More

    ನಮೋ ಸರ್ಕಾರಕ್ಕೆ 9 ವರ್ಷ: ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಹೆಚ್ಚು ಶ್ರಮಿಸುತ್ತೇವೆಂದ ಪ್ರಧಾನಿ

    ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದಿಗೆ 9 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

    ದೇಶದ ಸೇವೆಯಲ್ಲಿ ನಾವಿಂದು 9 ವರ್ಷಗಳನ್ನು ಪೂರೈಸಿರುತ್ತಿರುವ ಈ ಸಂದರ್ಭದಲ್ಲಿ ನನ್ನ ಹೃದಯ ನಮ್ರತೆ ಮತ್ತು ಕೃತಜ್ಞತೆಯಿಂದ ತುಂಬಿದೆ. ನಾವು ಮಾಡಿದ ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ಕ್ರಮ ಜನರ ಜೀವನವನ್ನು ಸುಧಾರಿಸುವ ಉದ್ದೇಶವಾಗಿತ್ತು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಾವು ಇನ್ನೂ ಹೆಚ್ಚು ಶ್ರಮಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಇದನ್ನೂ ಓದಿ: ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯಕರನಿಗೆ ಬಿಸಿನೀರು ಎರಚಿ, ಬಾಟಲ್​ನಿಂದ ಹಲ್ಲೆ ಮಾಡಿ ಪ್ರೇಯಸಿ ಎಸ್ಕೇಪ್​!

    ಬಿಜೆಪಿಯು ಇಂದಿನಿಂದ ದೇಶದಾದ್ಯಂತ ಒಂದು ತಿಂಗಳ ಕಾಲ ವಿಶೇಷ ಸಂಪರ್ಕ ಅಭಿಯಾನವನ್ನು ಯೋಜಿಸಿದೆ. ಕಳೆದ ಒಂಬತ್ತು ವರ್ಷಗಳಲ್ಲಿ “ರಾಷ್ಟ್ರವೇ ಮೊದಲು” ಎಂಬ ಮಂತ್ರದೊಂದಿಗೆ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ “ಅಭೂತಪೂರ್ವ” ಅಭಿವೃದ್ಧಿಯನ್ನು ಕಂಡಿದೆ ಎಂದು ಬಿಜೆಪಿ ಪಕ್ಷವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ವಿಪಕ್ಷಗಳ ಬಹಿಷ್ಕಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನೂತನ ಸಂಸತ್ ಭವನವನ್ನು ಉದ್ಘಾಟಿಸಿದರು. ನೂತನ ಕಟ್ಟಡವನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಬಣ್ಣಿಸಿದ ಅವರು, ಅದರ ನಿರ್ಮಾಣದಲ್ಲಿ ತೊಡಗಿರುವ ಕೆಲ ಕಾರ್ಮಿಕರನ್ನು ಸನ್ಮಾನಿಸಿದರು.

    ಇದನ್ನೂ ಓದಿ: ನಟ ಬಾಲಯ್ಯ ವಿಡಿಯೋ ಮೂಲಕ ಪೊಲೀಸರಿಗೆ ತಿರುಗೇಟು ಕೊಟ್ಟ ನಟಿ ಡಿಂಪಲ್​ ಹಯಾತಿ!

    ನರೇಂದ್ರ ಮೋದಿ ಅವರು 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎರಡನೇ ಅವಧಿಗೆ 2019ರ ಮೇ 30ರಂದು ಪ್ರಮಾಣ ವಚನ ಸ್ವೀಕರಿಸಿದರು. (ಏಜೆನ್ಸೀಸ್​)

    2 ತಿಂಗಳಲ್ಲಿ ಮೂರು ಮರಿಗಳು ಸೇರಿ 6 ಚೀತಾ ಸಾವು: ಕೇಂದ್ರ ಸರ್ಕಾರ ಕೊಟ್ಟ ಉತ್ತರ ಹೀಗಿದೆ….

    ಪರಿಷತ್​ಗೆ ಶುರುವಾಯ್ತು ಪೈಪೋಟಿ: ಏಳು ಸ್ಥಾನಕ್ಕೆ ಎರಡೂವರೆ ಡಜನ್ ಆಕಾಂಕ್ಷಿಗಳು

    ನಟ ಬಾಲಯ್ಯ ವಿಡಿಯೋ ಮೂಲಕ ಪೊಲೀಸರಿಗೆ ತಿರುಗೇಟು ಕೊಟ್ಟ ನಟಿ ಡಿಂಪಲ್​ ಹಯಾತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts