IPL 2025: ಐಪಿಎಲ್ 18ನೇ ಆವೃತ್ತಿಗೆ ಇದೀಗ ದಿನಗಣನೆ ಮತ್ತು ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕಳೆದ ಬಾರಿಯ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಕೋಲ್ಕತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಇದನ್ನೂ ಓದಿ: ಅದು ನನ್ನ ಕೈಲಿಲ್ಲ, RCBಯಿಂದ ದೂರವಿರುವುದು ನೋವುಂಟು ಮಾಡಿದೆ ಆದರೆ ಗಿಲ್… ಸಿರಾಜ್ ಅಚ್ಚರಿಯ ಹೇಳಿಕೆ! Mohammed Siraj
ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆದ್ದ ನಂತರ ಐಪಿಎಲ್ನತ್ತ ಮುಖಮಾಡಿರುವ ಕ್ರಿಕೆಟ್ ಅಭಿಮಾನಿಗಳು, ಶುಭಾರಂಭ ಪಂದ್ಯದಲ್ಲೇ ಗೆಲುವಿಗಾಗಿ ಪೈಪೋಟಿ ಕೊಡಲು ಸಜ್ಜಾಗಿರುವ ಎರಡು ಬಲಿಷ್ಠ ತಂಡಗಳ ಹುರಿದುಂಬಿಸಲು ಮೈದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಇದು ಕಿಕ್ಸ್ಟಾರ್ ಹಾಗೂ ಐಪಿಎಲ್ 2025ರ ಶುರುವಿನ ಹಿನ್ನೆಲೆ ಪಂದ್ಯ ಆರಂಭಕ್ಕೂ ಮುನ್ನ ಒಂದಷ್ಟು ಸಂಗೀತ, ನೃತ್ಯ ಕಾರ್ಯಕ್ರಮಗಳು, ಸ್ಟಾರ್ ನಟರ ಮೆರುಗು ಮೈದಾನದ ಕಳೆ ಹೆಚ್ಚಿಸಲಿದೆ.
ಕೆಕೆಆರ್ ತಂಡಕ್ಕೆ ವೆಂಕಟೇಶ್ ಅಯ್ಯರ್ ಅವರೇ ಕ್ಯಾಪ್ಟನ್ ಎಂಬ ಮಾತುಗಳು ಕೇಳಿಬಂದಿತ್ತು. ಆದ್ರೆ, ತಂಡದ ಬ್ಯಾಟರ್ ಅಜಿಂಕ್ಯಾ ರಹಾನೆ ಈ ಬಾರಿ ಕೆಕೆಆರ್ನ ನಾಯಕತ್ವ ವಹಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇನ್ನು ಅತ್ಯಂತ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಗುರುತಿಸಿಕೊಂಡಿರುವ ಅಯ್ಯರ್, ತಮ್ಮ ಜೀವನದಲ್ಲ ಐಪಿಎಲ್ ಎಷ್ಟು ಮುಖ್ಯ ಮತ್ತು ತಾವು ಏಕೆ ಐಪಿಎಲ್ ಪಂದ್ಯಗಳತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ ಎಂಬುದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಇದನ್ನೂ ಓದಿ: IPL-2025: ಈ ಸಲ ಐಪಿಎಲ್‌ನಲ್ಲಿ ಬೌಲರ್ಗಳಿಗೆ ಬಲ! ಹೊಸ ನಿಯಮಗಳಿಂದ ಹೆಚ್ಚಲಿದೆ ಸ್ಪರ್ಧಾತ್ಮಕತೆ!
2023ರ ಐಪಿಎಲ್‌ನಲ್ಲಿ 145.85ರ ಸ್ಟ್ರೈಕ್ ರೇಟ್‌ನಲ್ಲಿ 404 ರನ್ ಗಳಿಸಿದ್ದ ವೆಂಕಟೇಶ್, 2024ರಲ್ಲಿ 158.80ರ ಸ್ಟ್ರೈಕ್ ರೇಟ್‌ನಲ್ಲಿ 370 ರನ್ ಸಿಡಿಸಿದರು. 2023ರಲ್ಲಿ ಬ್ರೆಂಡನ್ ಮೆಕಲಮ್ ನಂತರ ಐಪಿಎಲ್‌ನಲ್ಲಿ ಶತಕ ಗಳಿಸಿದ ಎರಡನೇ ಕೆಕೆಆರ್ ಆಟಗಾರ ಎಂಬ ಹೆಗ್ಗಳಿಕೆಗೆ ಅಯ್ಯರ್ ಪಾತ್ರರಾಗಿದ್ದಾರೆ. 2025ರ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಮತ್ತೆ ತಂಡದ ಪಾಲು ಮಾಡಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್, ಅಯ್ಯರ್ರನ್ನು 23.75 ಕೋಟಿ ರೂ. ವ್ಯಯಿಸಿ, ತಮ್ಮ ತಂಡದಲ್ಲೇ ಉಳಿಸಿಕೊಂಡಿತು.
ಇದನ್ನೂ ಓದಿ: ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಒತ್ತಡಗಳಿಂದ ಅನಾರೋಗ್ಯ ಕಾಡೀತು
ತಮ್ಮ ಕ್ರಿಕೆಟ್ ಪಯಣ ನೆನೆದು ಮಾತನಾಡಿದ ಅಯ್ಯರ್, “ನಾನು 2022ರ ಟಿ20 ವಿಶ್ವಕಪ್ ತಂಡದಲ್ಲಿರುವುದರ ಮೇಲೆ ಹೆಚ್ಚು ಗಮನಹರಿಸಿದ್ದರಿಂದ ಐಪಿಎಲ್ ಪಂದ್ಯಗಳತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ. ಅಂದು ನನಗೆ ಅದೊಂದು ಪಾಠವಾಗಿತ್ತು. ಇಂಜುರಿಯಿಂದಾಗಿ 6ರಿಂದ 8 ತಿಂಗಳು ಆಟದಿಂದ ಹೊರಗುಳಿದ ಬಳಿಕ ಐಪಿಎಲ್ ಎಷ್ಟು ಮುಖ್ಯ ಎಂದು ನಾನು ಅರಿತುಕೊಂಡೆ. ನಾವು ಪಡೆದದ್ದನ್ನು ಸಂತೋಷದಿಂದ ಸ್ವೀಕರಿಸಬೇಕು. ಇವು ನನ್ನ ಮಾತುಗಳಲ್ಲ. ಅಸಲಿಗೆ ನಮ್ಮ ಮಾಲೀಕರಾದ ನಟ ಶಾರುಖ್ ಖಾನ್ ಅವರ ಮಾತುಗಳು” ಎಂದರು.
“ಐಪಿಎಲ್ 2025ರ ಹರಾಜು ನನ್ನ ಜೀವನವನ್ನೇ ಬದಲಿಸಿತು. ಮಧ್ಯಮ ವರ್ಗದ ವ್ಯಕ್ತಿಯಾಗಿ ಬಂದ ನನಗೆ, ಹರಾಜಿನಲ್ಲಿ ಸಿಕ್ಕ ಹಣ ಬಹಳ ಸಂತೋಷ ಕೊಟ್ಟಿದೆ. ಆದರೆ, ಕೆಕೆಆರ್ ಮತ್ತು ಆರ್‌ಸಿಬಿ ಹರಾಜಿನಲ್ಲಿ ಸ್ಪರ್ಧಿಸುವುದನ್ನು ನೋಡಿದಾಗ, ನಾನು ತುಂಬಾ ಭಾವುಕನಾದೆ. ನನ್ನ ವೃತ್ತಿಜೀವನದಲ್ಲಿ ನಾನು ಏನು ಸಾಧಿಸಿದ್ದೀನಿ ಎಂದು ನನಗೆ ತಿಳಿದ ಕ್ಷಣವಿದು. ಇದು ದೊಡ್ಡ ಜವಾಬ್ದಾರಿಯೂ ಆಗಿದೆ. ನನ್ನ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ. ಒತ್ತಡವಿರಬೇಕು. 20 ಲಕ್ಷ ರೂ. ಅಥವಾ 20 ಕೋಟಿ ರೂ. ಆಟಗಾರನಾಗಿರಲಿ, ಕೆಲಸ ಒಂದೇ ಆಗಿರುತ್ತದೆ” ಎಂದು ಅಯ್ಯರ್ ಹೇಳಿದ್ದಾರೆ,(ಏಜೆನ್ಸೀಸ್).
RCB, ಮುಂಬೈ ಇಂಡಿಯನ್ಸ್! ಐಪಿಎಲ್‌ನಲ್ಲಿ ಇಬ್ಬರು ದಿಗ್ಗಜರ ಕಮಾಲ್ ಖಚಿತ: ಮಾಜಿ ಕ್ರಿಕೆಟಿಗ ಭರವಸೆ | IPL 2025