Murder Case: ಪ್ರಿಯಕರನ ಜತೆ ಪ್ರೇಮ ಸಲ್ಲಾಪ ನಡೆಸಲು ಅಡ್ಡಿಯಾಗಿದ್ದ ಪತಿಯನ್ನು ಭೀಕರವಾಗಿ ಹತ್ಯೆಗೈದ ಪಾಪಿ ಪತ್ನಿ ಮತ್ತು ಆಕೆಯ ಪ್ರಿಯಕರ, ಸೌರಭ್ ರಜಪುತ್ನನ್ನು 15 ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಡ್ರಮ್ನಲ್ಲಿರಿಸಿ, ಅದರ ಮೇಲೆ ಸಿಮೆಂಟ್ನಿಂದ ಮುಚ್ಚಿಟ್ಟ ಘಟನೆ ಕಡೆಗೂ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಪ್ರಿಯಕರನ ಜತೆಗೂಡಿ ಪತಿಯನ್ನು ಕೊಂದ ಪ್ರಕರಣ; ಬೈಕ್ ಮೇಲೆ ಶವ ಹೊತ್ತೊಯ್ಯುತ್ತಿರುವ ದೃಶ್ಯ ಸೆರೆ | Bike Captured
ಉತ್ತರಪ್ರದೇಶ ಮೀರತ್‌ನ ಸೌರಭ್ ರಜಪೂತ್ ದೇಹ ಡ್ರಮ್ನಲ್ಲಿದೆ ಎಂಬುದನ್ನು ಪತ್ತೆಹಚ್ಚಿದ್ದೇ ಅವರ ಆರು ವರ್ಷದ ಮಗಳು. ತಾಯಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಕೊಲೆಗೈದು ತಂದೆಯನ್ನು ಡ್ರಮ್ನಲ್ಲಿ ಸಿಮೆಂಟ್ನಿಂದ ಮುಚ್ಚಿರುವುದನ್ನು ಸೌರಭ್ ಪುತ್ರಿ ಕಣ್ಣಾರೆ ನೋಡಿದ್ದಳು. ಮನೆಯಲ್ಲಿ ಸೌರಭ್ ಕಾಣುತ್ತಿಲ್ಲ ಎಂದು ಅವರ ತಾಯಿ ಗೋಳಾಡಿದ್ದಾರೆ. ಮಗ ನಾಪತ್ತೆಯಾಗಿದ್ದಾನೆ ಆತನನ್ನು ಹುಡುಕಿಕೊಡಿ ಎಂದು ತಾಯಿ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದೇ ತಡ ಮೃತ ಸೌರಭ್ ಪುತ್ರಿ, ಅಪ್ಪ ಡ್ರಮ್ನಲ್ಲಿ ಇದ್ದಾರೆ ಎಂದು ಸುಳಿವು ನೀಡಿದ್ದಳು. ಆದರೆ, ಆ ಕ್ಷಣಕ್ಕೆ ಇದು ಉಪಯೋಗವಾಗಲಿಲ್ಲ. ಕಾರಣ, ಬಾಲಕಿ ತಮಾಷೆ ಮಾಡುತ್ತಿದ್ದಾಳೆ ಎಂದು ಮನೆಯವರು ಅಂದುಕೊಂಡಿದ್ದರು.
#WATCH | Meerut, UP | Saurabh Rajput Murder case | Mother of deceased Saurabh Rajput says, “They (Muskan and her partner Sahil) murdered my son, and after that she went for a trip…She locked the body in the room…the owner of the house had asked them (Saurabh and Muskan) to… https://t.co/QyeUSKIwcu pic.twitter.com/hgs3tLfMsk
— ANI (@ANI) March 19, 2025
ಮಾಟ ಮಂತ್ರ, ವಶೀಕರಣ ಸೇರಿದಂತೆ ಇತರೆ ಕೆಲಸಗಳನ್ನು ಮಾಡುತ್ತಿದ್ದ ಪ್ರಿಯಕರ ಸಾಹಿಲ್ ಜತೆಗಿನ ಅನೈತಿಕ ಸಂಬಂಧವನ್ನು ಮುಂದುವರಿಸಲು ಮುಸ್ಕಾನ್, ಆತನ ಜತೆಗೂಡಿ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ಪತಿ ಸೌರಭ್ ರಜಪೂತ್ನನ್ನು ಮಾರ್ಚ್ 4ರಂದು ಕೊಲೆಗೈದು, 15 ತುಂಡು ಮಾಡಿ, ಡ್ರಮ್ನಲ್ಲಿ ಸಿಮೆಂಟ್ ಹಾಕಿ ಮುಚ್ಚಿಟ್ಟಿದ್ದಳು. ತನಿಖೆ ಮೂಲಕ ಪ್ರಕರಣವನ್ನು ಬೆಳಕಿಗೆ ತಂದ ಪೊಲೀಸರು, ಸಾಹಿಲ್ ಮತ್ತು ಮುಸ್ಕಾನ್ಳನ್ನು ಬಂಧಿಸಿ, ಪ್ರಸ್ತುತ ವಿಚಾರಣೆಗೆ ಒಳಪಡಿಸಿದ್ದಾರೆ.
“ಪತಿಯನ್ನು ಕೊಲೆಗೈದು ಪ್ರಿಯಕರನ ಜತೆಗೆ ಮುಸ್ಕಾನ್ ಪ್ರವಾಸ ಹೋಗಿದ್ದಳು. ಮನೆಗೆ ಹಿಂತಿರುಗಿದಾಗ ಮನೆ ಮಾಲೀಕರು ಮಗ ಮತ್ತು ಸೊಸೆಯಿದ್ದ ಕೊಠಡಿಯನ್ನು ತೆರವುಗೊಳಿಸಲು ಹೇಳಿದ್ದರು. ಅಂತೆಯೇ ನಾವು ಅಲ್ಲೇ ಇದ್ದ ಡ್ರಮ್ ತೆರೆವುಗೊಳಿಸಲು ಕಾರ್ಮಿಕರಿಗೆ ಹೇಳಿದೆವು. ಅವರು ಎಷ್ಟೇ ಪ್ರಯತ್ನಿಸಿದರೂ ಡ್ರಮ್ ಎತ್ತಲು ಆಗಲಿಲ್ಲ. ಕಾರಣ ಅದು ತುಂಬ ಭಾರವಾಗಿತ್ತು. ಇದರಲ್ಲೇನಿದೆ ಎಂದು ಮುಸ್ಕಾನ್ಗೆ ಕೇಳಿದ್ರೆ, ಕಸ ಇದೆ ಅಷ್ಟೇ ಎಂದಳು. ನಂತರ ಅದನ್ನು ಒಡೆದು ನೋಡಿದಾಗ ಅದರಲ್ಲಿ ಪುತ್ರನ ದೇಹದ ಭಾಗಗಳು ಸಿಮೆಂಟ್ನಲ್ಲಿ ಮುಚ್ಚಿಹೋಗಿತ್ತು” ಎಂದು ರೇಣು ದೇವಿ ಹೇಳಿದ್ದಾರೆ.
ಇದನ್ನೂ ಓದಿ: ಬೆಟ್ಟಿಂಗ್ ಬಿಸಿ: ಪ್ರಕರಣ ಕುರಿತು ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ | Prakash Raj
ಮಗನನ್ನು ಕಳೆದುಕೊಂಡ ತಾಯಿ ರೇಣು ದೇವಿ, “ಸೌರಭ್ ಕೊಲೆ ಬಗ್ಗೆ ಮುಸ್ಕಾನ್ ಪೋಷಕರಿಗೆ ಮೊದಲೇ ಗೊತ್ತಿತ್ತು. ಆದರೂ, ಏನೂ ಮಾತನಾಡಿಲ್ಲ. ಅಪರಾಧವನ್ನು ಮುಚ್ಚಿಹಾಕುವ ಮತ್ತು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಮುಸ್ಕಾನ್, ಆಕೆಯ ಕುಟುಂಬಸ್ಥರು ಮತ್ತು ಪ್ರಿಯಕರನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಿ. ಅವರನ್ನೆಲ್ಲ ಗಲ್ಲಿಗೇರಿಸಿ” ಎಂದು ಗೋಳಾಡಿದರು,(ಏಜೆನ್ಸೀಸ್).
ಬೆಟ್ಟಿಂಗ್ ಬಿಸಿ: ಪ್ರಕರಣ ಕುರಿತು ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ | Prakash Raj