RCB, ಮುಂಬೈ ಇಂಡಿಯನ್ಸ್​​! ಐಪಿಎಲ್​ನಲ್ಲಿ ಇಬ್ಬರು ದಿಗ್ಗಜರ ಕಮಾಲ್ ಖಚಿತ: ಮಾಜಿ ಕ್ರಿಕೆಟಿಗ ಭರವಸೆ | IPL 2025

ವಿಜಯವಾಣಿ (23)
Published on

IPL 2025: ನಾಳೆ ಒಂದು ದಿನ ಕಳೆದರೆ 2025ರ ಐಪಿಎಲ್​ಗೆ ಭರ್ಜರಿ ಚಾಲನೆ ದೊರೆಯಲಿದೆ. ಶುಭಾರಂಭ ಪಂದ್ಯದಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಕೋಲ್ಕತ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿ ಸೆಣಸಲಿದೆ. ಚಾಂಪಿಯನ್ಸ್ ಟ್ರೋಫಿ ಮುಕ್ತಾಯಗೊಂಡ ಬೆನ್ನಲ್ಲೇ ಐಪಿಎಲ್​​ನತ್ತ ಮುಖಮಾಡಿದ ಕ್ರಿಕೆಟ್ ಪ್ರಿಯರು, 10 ಬಲಿಷ್ಠ ತಂಡಗಳ ನಡುವಿನ ಭಾರೀ ಪೈಪೋಟಿ ನೋಡಲು ಕಾತರದಿಂದ ಕಾಯತೊಡಗಿದ್ದಾರೆ.

ಇನ್ನು ಐಪಿಎಲ್​ ಶುರುವಿನ ಬೆನ್ನಲ್ಲೇ ಟೀಮ್ ಇಂಡಿಯಾದ ಇಬ್ಬರು ಸ್ಟಾರ್​ ಕ್ರಿಕೆಟಿಗರು, ದಿಗ್ಗಜರ ಬಗ್ಗೆ ಸಂತಸ ವ್ಯಕ್ತಪಡಿಸಿದ ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ, "ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮ ಮತ್ತು ವಿರಾಟ್ ಕೊಹ್ಲಿಗೆ ಈ ಸೀಸನ್​ ನಿಜಕ್ಕೂ ಅದ್ಭುತವಾಗಿರಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಹುಮ್ಮಸ್ಸಿನಲ್ಲೇ ಇಬ್ಬರೂ ಅಭಿಮಾನಿಗಳು ತುಂಬಿರುವ ಮೈದಾನಕ್ಕಿಳಿಯಲಿದ್ದಾರೆ" ಎಂದರು.

"ಐಪಿಎಲ್​ನಲ್ಲಿ ಬೌಲರ್​ಗಳಿಗೆ ಮನಬಂದಂತೆ ಬೀಸಲು ರೋಹಿತ್ ಮತ್ತು ಕೊಹ್ಲಿಗೆ ಅಂತಹ ಕಷ್ಟವೇನಲ್ಲ. ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುವುದು ಅವರಿಗೆ ಸಮಸ್ಯೆ ಅಲ್ಲ. ಸದಾ ರನ್​ಗಳ ಹೊಳೆ ಹರಿಸುವ ಕೊಹ್ಲಿ ಈ ವರ್ಷದ ಆವೃತ್ತಿಯಲ್ಲೂ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಬೆಂಗಳೂರಿನ ಪಿಚ್​ ಅನ್ನು ಅವರು ಚೆನ್ನಾಗಿ ಅರಿತಿದ್ದಾರೆ. ಇನ್ನು ರೋಹಿತ್​ 18ನೇ ಆವೃತ್ತಿಯಲ್ಲಿ ಕಮಾಲ್ ಮಾಡಲಿದ್ದಾರೆ. ಬಹಳ ನಿರೀಕ್ಷೆಗಳನ್ನು ಈಗಾಗಲೇ ಹುಟ್ಟುಹಾಕಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net