More

    ಶುಭಮನ್ ಗಿಲ್‌ನಿಂದ ಯಶಸ್ವಿ ಜೈಸ್ವಾಲ್‌ವರೆಗೆ: IPL 2023 ಸೀಸನ್​ನ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ…

    ಅಹಮದಾಬಾದ್: ಆಲ್​ರೌಂಡರ್​ ರವೀಂದ್ರ ಜಡೇಜಾ (15*ರನ್, 6 ಎಸೆತ, 1 ಬೌಂಡರಿ, 1 ಸಿಕ್ಸರ್ ಹಾಗೂ 38ಕ್ಕೆ 1 ವಿಕೆಟ್) ಕೊನೇ ಓವರ್​ನಲ್ಲಿ ನಡೆಸಿದ ದಿಟ್ಟ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡ ಐಪಿಎಲ್-16ರಲ್ಲಿ ಚಾಂಪಿಯನ್ ಪಟ್ಟವೇರಿದೆ. ಮಳೆಬಾಧಿತ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು 5 ವಿಕೆಟ್​ಗಳಿಂದ ರೋಚಕ ಗೆಲುವು ದಾಖಲಿಸಿದ ಎಂಎಸ್ ಧೋನಿ ಪಡೆ 5ನೇ ಬಾರಿಗೆ ಪ್ರಶಸ್ತಿ ಗೆದ್ದು ದಾಖಲೆ ಬರೆಯಿತು. ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಅಭಿಯಾನ ಆರಂಭಿಸಿದ್ದ ಗುಜರಾತ್ ಟೈಟಾನ್ಸ್ ತವರಿನಲ್ಲಿ ಮುಗ್ಗರಿಸಿ ರನ್ನರ್ ಅಪ್​ಗೆ ತೃಪ್ತಿಪಟ್ಟಿತು.

    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೀಸಲು ದಿನವಾದ ಸೋಮವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಗುಜರಾತ್ ಟೈಟಾನ್ಸ್ ತಂಡ, ತಮಿಳುನಾಡಿನ ಯುವ ಬ್ಯಾಟರ್ ಸಾಯಿ ಸುದರ್ಶನ್ (96 ರನ್, 47 ಎಸೆತ, 8 ಬೌಂಡರಿ, 6 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪರ್- ಬ್ಯಾಟರ್ ವೃದ್ಧಿಮಾನ್ ಸಾಹ (54 ರನ್, 39 ಎಸೆತ,5 ಬೌಂಡರಿ, 1 ಸಿಕ್ಸರ್) ಅರ್ಧಶತಕ ಸಿಡಿಸಿ ಉತ್ತಮ ಆರಂಭ ಒದಗಿಸಿದ ನೆರವಿನಿಂದ 4 ವಿಕೆಟ್​ಗೆ 214 ರನ್​ಗಳ ಸವಾಲಿನ ಮೊತ್ತ ಕಲೆಹಾಕಿತು. ನಂತರ ಸಿಎಸ್​ಕೆ ಚೇಸಿಂಗ್ ಆರಂಭಿಸಿದಾಗ 3 ಎಸೆತಗಳಲ್ಲಿ 4 ರನ್ ಕಲೆಹಾಕಿದಾಗ ಸುರಿದ ಮಳೆಯಿಂದಾಗಿ ಆಟ ನಿಂತಿತು. 2 ಗಂಟೆಗಳ ಬಳಿಕ ಆಟ ಪುನರಾರಂಭಗೊಂಡಾಗ ಡಕ್ವರ್ತ್-ಲೂಯಿಸ್ ನಿಯಮದನ್ವಯ 15 ಓವರ್​ಗಳಲ್ಲಿ 171 ರನ್​ಗಳ ಪರಿಷ್ಕೃತ ಗುರಿ ನೀಡಲಾಯಿತು. ಇದಕ್ಕೆ ಪ್ರತಿಯಾಗಿ ಸಿಎಸ್​ಕೆ 15 ಓವರ್​ಗಳಲ್ಲಿ 5 ವಿಕೆಟ್​ಗೆ 171 ರನ್ ಕಲೆಹಾಕಿ ಗೆಲುವಿನ ಕೇಕೆ ಹಾಕಿತು.

    ಇದನ್ನೂ ಓದಿ: ನಮೋ ಸರ್ಕಾರಕ್ಕೆ 9 ವರ್ಷ: ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಹೆಚ್ಚು ಶ್ರಮಿಸುತ್ತೇವೆಂದ ಪ್ರಧಾನಿ

    ಫೈನಲ್‌ ಮುಕ್ತಾಯದ ನಂತರ, ಐಪಿಎಲ್‌ನಿಂದ ಎಲ್ಲ ವಿಜೇತರ ಹೆಸರನ್ನು ಘೋಷಿಸಲಾಯಿತು. ಪ್ರಶಸ್ತಿ ಗೆದ್ದವರು ಸಂಪೂರ್ಣ ಪಟ್ಟಿ ಈ ಕೆಳಕಂಡಂತಿದೆ.

    * ಐಪಿಎಲ್​ 2023 ವಿಜೇತ ತಂಡ: ಚೆನ್ನೈ ಸೂಪರ್​ ಕಿಂಗ್ಸ್ (ಸಿಎಸ್​ಕೆ)​
    * ರನ್ನರ್​ ಅಪ್​ ತಂಡ: ಗುಜರಾತ್​ ಟೈಟಾನ್ಸ್ (ಜಿಟಿ)​
    * ಮೂರನೇ ಸ್ಥಾನ ಪಡೆದ ತಂಡ: ಮುಂಬೈ ಇಂಡಿಯನ್ಸ್​ (ಎಂಐ)
    * ನಾಲ್ಕನೇ ಸ್ಥಾನ ಪಡೆದ ತಂಡ: ಲಖನೌ ಸೂಪರ್​ ಜೇಂಟ್ಸ್​ (ಎಲ್​ಎಸ್​ಜಿ)
    * ಈ ಸೀಸನ್​ನ ಅತ್ಯುತ್ತಮ ಸ್ಥಳಗಳು: ಕೋಲ್ಕತದ ಈಡನ್​ ಗಾರ್ಡನ್​ ಮತ್ತು ಮುಂಬೈನ ವಾಂಖೆಡೆ ಸ್ಟೇಡಿಯಂ
    * ಐಪಿಎಲ್​ ಫೇರ್​ ಪ್ಲೇ ಅವಾರ್ಡ್​: ಡೆಲ್ಲಿ ಕ್ಯಾಪಿಟಲ್ಸ್​ (ಡಿಸಿ)
    * ಆರೆಂಜ್​ ಕ್ಯಾಪ್​ (ಅತ್ಯಧಿಕ ರನ್​ ಗಳಿಸಿದ ಆಟಗಾರ): ಶುಭಮನ್​ ಗಿಲ್​ (ಜಿಟಿ) 890 ರನ್​
    * ಪರ್ಪಲ್​ ಕ್ಯಾಪ್​ (ಅತ್ಯಧಿಕ ವಿಕೆಟ್​ ಪಡೆದ ಬೌಲರ್​): ಮೊಹಮ್ಮದ್​ ಶಮಿ (ಜಿಟಿ) 28 ವಿಕೆಟ್ಸ್
    * ಟೂರ್ನಮೆಂಟ್​ನ ಸೂಪರ್​ ಸ್ಟ್ರೈಕರ್​: ಗ್ಲೇನ್​ ಮ್ಯಾಕ್ಸ್​ವೆಲ್​ (ಆರ್​ಸಿಬಿ)
    * ಟೂರ್ನಮೆಂಟ್​ನ ಗೇಮ್​ ಚೇಂಜರ್​: ಶುಭಮನ್​ ಗಿಲ್​ (ಜಿಟಿ)
    * ಟೂರ್ನಮೆಂಟ್​ನ ಅತ್ಯಮೂಲ್ಯ ಆಸ್ತಿ: ಶುಭಮನ್​ ಗಿಲ್​ (ಜಿಟಿ)
    * ಹೆಚ್ಚು ಬೌಂಡರಿ (4) ಬಾರಿಸಿದ ಆಟಗಾರ: ಶುಭಮನ್​ ಗಿಲ್​ (ಜಿಟಿ)
    * ಅತಿ ಉದ್ದದ ಸಿಕ್ಸರ್​ ಬಾರಿಸಿದ ಆಟಗಾರ: ಫಾಫ್​ ಡುಪ್ಲಿಸಿಸ್​ (ಆರ್​ಸಿಬಿ) (115 ಮೀಟರ್​)
    * ಟೂರ್ನಮೆಂಟ್​ ಅತ್ಯುತ್ತಮ ಕ್ಯಾಚ್​ ಪ್ರಶಸ್ತಿ: ರಶೀದ್​ ಖಾನ್​ (ಜಿಟಿ)
    * ಈ ಸೀಸನ್​ನ ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್​ (ರಾಜಸ್ಥಾನ ರಾಯಲ್ಸ್​)
    ಈ ಸೀಸನ್​ನ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದ್ದಿರುವ ಜೈಸ್ವಾಲ್ ಅವರು ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂತಿಮ ತಂಡದಲ್ಲಿ ಸ್ಥಾನವನ್ನು ಸಹ ಪಡೆದಿದ್ದಾರೆ.

    ದುಪ್ಪಟ್ಟ ಹಾಕದವರೇ ಟಾರ್ಗೆಟ್​: ಸಿಕ್ಕಿಬಿದ್ದ ಸೈಕೋ ಶರವಣನ್​, ನಿಟ್ಟುಸಿರು ಬಿಟ್ಟ ಮಹಿಳೆಯರು

    ನಟ ಬಾಲಯ್ಯ ವಿಡಿಯೋ ಮೂಲಕ ಪೊಲೀಸರಿಗೆ ತಿರುಗೇಟು ಕೊಟ್ಟ ನಟಿ ಡಿಂಪಲ್​ ಹಯಾತಿ!

    ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಮುಂದಾಗಿದ್ಯಾ ಸರ್ಕಾರ? ಶಿಕ್ಷಣ ಸಚಿವರ ಪ್ರತಿಕ್ರಿಯೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts