ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯದ ಶಿಕ್ಷಣ ಬೋಧನೆ:ಸಚಿವ ಮಧು ಬಂಗಾರಪ್ಪ ಹೇಳಿಕೆ

madhu bangarappa
Published on

ಬೆಂಗಳೂರು: ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಾರದ ಎರಡು ಅವಧಿಯಲ್ಲಿ "ನೈತಿಕ ಮೌಲ್ಯದ ಶಿಕ್ಷಣ ಬೋಧನೆ'ಯನ್ನು ಕಡ್ಡಾಯವಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಈ ಸಂಬಂಧ ಪರೀಕ್ಷೆಯನ್ನೂ ನಡೆಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ವಿಧಾನ ಪರಿಷತ್​ನಲ್ಲಿ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆ, ಪರಿಹಾರೋಪಾಯಗಳ ಚರ್ಚೆಯಲ್ಲಿ ಆಡಳಿತ ಹಾಗೂ ಪ್ರತಿಪಗಳ ಅನೇಕ ಸದಸ್ಯರು ಅಭಿಪ್ರಾಯ, ಸಲಹೆ, ಸೂಚನೆಯನ್ನು ಸರ್ಕಾರಕ್ಕೆ ನೀಡಿದ್ದರು. ಇದಕ್ಕೆ ಉತ್ತರಿಸಿದ ಸಚಿವರು, ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ದುಶ್ಚಟಗಳಿಗೆ ಒಳಗಾಗುವುದು, ಅಡ್ಡದಾರಿ ಹಿಡಿಯುವುದು ಸೇರಿದಂತೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಈಗಾಗಲೇ ಅನೇಕ ಕ್ರಮಕಯಗೊಂಡಿದೆ. ಜೊತೆಗೆ, ಹಿಂದಿನ ವರ್ಷಗಳಲ್ಲಿ ಇದ್ದಂತೆ ಬರುವ ಶೈಣಿಕ ಸಾಲಿನಿಂದ , 1ರಿಂದ 12ನೇ ತರಗತಿವರೆಗೆ ನೀತಿ ಪಾಠ ಅಥವಾ ನೈತಿಕ ಮೌಲ್ಯದ ಶಿಕ್ಷಣ ಬೋಧನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ಮಕ್ಕಳಲ್ಲಿ ಸತ್ಯ ಪ್ರಮಾಣಿಕತೆ, ಸಂಯಮ, ತ್ಯಾಗ, ಪರೋಪಕಾರ, ಸ್ವಾವಲಂಭನೆ, ಸ್ವಾಭಿಮಾನ, ಏಕಾಗ್ರತೆ, ಪರಿಶ್ರಮ, ಪ್ರೀತಿ, ಗೌರವ ಸೇರಿದಂತೆ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇವುಗಳನ್ನು ಮಕ್ಕಳಲ್ಲಿ ಬೆಳೆಸುವ ದೃಷ್ಟಿಯಿಂದ ನೀತಿ ಪಾಠ ಬೋಧನೆ ಅತ್ಯಂತ ಅಗತ್ಯವಾಗಿದೆ. ರಾಷ್ಟ್ರಪ್ರೇಮ, ದೇಶದ ಭವ್ಯ ಪರಂಪರೆ, ಕಲೆ, ಸಂಸತಿ , ಸಾಹಿತ್ಯ ಮತ್ತು ಐತಿಹಾಸಿಕ ಸ್ಥಳಗಳ ಕುರಿತು ಈ ಅವಧಿಯಲ್ಲಿ ಪರಿಚಯಿಸುವ ಕೆಲಸ ಆಗಬೇಕು. ಬೋಧಿಸಲಾಗುವ ವಿವಿಧ ವಿಷಯಗಳಲ್ಲಿನ ನೈತಿಕ ಮೌಲ್ಯಗಳನ್ನಾಧರಿಸಿ ತಿಂಗಳಿಗೊಮ್ಮೆ ಪರೀೆ ನಡೆಸಲಾಗುವುದು. ಉತ್ತಮ ಉತ್ತರಗಳನ್ನು ಆಯ್ಕೆ ಮಾಡಿ ತರಗತಿಯಲ್ಲಿ ಓದಿಸುವ ಮೂಲಕ ಮಕ್ಕಳನ್ನು ಪ್ರೇರೇಪಿಸಲಾಗುವುದು ಎಂದು ಸಚಿವರು ವಿವರಿಸಿದರು.

8 ರಿಂದ 12ನೇ ತರಗತಿಗೆ ಲೈಂಗಿಕ ಶಿಕ್ಷಣ: ನೈತಿಕ ಮೌಲ್ಯದ ಶಿಣದ ಜೊತೆಗೆ ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ 8ರಿಂದ 12ನೇ ತರಗತಿ ಮಕ್ಕಳಿಗೆ ವಾರದಲ್ಲಿ 2 ದಿನ ಲೈಂಗಿಕ ಶಿಕ್ಷಣಕ್ಕೆ ಕಡ್ಡಾಯವಾಗಿ ಮೀಸಲಿಡಲಾಗುವುದು ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net