

ಮೇಷ: ಬ್ಯಾಂಕ್ ನೌಕರರಿಗೆ ವರ್ಗಾವಣೆ ಸಾಧ್ಯತೆ. ಸಾಲ ತೀರಿಸುವ ಚಿಂತೆ. ಸಾರ್ವಜನಿಕವಾಗಿ ಮಾತಿನಿಂದ ಸಮಸ್ಯೆಯಾಗಬಹುದು. ಶುಭಸಂಖ್ಯೆ: 5
ವೃಷಭ: ಚಿಕ್ಕ ಶಸ್ತ್ರ ಚಿಕಿತ್ಸೆ ಸಾಧ್ಯತೆ. ಸ್ವಂತ ವ್ಯಾಪಾರದಲ್ಲಿ ಪ್ರತಿಸ್ಪರ್ಧಿಗಳ ಕಾಟ ಅನುಭವಿಸಬೇಕಾಗುವುದು. ಮಕ್ಕಳಿಗಾಗಿ ಅಧಿಕ ಖರ್ಚು. ಶುಭಸಂಖ್ಯೆ: 9
ಮಿಥುನ: ವಾಣಿಜ್ಯ, ಕಾನೂನು ವಿದ್ಯಾರ್ಥಿಗಳಿಗೆ ಹಿನ್ನಡೆ. ಬಂಧುಗಳಿಂದ ಮಗಳ ವಿವಾಹಕ್ಕೆ ಸಹಾಯ. ದೈಹಿಕ ಅಸಮತೋಲನ ಸಾಧ್ಯತೆ. ಶುಭಸಂಖ್ಯೆ: 7
ಕಟಕ: ಮಾನಸಿಕ ಅಸಮತೋಲನ. ಅಲಂಕಾರಿಕ ವಸ್ತುಗಳಿಂದ ಸಮಸ್ಯೆ ಆದೀತು. ಆರ್ಥಿಕ ಒತ್ತಡಗಳಿಂದ ಅನಾರೋಗ್ಯ ಕಾಡೀತು. ಶುಭಸಂಖ್ಯೆ: 2
ಸಿಂಹ: ಆರೋಗ್ಯ ವ್ಯತ್ಯಾಸದಿಂದ ಆಸ್ಪತ್ರೆಗೆ ದಾಖಲಾಗುವ ಸನ್ನಿವೇಶ. ಉದ್ಯೋಗ ಕಳೆದುಕೊಳ್ಳುವ ಭೀತಿ. ಬಟ್ಟೆ ಖರೀದಿಯಲ್ಲಿ ಮೋಸ. ಶುಭಸಂಖ್ಯೆ:8
ಕನ್ಯಾ: ದೊಡ್ಡ ಉದ್ದಿಮೆದಾರರಿಗೆ ಆರ್ಥಿಕ ಹಿನ್ನಡೆ. ಮಾತಿನಿಂದ ಸಮಸ್ಯೆಯಾದೀತು, ಎಚ್ಚರ. ಪ್ರಯಾಣದಲ್ಲಿಲ್ಲ ಹಳೆಯ ಸ್ನೇಹಿತನ ಭೇಟಿ. ಶುಭಸಂಖ್ಯೆ:1
ತುಲಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಿನ್ನಡೆ. ಅಧಿಕಾರಿಗಳಿಂದ ಉದ್ಯೋಗ ಸ್ಥಿರತೆಯ ಭರವಸೆ. ದುಶ್ಚಟಕ್ಕೆ ಹಣ ವೆಚ್ಚ ಬೇಡ. ಶುಭಸಂಖ್ಯೆ:6
ವೃಶ್ಚಿಕ: ಸಂಗಾತಿಯಿಂದ ವ್ಯಾಪಾರ ಅಭಿವೃದ್ಧಿಗೆ ಸಲಹೆ. ಕೆಟ್ಟ ಆಲೋಚನೆಗಳು ಬಂದಾವು. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಶುಭಸಂಖ್ಯೆ:7
ಧನಸ್ಸು: ತಂದೆಯಿಂದ ಸಹಕಾರ. ಐಟಿ ಕ್ಷೇತ್ರದ ಉದ್ಯೋಗಿಗಳಿಗೆ ಉದ್ಯೋಗ ನಷ್ಟ. ಕಲಾವಿದರಿಗೆ ವಿಶೇಷ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ: 2
ಮಕರ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ. ಅನಿರೀಕ್ಷಿತ ಆಪತ್ತು. ಸಗಟು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4
ಕುಂಭ: ಸ್ಥಿರಾಸ್ತಿಯಿಂದ ನಷ್ಟ. ಮಾನಸಿಕ ದೌರ್ಬಲ್ಯದಿಂದಾಗಿ ಪ್ರವೇಶ ಪರೀಕ್ಷೆಯಲ್ಲಿ ವಿಫಲ. ದಾಂಪತ್ಯದಲ್ಲಿ ಸಮಸ್ಯೆ. ಕೃಷಿಕರಿಗೆ ಅಶುಭ. ಶುಭಸಂಖ್ಯೆ: 5
ಮೀನ: ಹೋಟೆಲ್ ಉದ್ಯಮಿಗಳಿಗೆ ಲಾಭದಲ್ಲಿ ಕುಸಿತ. ಅನಗತ್ಯ ಮಾತಿನಿಂದ ಸಮಸ್ಯೆ. ಉನ್ನತ ಸ್ಥಾನದ ಪರೀಕ್ಷೆಯಲ್ಲಿ ತೇರ್ಗಡೆ. ಶುಭಸಂಖ್ಯೆ: 4