ಜೆಂಟಲ್​ ರಿಮೈಂಡರ್​; ಆರ್​ಸಿಬಿಯನ್ನು ಮತ್ತೊಮ್ಮೆ ಕೆಣಕಿದ ಅಂಬಾಟಿ ರಾಯುಡು

blank

ಅಹಮದಾಬಾದ್​: ಮೇ 22ರಂದು ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ನಾಲ್ಕು ವಿಕೆಟ್​ಗಳ ಸೋಲು ಕಂಡಿದ್ದು, ಕೋಟ್ಯಂತರ ಅಭಿಮಾನಿಗಳ ಬಹುವರ್ಷದ ಕನಸನ್ನು ಮತ್ತೊಮ್ಮೆ ಹುಸಿಯಾಗಿಸಿದೆ. ಹಾಲಿ ಟೂರ್ನಿಯಲ್ಲಿ ಆರ್​ಸಿಬಿ ಪ್ರದರ್ಶನವನ್ನು ಹಲವರು ಕೊಂಡಾಡಿದ್ದು, ಸಿಎಸ್​ಕೆ ತಂಡದ ಮಾಜಿ ಆಟಗಾರರೊಬ್ಬರು ಆರ್​ಸಿಬಿ ಕುರಿತು ತಮ್ಮ ಟೀಕಾಪ್ರಹಾರವನ್ನು ಮುಂದುವರೆಸಿದ್ದಾರೆ.

ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಆರ್​ಸಿಬಿ ಸೋಲಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ಟೀಕಾಪ್ರಹಾರವನ್ನು ಮುಂದುವರೆಸಿದ್ದಾರೆ. ಈ ಪೋಸ್ಟ್​ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಅಂಬಾಟಿ ರಾಯುಡು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಗುಡುಗಿದ್ದಾರೆ.

16ನೇ ಆವೃತ್ತಿಯ ಐಪಿಎಲ್​ ಫೈನಲ್​ನಲ್ಲಿ ಗುಜರಾತ್​ ಟೈಟಾನ್ಸ್​ ವಿರುದ್ಧ ಸಿಎಸ್​ಕೆ ಗೆದ್ದ ಬಳಿಕ ತಂಡದ ಆಟಗಾರರಾದ ರವೀಂದ್ರ ಜಡೇಜಾ, ಡೆವೆನ್​ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್​ ಅಲಿ ಐದು ಬಾರಿ ಗೆದ್ದಿದ್ದೇವೆ ಎಂದು ಕೈ ಸನ್ನೆ ಮಾಡುತ್ತ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ಮತ್ತೊಮ್ಮೆ ಪೋಸ್ಟ್​ ಮಾಡಿರುವ ಅಂಬಾಟಿ ರಾಯುಡು 5 ಬಾರಿಯ ಚಾಂಪಿಯನ್​ಗಳಿಂದ ಒಂದು ರೀತಿಯ ಜ್ಞಾಪನೆ. ಕೆಲವೊಮ್ಮೆ ಇದು ಅಗತ್ಯವಾಗಿರುತ್ತದೆ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಈ ಪೋಸ್ಟ್​ಗೆ ಸಿಎಸ್​ಕೆ ಆಟಗಾರರಾದ ಮಥೀಶ ಪಥಿರಣಾ ಹಾಗೂ ದೀಪಕ್​ ಚಹರ್​ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಹಾರ ಬದಲಾಯಿಸುವಾಗ ವಧುವಿಗೆ ಮುತ್ತಿಟ್ಟ ವರ; ಮುಂದೆ ನಡೆದಿದ್ದು ಮಾತ್ರ…

ಈ ಹಿಂದೆ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ಸಂದರ್ಭದಲ್ಲಿ ವ್ಯಂಗ್ಯಭರಿತವಾಗಿ ಮಾತನಾಡಿದ್ದ ಅಂಬಾಟಿ ರಾಯುಡು, ಸಿಎಸ್​ಕೆಯನ್ನು ಮಣಿಸಿ ಆರ್​ಸಿಬಿ ಅವರು ಪ್ಲೇಆಫ್​ ಪ್ರವೇಶಿಸಿರುವುದು ಫೈನಲ್​ನಲ್ಲಿ ಗೆದ್ದ ರೀತಿ ಸಂಭ್ರಮಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂದರೆ ಬೆಂಗಳೂರಿನ ಬೀದಿಗಳಲ್ಲಿ ಅಭಿಮಾನಿಗಳು ಸಂಭ್ರಮಿಸಿದ ರೀತಿ. ಇದನ್ನು ನೋಡಿದರೆ ನನ್ನ ಪ್ರಕಾರ ಸಿಎಸ್​ಕೆ ಅವರು ಆರ್​ಸಿಬಿ ತಮ್ಮ ಬಳಿ ಇರುವ ಒಂದು ಟ್ರೋಫಿಯನ್ನು ದಾನ ಮಾಡಿದರೆ ಅವರು ಅದನ್ನು ಇಟ್ಟುಕೊಂಡು ಬೆಂಗಳೂರಿನ ಸುತ್ತ ಪೆರೇಡ್​ ಮಾಡಬಹುದು ಎಂದು ಹೇಳುವ ಮೂಲಕ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೀಗ ಮತ್ತೊಮ್ಮೆ ಆರ್​ಸಿಬಿ ಕುರಿತು ಮಾತನಾಡುವ ಮೂಲಕ ಟೀಕೆಗೆ ಗುರಿಯಾಗಿರುವ ಅಂಬಾಟಿ ರಾಯುಡು ವಿರುದ್ಧ ಆರ್​ಸಿಬಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಯಾವ ಕಾರಣಕ್ಕಾಗಿ ನೀವು ಆರ್​ಸಿಬಿ ವಿರುದ್ಧ ಸದಾ ಹೀಗೆ ಮಾತನಾಡುತ್ತಿರುತ್ತೀರಾ ಎಂದು ಹಲವರು ಪ್ರಶ್ನಿಸಿದ್ದಾರೆ.

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…