

ಬೆಂಗಳೂರು: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರಕರಣ ಸಂಬಂಧ ಲೋಕಾಯುಕ್ತ, ಸಿಐಡಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಸದ್ಯದಲ್ಲೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಕೆ.ಎನ್.ರಾಜಣ್ಣ ಭರವಸೆ ಬುಧವಾರ ನೀಡಿದರು.
ವಿಧಾನಪರಿಷತ್ತಿಗೆ ನಿಯಮ 330ರ ಮೇರೆಗೆ ಕಾಂಗ್ರೆಸ್ನ ಎಂ.ಎಲ್.ಅನಿಲ್ ಕುಮಾರ್ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಮೂರಲ್ಲಿ ಯಾವುದಾದರೂ ಒಂದರಿಂದ ತನಿಖೆಗೆ ಆದೇಶಿಸಲು ಪರಿಶೀಲಿಸುತ್ತೇನೆ. ತನಿಖೆ ನಡೆಸಿ 4 ತಿಂಗಳದೊಳಗೆ ವರದಿ ನೀಡುವಂತೆ ಸೂಚನೆ ಕೊಡುತ್ತೇನೆ. ವರದಿ ಆಧಾರದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಕ್ರಿಮಿನಲ್ ಮೊಕದ್ದಮೆ ಸಹ ದಾಖಲು ಮಾಡಲಾಗುವುದು ಎಂದರು.
ಸಿಬಿಐ ಸಹ ನಮಗೆ ಪತ್ರ ಬರೆದಿದ್ದರು.ಆದರೆ, ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರೂ ಪ್ರತಿಫಲ ಸಿಗಲ್ಲ. ಶಾಸಕರು ನೀಡುವ ಸಲಹೆ ಮೇರೆಗೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ನಮ್ಮ ಸರ್ಕಾರದಿಂದ ಏನೇ ಆದೇಶ ಹೊರಡಿಸಿದ್ದರೂ ಕೆಲವರು ಹೈಕೋರ್ಟ್ನಿಂದ ತಡೆಯಾಜ್ಱ ತರುತ್ತಿದ್ದಾರೆ. ಈವರೆಗೆ ದಾಖಲಾದ 10 ಎ್ಐಆರ್ಗೆ ಹೈಕೋರ್ಟ್ನಿಂದ ತಡೆಯಾೆ ಬಂದಿದೆ. ಕೋರ್ಟ್ ನೀಡಿರುವ 8 ತಡೆಯಾೆಗೆ ತೆರವು ಮಾಡುವ ಕಾರ್ಯವನ್ನು ನಮ್ಮ ಅಧಿಕಾರಿಗಳು ಮಾಡುತ್ತಿದ್ದಾರೆ. ತಡೆಯಾಜ್ಞೆಯಿಂದಾಗಿ ಎಲ್ಲೋ ಒಂದೇ ಕಡೆ ಸೂಕ್ತವಾಗಿ ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ಸಚಿವರು ಹೇಳಿದರು.
ಉನ್ನತ ಶಿಣ ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ ಬರೋಬ್ಬರಿ 300-400 ಕೋಟಿ ರೂ.ಹಣ ದುರುಪಯೋಗವಾಗಿದೆ. ಹಾಗಾಗಿ, ಈ ಪ್ರಕರಣ ಕುರಿತು ದೊಡ್ಡ ಮಟ್ಟದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಮನವಿ ಮಾಡಿದರು.ಇದಕ್ಕೂ ಮುನ್ನ ಬಿಜೆಪಿಯ ಸಿಟಿ ರವಿ, ಈ ಪ್ರಕರಣವನ್ನು ತನಿಖೆ ನಡೆಸಲು ಸಿಬಿಐಗೆ ಮತ್ತು ಕಾಂಗ್ರೆಸ್ನ ಅನಿಲ್ ಕುಮಾರ್ ಲೋಕಾಯುಕ್ತಕ್ಕೆ ವಹಿಸಬೇಕೆಂದು ಸಲಹೆ ನೀಡಿದರು.