Sunita Williams: ಸರಿ ಸುಮಾರು 9 ತಿಂಗಳು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿದ್ದ ನಾಸಾ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕೊನೆಗೂ ಭೂಮಿಗೆ ಸಮೀಪಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತೀಯ ಕಾಲಮಾನ ಬುಧವಾರ (ಮಾ.19) ಬೆಳಗ್ಗೆ 3.27ಕ್ಕೆ ಭೂಮಿಗೆ ಕಾಲಿಡಲಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಭಾರತೀಯರು ಗಗನಯಾತ್ರಿಗಳ ಸುರಕ್ಷಿತ ಲ್ಯಾಂಡಿಂಗ್ಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಆಗ ನನಗೆ 11 ವರ್ಷ, 56 ಸಾವಿರ ರೂ. ವಿಮೆ ಹಣ! ಬಾಲ್ಯದ ದಿನಗಳಲ್ಲಿ ಪಟ್ಟ ಕಷ್ಟ ನೆನೆದು ಥಮನ್ ಭಾವುಕ | Thaman
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಯ ಮೇಲೆ ಕಾಲಿಡಲಿ ಎಂದು ಕೋಟ್ಯಂತರ ಜನರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಆದಾಗ್ಯೂ, ಒಂದು ಹಳ್ಳಿಯಲ್ಲಿ ಮಾತ್ರ ಸುನೀತಾ ಅವರ ಯೋಗಕ್ಷೇಮ, ಸುರಕ್ಷಿತ ಆಗಮನಕ್ಕಾಗಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಹೋಮಗಳನ್ನು ಕೈಗೊಳ್ಳಲಾಗಿದೆ. ಸುನೀತಾ ಆಗಮಿಸುತ್ತಿದ್ದಂತೆ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಲಿದೆ ಎಂದು ಆ ಊರಿನವರು ಹೇಳಿಕೊಂಡಿದ್ದಾರೆ.
ಸುನೀತಾ ವಿಲಿಯಮ್ಸ್ ಮೂಲತಃ ಭಾರತೀಯರು. ಆದರೆ, ಅವರ ಬಗ್ಗೆ ಹೆಚ್ಚಿನ ಮಾಹಿತಿ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಜುಲಾಸನ್ ಸುನೀತಾ ವಿಲಿಯಮ್ಸ್ ಅವರ ಪೂರ್ವಜರ ಗ್ರಾಮ. ಅವರಿಗೆ ಇನ್ನೂ ಅಲ್ಲಿ ಸಂಬಂಧಿಕರಿದ್ದಾರೆ. ಕಳೆದ ವರ್ಷ ಸುನೀತಾ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಾಗಿನಿಂದ, ಇಲ್ಲಿನ ಗ್ರಾಮಸ್ಥರು ಚಿಂತಿತರಾಗಿದ್ದಾರೆ. ಅವರ ಸುರಕ್ಷಿತ ಬರುವಿಕೆಗಾಗಿ ಊರಿನವರು ಪೂಜೆ ಸಲ್ಲಿಸುತ್ತಿದ್ದಾರೆ. ಅವರ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ.
ಇದನ್ನೂ ಓದಿ: ನಾನು ನನ್ನ ಜೀವನದಲ್ಲಿ ಯಾವುದೇ ಅಕ್ರಮ ಎಸಗಿಲ್ಲ; ಕುಮಾರಸ್ವಾಮಿ|No illegality
“ನಾವೆಲ್ಲರೂ ನಮ್ಮ ಸಹೋದರಿ ಸುನೀತಾಳ ಆಗಮನಕ್ಕಾಗಿ ಕಾಯುತ್ತಿದ್ದೇವೆ. ನಮ್ಮ ತಾಯಿ, ಸಹೋದರಿ ಮತ್ತು ಸಹೋದರ ಸೇರಿದಂತೆ ಈ ದೇಶದ ಎಲ್ಲರೂ ಸಂತೋಷವಾಗಿದ್ದಾರೆ. ಅವಳು ಸುರಕ್ಷಿತವಾಗಿ ಭೂಮಿಗಿಳಿಯಲಿ ಎಂದು ನಾವು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ. ನಾವು ದೇವಾಲಯಗಳಿಗೆ ಹೋಗಿ ಸುನೀತಾಳಿಗಾಗಿ ಪೂಜೆ ಸಲ್ಲಿಸಿದ್ದೇವೆ. ಯಜ್ಞ, ಹೋಮ-ಹವನ ಮಾಡಿಸುತ್ತಿದ್ದೇವೆ” ಎಂದು ಸುನೀತಾರ ಸಹೋದರ ದಿನೇಶ್ ರಾವಲ್ ಹೇಳಿದ್ದಾರೆ,(ಏಜೆನ್ಸೀಸ್).
ಆಗ ನನಗೆ 11 ವರ್ಷ, 56 ಸಾವಿರ ರೂ. ವಿಮೆ ಹಣ! ಬಾಲ್ಯದ ದಿನಗಳಲ್ಲಿ ಪಟ್ಟ ಕಷ್ಟ ನೆನೆದು ಥಮನ್ ಭಾವುಕ | Thaman