More

    IPL 2023: ಐಪಿಎಲ್​ ಟ್ರೋಫಿ ಜತೆಗೆ ವೀಕ್ಷಕರ ಹೃದಯವನ್ನೂ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​!

    ನವದೆಹಲಿ: ಅತ್ಯುತ್ತಮ ಐಪಿಎಲ್​ ಆವೃತ್ತಿಗಳಲ್ಲಿ ಒಂದಾದ 16ನೇ ಐಪಿಎಲ್​ ಎಂ.ಎಸ್​. ಧೋನಿ ಟ್ರೋಫಿ ಎತ್ತಿ ಹಿಡಿಯುವುದರೊಂದಿಗೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಬಾರಿ ಚೆನ್ನೈ ಸೂಪರ್​​ ಕಿಂಗ್ಸ್​ ತಂಡ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ 5ನೇ ಬಾರಿಗೆ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ.

    ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕ

    ಅನೇಕ ಹಳೆಯ ದಾಖಲೆಗಳು ಈ ಆವೃತ್ತಿಯಲ್ಲಿ ಮುರಿದಿವೆ. ಅದರಲ್ಲಿ ಟಿವಿ ವೀಕ್ಷಕರ ಸಂಖ್ಯೆಯು ಕೂಡ ಒಂದಾಗಿದೆ. ಇದೆಲ್ಲವೂ ಮಾರ್ಚ್​ 31ರಂದು ಗುಜರಾತ್​ ಟೈಟಾನ್ಸ್​ (ಜಿಟಿ) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ನಡುವಿನ ಮೊದಲ ಪಂದ್ಯದಿಂದಲೇ ಆರಂಭವಾಯಿತು. ಮೊದಲ ದಿನವೇ ಧೋನಿ 7 ಬಾಲ್​ಗೆ 14 ರನ್​ ಗಳಿಸಿ ಅಜೇಯರಾದರು. ಅಂದು ಜಿಟಿ ತವರಿನಲ್ಲಿ ಹಳದಿ ಸಮುದ್ರವೇ ಕಾಣುತ್ತಿತ್ತು. ಗುಜರಾತ್​ನಲ್ಲಿ ನಡೆದ ಪಂದ್ಯದಲ್ಲಿ ಇಡೀ ಕ್ರೀಡಾಂಗಣದಲ್ಲಿ ಸಿಎಸ್​ಕೆ ಅಭಿಮಾನಿಗಳ ಸಂಭ್ರಮವೇ ಮುಗಿಲು ಮುಟ್ಟಿತ್ತು. ಬಾರ್ಕ್​ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಮೂಲಗಳ ಪ್ರಕಾರ ಮೊದಲ ದಿನವೇ ಟಿವಿ ವೀಕ್ಷಣೆಯಲ್ಲಿ 5.6 ಕೋಟಿಗೂ ಅಧಿಕ ಪೀಕ್​ ಕಾನ್​ಕರೆಂಟ್​ (peak concurrent) ವೀಕ್ಷಣೆ ದಾಖಲಾಗಿತ್ತು. ಇದು ಐಪಿಎಲ್​ ಇತಿಹಾಸದಲ್ಲೇ ಅತ್ಯಧಿಕವಾಗಿದೆ.

    ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸಲು 4 ಸಾವಿರ ರೂ.! | ಚಾಲಕನ ವಿರುದ್ಧ ಸಾರಿಗೆ ಇಲಾಖೆಯಿಂದ ನೋಟಿಸ್

    ಧೋನಿ ಮೇನಿಯಾ

    ನಿಜ ಹೇಳಬೇಕೆಂದರೆ, ಈ ಬಾರಿಯ ಐಪಿಎಲ್,​ ಧೋನಿ ಮೇನಿಯಾವಾಗಿತ್ತು. ಎಲ್ಲ ಮಾದರಿ ಪಂದ್ಯಗಳಿಗೆ ನಿವೃತ್ತಿ ಘೋಷಿಸಿ ಐಪಿಎಲ್​ನಲ್ಲಿ ಉಳಿದುಕೊಂಡಿರುವ ಧೋನಿ, ಐಪಿಎಲ್​ಗೂ ನಿವೃತ್ತಿ ಹೇಳುವ ಹಂತದಲ್ಲಿದ್ದಾರೆ. ಹೀಗಾಗಿಯೇ ಈ ಬಾರಿ ಟೂರ್ನಿಯಲ್ಲಿ ಧೋನಿ ಅವರು ವಿಶೇಷ ಗಮನ ಸೆಳೆದರು. ಅಲ್ಲದೆ, ಧೋನಿ ಬ್ಯಾಟಿಂಗ್​ ನೋಡುವುದಕ್ಕಾಗಿಯೇ ಈ ಆವೃತ್ತಿಯಲ್ಲಿ ಅವರ ಅಭಿಮಾನಿಗಳು ಟಿವಿ ಮುಂದೆ ಗಮ್​ನಂತೆ ಅಂಟಿಕೊಂಡಿದ್ದರು. ಲಖನೌ ಸೂಪರ್​ ಜೇಂಟ್ಸ್​ ವಿರುದ್ಧದ ಪಂದ್ಯದಲ್ಲಿ ಫೈನಲ್​ ಓವರ್​ನಲ್ಲಿ ಮಾರ್ಕ್​ವುಡ್​ ಬೌಲಿಂಗ್​ಗೆ ಬ್ಯಾಕ್​ ಟು ಬ್ಯಾಕ್​ ಸಿಕ್ಸರ್​ ಬಾರಿಸಿದ್ದು ಎಲ್ಲರಿಗೂ ನೆನಪಿದೆ. ಈ ಆಟಕ್ಕೆ ಟಿವಿ ವೀಕ್ಷಣೆಯಲ್ಲಿ 5 ಕೋಟಿಗೂ ಅಧಿಕ ಪೀಕ್​ ಕಾನ್​ಕರೆಂಟ್​ ವೀಕ್ಷಣೆ ದಾಖಲಾಗಿದೆ.

    3.2 ಕೋಟಿ ಕನಿಷ್ಠ ಪೀಕ್​ ಕಾನ್​ಕರೆಂಟ್​ ವೀಕ್ಷಣೆ

    ಈ ವರ್ಷ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಹಿಂದಿನ ಎಲ್ಲ ಮಾದರಿಯ ದಾಖಲೆಗಳನ್ನು ಮುರಿದಿವೆ. ಲೀಗ್​ ಹಂತದಲ್ಲಿ 66 ಪಂದ್ಯಗಳಲ್ಲಿ 40 ಪಂದ್ಯಗಳು 3 ಕೋಟಿಗೂ ಅಧಿಕ ಪೀಕ್​ ಕಾನ್​ಕರೆಂಟ್​ ವೀಕ್ಷಣೆಯನ್ನು ಹೊಂದಿದೆ. 66 ಪಂದ್ಯಗಳವರೆಗೂ ಸಿಎಸ್​ಕೆ ಆಡಿದ ಪಂದ್ಯಗಳನ್ನು ಗಮನಿಸಿದರೆ, ಒಂದು ಪಂದ್ಯವನ್ನು ಹೊರತುಪಡಿಸಿದರೆ ಉಳಿದ ಎಲ್ಲ ಪಂದ್ಯಗಳು 3.2 ಕೋಟಿ ಕನಿಷ್ಠ ಪೀಕ್​ ಕಾನ್​ಕರೆಂಟ್​ ವೀಕ್ಷಣೆ ಹೊಂದಿವೆ.

    ಇದುವೆರೆಗೂ ನಾವು ನೋಡಿದ ಐಪಿಎಲ್​ನಲ್ಲಿ ಈ ಬಾರಿಯ ಐಪಿಎಲ್​ ಆವೃತ್ತಿ ಅನೇಕ ಕಾರಣಗಳಿಂದ ಅತ್ಯುತ್ತಮ ಐಪಿಎಲ್​ ಎನಿಸಿಕೊಂಡಿದೆ. ಆ ಕಾರಣಗಳು ಈ ಕೆಳಕಂಡಂತಿವೆ.

    * ಇದು ಧೋನಿ ಅವರ ಕೊನೆಯ ಐಪಿಎಲ್​ ಇರಬಹುದು ಎಂಬ ಭಾವನೆ. ಆದರೆ, ಟ್ರೋಫಿ ಗೆದ್ದ ಬಳಿಕ ನಿವೃತ್ತಿಯ ಬಗ್ಗೆ ಮಾತನಾಡಿದ ಧೋನಿ ಮತ್ತೊಂದು ಆವೃತ್ತಿ ಐಪಿಎಲ್​ ಆಡುವ ಆಸೆ ವ್ಯಕ್ತಪಡಿಸಿ, ಊಹಾಪೋಹಕ್ಕೆ ತೆರೆ ಎಳೆದರು.
    * ಶುಭಮನ್​ ಗಿಲ್​, ವಿರಾಟ್​ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ಫಾಫ್​ ಡುಪ್ಲೆಸಿಸ್​, ಕಾನ್​ವೇ, ರುತುರಾಜ್​ ಗಾಯಕವಾಡ್​ ಅವರ ಅಮೋಘ ಬ್ಯಾಟಿಂಗ್​ ಫಾರ್ಮ್​
    * ಭವಿಷ್ಯದ ಆಟಗಾರರಾದ ಯಶಸ್ಸಿ ಜೈಸ್ವಾಲ್​ ಮತ್ತು ರಿಂಕ್​ ರಾಜ್​ ಬ್ಯಾಟಿಂಗ್​ ಪ್ರದರ್ಶನ
    * ಮೊಹಮ್ಮದ್​ ಶಮಿ, ಮೋಹಿತ್​ ಶರ್ಮ, ರಶೀದ್​ ಖಾನ್​, ಚಾವ್ಲಾ ಮತ್ತು ಚಹಾಲ್​ ಬೌಲಿಂಗ್​ ಲಯ

    ಇದನ್ನೂ ಓದಿ: ಮೊಬೈಲ್​ ಪತ್ತೆಗೆ ಡ್ಯಾಂ ನೀರು ಖಾಲಿ ಮಾಡಲು ಮೌಖಿಕ ಆದೇಶ ಕೊಟ್ಟ ಅಧಿಕಾರಿಗೆ ಬಿತ್ತು ಭಾರೀ ದಂಡ!

    ದಿಗ್ಭ್ರಮೆಗೊಳಿಸುವಂತಿದೆ ಟಿವಿ ವೀಕ್ಷಣೆ

    * ಐಪಿಎಲ್​ ಆರಂಭದ ಪಂದ್ಯದ ಪೀಕ್​ ಕಾನ್​ಕರೆಂಟ್​ ವೀಕ್ಷಣೆ 5.6 ಕೋಟಿಗೂ ಅಧಿಕ
    * ಈ ವರ್ಷ 66 ಪಂದ್ಯಗಳಲ್ಲಿ 44 ಪಂದ್ಯಗಳು 3 ಕೋಟಿಗೂ ಅಧಿಕ ಪೀಕ್​ ಕಾನ್​ಕರೆಂಟ್​ ವೀಕ್ಷಣೆ ಪಡೆದಿವೆ
    * ಈ ವರ್ಷದ ಐಪಿಎಲ್‌ನಲ್ಲಿ ಹಿಂದಿನ ಎಲ್ಲಾ ವೀಕ್ಷಕರ ದಾಖಲೆಗಳು ಪುಡಿಪುಡಿಯಾಗಿದ್ದು, ಮೊದಲ 66 ಪಂದ್ಯಗಳಿಗೆ 48.2 ಕೋಟಿ ವೀಕ್ಷಕರು ಪಂದ್ಯಗಳನ್ನು ಕಣ್ತುಂಬಿಕೊಂಡಿದ್ದಾರೆ
    * ಈ ಐಪಿಎಲ್​ 350 ಬಿಲಿಯನ್​ ಮಿನಿಟ್​ ವಾಚ್​ ಟೈಮ್​ ದಾಖಲೆ ಬರೆದಿದೆ.

    IPL 2023

    ಶುಭಮನ್ ಗಿಲ್‌ನಿಂದ ಯಶಸ್ವಿ ಜೈಸ್ವಾಲ್‌ವರೆಗೆ: IPL 2023 ಸೀಸನ್​ನ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ…

    IPL 2023 | ಸಾರ್ವಕಾಲಿಕ ದಾಖಲೆ ಬರೆದ ಸ್ಟಾರ್ ಸ್ಪೋರ್ಟ್; 41.1 ಕೋಟಿ ಜನ ವೀಕ್ಷಕರು, 31600 ಕೋಟಿ ನಿಮಿಷ ವೀಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts