More

    2 ತಿಂಗಳಲ್ಲಿ ಮೂರು ಮರಿಗಳು ಸೇರಿ 6 ಚೀತಾ ಸಾವು: ಕೇಂದ್ರ ಸರ್ಕಾರ ಕೊಟ್ಟ ಉತ್ತರ ಹೀಗಿದೆ….

    ಭೋಪಾಲ್​: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕೇವಲ 2 ತಿಂಗಳಲ್ಲಿ ಮೂರು ಮರಿಗಳು ಸೇರಿ 6 ಚೀತಾಗಳ ಸಾವಿನ ಹಿಂದೆ ಯಾವುದೇ ತಪ್ಪು ನಡೆದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

    ಜಾಗತಿಕ ವನ್ಯಜೀವಿ ಸಾಹಿತ್ಯದ ಪ್ರಕಾರ ಚಿರತೆಗಳಲ್ಲಿ ಶೇ. 90 ರಷ್ಟು ಶಿಶು ಮರಣವನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಸವಾಲುಗಳ ದಶಕ: ಕೋವಿಡ್ ಸಾಂಕ್ರಾಮಿಕ ಸಂಕಷ್ಟ ನಡುವೆಯೂ ಒಂದಿಷ್ಟು ಪ್ರಗತಿ

    ಯಾವುದೇ ಪ್ರಯೋಗಗಳನ್ನು ಮಾಡಿಲ್ಲ

    ಎರಡು ಆಫ್ರಿಕನ್ ರಾಷ್ಟ್ರಗಳಿಂದ ಕುನೋಗೆ ವರ್ಗಾವಣೆಗೊಂಡಿರುವ ಯಾವುದೇ ಚೀತಾಗಳೊಂದಿಗೆ ನಾವು ಯಾವುದೇ ಪ್ರಯೋಗಗಳನ್ನು ಮಾಡಿಲ್ಲ. ಚೀತಾಗಳು ಸಮೂಹ ಜೀವಿಗಳು. ಅವುಗಳು ಒಕ್ಕೂಟದಲ್ಲಿ ವಾಸಿಸುತ್ತವೆ. ಗಂಡು ಚೀತಾಗಳ ಒಕ್ಕೂಟದೊಂದಿಗೆ ಹೆಣ್ಣು ಚೀತಾಗಳ ಸಂಭೋಗದಲ್ಲೂ ಯಾವುದೇ ಪ್ರಯೋಗ ಮಾಡಲಾಗಿಲ್ಲ. ದಾಖಲೆಗಳ ಆಧಾರದ ಮೇಲೆ ಮತ್ತು ಆಫ್ರಿಕನ್ ತಜ್ಞರ ಅನುಮತಿಯ ನಂತರ ಇದನ್ನು ಮಾಡಲಾಗಿದೆ ಎಂದು ಅರಣ್ಯಗಳ ಮಹಾನಿರ್ದೇಶಕ ಸಿಪಿ ಗೋಯಲ್ ಹೇಳಿದರು.

    ಪ್ರವಾಸಕ್ಕೆ ಕಳುಹಿಸಲಾಗುವುದು

    ಚೀತಾ ಯೋಜನೆಯಡಿಯಲ್ಲಿ ಚೀತಾ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಉದ್ಯೋಗಿಗಳನ್ನು ದಕ್ಷಿಣ ಆಫ್ರಿಕಾದ ನಮೀಬಿಯಾಕ್ಕೆ ಅಧ್ಯಯನ ಪ್ರವಾಸಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುವುದು ಎಂದು ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ. ರಕ್ಷಣೆ, ಸಂರಕ್ಷಣೆ, ಪ್ರಚಾರ ಮತ್ತು ಪ್ರಸ್ತಾವಿತ ಚೀತಾ ಸಂರಕ್ಷಣಾ ಪಡೆಗೆ ಕೇಂದ್ರ ಸರ್ಕಾರದಿಂದ ಹಣಕಾಸಿನ ಸಂಪನ್ಮೂಲಗಳು ಸೇರಿದಂತೆ ಎಲ್ಲ ಸಂಭಾವ್ಯ ಸಹಕಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಯಾದವ್ ಅವರು ಭೋಪಾಲ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯ ಅರಣ್ಯ ಸಚಿವ ಡಾ. ವಿಜಯ್ ಶಾ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಚೀತಾ ಯೋಜನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. ಭೋಪಾಲ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಫ್‌ಎಂ) ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) 23ನೇ ಸಭೆಯ ಅಧ್ಯಕ್ಷತೆಯನ್ನೂ ವಹಿಸಿದ್ದರು.

    ಇದನ್ನೂ ಓದಿ: ಐಪಿಎಲ್​ 2023: ಸಿಎಸ್​ಕೆಗೆ ಗೆಲುವು; ಧೋನಿ ಪಡೆ 5ನೇ ಬಾರಿಗೆ ಚಾಂಪಿಯನ್​

    ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, ಮಧ್ಯಪ್ರದೇಶವು ಹುಲಿಗಳ ರಾಜ್ಯವಾಗಿದ್ದು, ಇದು ಪ್ರತಿಷ್ಠೆಯ ವಿಷಯವಾಗಿದೆ. ಚೀತಾ ಯೋಜನೆಯ ಯಶಸ್ಸಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

    ಮಾರ್ಚ್ 27 ರಿಂದ ಕುನೋದಲ್ಲಿ ಮೂರು ವಯಸ್ಕ ಚೀತಾಗಳು ಮತ್ತು ಮೂರು ಮರಿಗಳು ಮೃತಪಟ್ಟಿವೆ. ಮಹತ್ವಾಕಾಂಕ್ಷೆಯ ಚೀತಾ ಯೋಜನೆಯ ಯಶಸ್ಸಿನ ಬಗ್ಗೆ ಇದೀಗ ಆತಂಕ ಕಾಡತೊಡಗಿದೆ. (ಏಜೆನ್ಸೀಸ್​)

    ಮೋದಿ ನವಹಾದಿ; 9 ವರ್ಷಗಳ ಆಡಳಿತದ ಚಿತ್ರಣ

    ನ್ಯಾಯದೇವತೆ: ಒಂದೇ ದಿನ ಎರಡು ವಿಲ್ ಮಾಡಿಟ್ಟ ತಾತಾ; ಮುಂದೇನು?

    ಭಗವಂತನ ನಗು: ಮನೋಲ್ಲಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts