೆ ಉಳಿದರು.

ಪಂದ್ಯಗಳು: 3, ಇನ್ನಿಂಗ್ಸ್: 4, ರನ್​ಗಳು: 13, ಗರಿಷ್ಠ ಸ್ಕೋರ್: 8*

ಅಫಾಕ್ ಹುಸೇನ್ (ಪಾಕಿಸ್ತಾನ)

Afaq Hussain
ಬಲಗೈ ಆಫ್ ಬ್ರೇಕ್ ಬೌಲರ್ ಮತ್ತು ಉಪಯುಕ್ತ ಕೆಳ ಕ್ರಮಾಂಕದ ಬಲಗೈ ಬ್ಯಾಟ್ಸ್‌ಮನ್ ಆಗಿದ್ದ ಅಫಾಕ್ ಹುಸೇನ್ 67 ಪಂದ್ಯಗಳಲ್ಲಿ 1448 ರನ್ ಮತ್ತು 214 ವಿಕೆಟ್‌ಗಳೊಂದಿಗೆ ಉತ್ತಮ ಪ್ರಥಮ ದರ್ಜೆ ದಾಖಲೆಯನ್ನು ಹೊಂದಿದ್ದಾರೆ. ಉತ್ತಮ ಪ್ರಥಮ ದರ್ಜೆಯ ದಾಖಲೆಯ ಹೊರತಾಗಿಯೂ, ಅವರು ಪಾಕಿಸ್ತಾನಕ್ಕಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಕೇವಲ ಎರಡು ಟೆಸ್ಟ್‌ಗಳನ್ನು ಮಾತ್ರ ಆಡಿದರು. ಔಟಾಗದೆ ಅತಿ ಹೆಚ್ಚು ಟೆಸ್ಟ್ ರನ್ (66) ಗಳಿಸಿದ ಹುಸೇನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶಿಷ್ಟ ದಾಖಲೆ ಹೊಂದಿದ್ದಾರೆ. 1961 ರಲ್ಲಿ ಇಂಗ್ಲೆಂಡ್ ವಿರುದ್ಧದ ಅವರ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜೇಯ 10 ರನ್​ ಮತ್ತು ಅಜೇಯ 35 ರನ್ ಗಳಿಸಿದರು. ಮೂರು ವರ್ಷಗಳ ನಂತರ 1964ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಅವಕಾಶವನ್ನು ಪಡೆದರು. ಈ ವೇಳೆ ಅವರು 8* ಮತ್ತು 13* ರನ್ ಗಳಿಸಿದರು. ಟೆಸ್ಟ್​ನಲ್ಲಿ ಒಟ್ಟು 66 ರನ್​ ಗಳಿಸಿದ್ದಾರೆ.

ಪಂದ್ಯಗಳು: 2, ಇನ್ನಿಂಗ್ಸ್: 4, ರನ್​ಗಳು: 66, ಗರಿಷ್ಠ ಸ್ಕೋರ್: 35*

ಐಜಾಜ್ ಚೀಮಾ (ಪಾಕಿಸ್ತಾನ)

Aizaz Cheema
ಐಜಾಜ್ ಚೀಮಾ ಅವರು ಜಿಂಬಾಬ್ವೆ ವಿರುದ್ಧ 31 ನೇ ವಯಸ್ಸಿನಲ್ಲಿ ಪಾಕಿಸ್ತಾನ ಪರ ಚೊಚ್ಚಲ ಪ್ರವೇಶ ಮಾಡಿದರು. ಚೀಮಾ ಅವರು ಕ್ವೈಡ್-ಎ-ಅಜಮ್ ಟ್ರೋಫಿಯಲ್ಲಿ 8 ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬಲಿಷ್ಠ ಪ್ರಥಮ ದರ್ಜೆಯ ಋತುವಿನ ಹಿನ್ನಲೆಯಲ್ಲಿ ಪಾಕ್​ ತಂಡಕ್ಕೆ ಬಂದರು. ಚೀಮಾ ಅವರು ಜಿಂಬಾಬ್ವೆ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಎಂಟು ವಿಕೆಟ್‌ಗಳನ್ನು ಪಡೆದರು ಮತ್ತು 103 ಕ್ಕೆ 8 ವಿಕೆಟ್‌ಗಳೊಂದಿಗೆ ಪಂದ್ಯವನ್ನು ಕೊನೆಗೊಳಿಸಿದರು. ಇದು ಪಾಕಿಸ್ತಾನದ ಚೊಚ್ಚಲ ಆಟಗಾರನ ಎರಡನೇ ಅತ್ಯುತ್ತಮ ಪ್ರದರ್ಶನವಾಗಿದೆ. ಸೆಪ್ಟೆಂಬರ್ 2011 ಮತ್ತು ಜೂನ್ 2012 ರ ನಡುವೆ ಅವರು ಆಡಿದ ಏಳು ಪಂದ್ಯಗಳಲ್ಲಿ, ಅವರು ಐದು ಸಂದರ್ಭಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರು ಮತ್ತು ಅವರು ಪ್ರತಿ ಬಾರಿಯೂ ಔಟಾಗದೆ ಉಳಿದರು. ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಗಳಿಸಿದ ಏಕೈಕ ರನ್ ಬಾಂಗ್ಲಾದೇಶ ವಿರುದ್ಧವಾಗಿತ್ತು. ಗರಿಷ್ಠ ಸಂಖ್ಯೆಯ ಇನ್ನಿಂಗ್ಸ್‌ಗಳಲ್ಲಿ ಔಟಾಗದೆ ಉಳಿದಿದ್ದರಿಂದ ಚೀಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಪಂದ್ಯಗಳು: 7, ಇನ್ನಿಂಗ್ಸ್: 5, ರನ್​ಗಳು: 1, ಗರಿಷ್ಠ ಸ್ಕೋರ್: 1*

ತುಂಬಾ ಕಷ್ಟಪಟ್ಟು ಓದಿ ಪಡೆದ ಐಪಿಎಸ್​ ಕೆಲಸಕ್ಕೆ ರಾಜೀನಾಮೆ ನೀಡಿದ ಇಬ್ಬರು ಅಧಿಕಾರಿಗಳು!

ಆಪತ್ಕಾಲದಲ್ಲಿ ಶತಕ ಸಿಡಿಸಿ ಟೀಮ್​ ಇಂಡಿಯಾ ಗೌರವ ಉಳಿಸಿದ ಅಶ್ವಿನ್​! ಈ ಯಶಸ್ಸಿನ ಹಿಂದಿದೆ ಈ ಕಾರಣ….

ನೀವದನ್ನು ಕೊಟ್ರೆ ನಾನು ನನ್ನ ಗಂಡನನ್ನೇ ಬಿಟ್ಟು ಹೋಗ್ತೀನಿ… ಜಾನಿ ಪತ್ನಿಯ ಆಕ್ರೋಶಭರಿತ ಅಚ್ಚರಿ ಹೇಳಿಕೆ

Share This Article

ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡ್ರೆ ಏನು ಮಾಡ್ಬೇಕು? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​ | Fish

ಮೀನು ( Fish ) ಗಳು ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಮೀನು ಆರೋಗ್ಯಕ್ಕೆ…

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರೋಲಿಂಗ್ ಮಾಡ್ತೀರಾ?  ಇದ್ರಿಂದಲೇ ಗೊತ್ತಾಗುತ್ತದೆ ನಿಮ್ಮ Personality traits…

ಬೆಂಗಳೂರು:  ಈಗ  ಕೆಲವು ಅಧ್ಯಯನಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality traits ) ಹುಟ್ಟಿದ ದಿನಾಂಕ, ಕಣ್ಣಿನ…

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…