More

    ನ್ಯಾಯದೇವತೆ: ಒಂದೇ ದಿನ ಎರಡು ವಿಲ್ ಮಾಡಿಟ್ಟ ತಾತಾ; ಮುಂದೇನು?

    ನ್ಯಾಯದೇವತೆ: ಒಂದೇ ದಿನ ಎರಡು ವಿಲ್ ಮಾಡಿಟ್ಟ ತಾತಾ; ಮುಂದೇನು?ನಮ್ಮ ತಾತನಿಗೆ ಇಬ್ಬರು ಹೆಣ್ಣು ಮಕ್ಕಳು. ನಮ್ಮ ತಾಯಿ ಮತ್ತು ಅವರ ತಂಗಿ. ನಮ್ಮ ಅಜ್ಜಿಯೂ ಇಲ್ಲ. ನಮ್ಮ ತಾತನಿಗೆ ಸ್ವಯಾರ್ಜಿತ ಆಸ್ತಿ ಇತ್ತು . ನಮ್ಮ ತಾತ ಒಂದೇ ದಿನ ಎರಡು ವಿಲ್ ಮಾಡಿದ್ದಾರೆ. ಒಂದು ವಿಲ್ ಪ್ರಕಾರ ಆಸ್ತಿ ನನಗೆ ಬರುತ್ತದೆ. ಇನ್ನೊಂದು ವಿಲ್ ಪ್ರಕಾರ ಆಸ್ತಿ ನಮ್ಮ ಚಿಕ್ಕಮ್ಮನ ಮಗನಿಗೆ ಹೋಗುತ್ತದೆ. ನಮ್ಮ ತಾತ ತೀರಿಕೊಂಡು ಎರಡು ವರ್ಷಗಳಾಗಿವೆ. ಈಗ ನನಗೂ ನಮ್ಮ ಚಿಕ್ಕಮ್ಮನ ಮಗನಿಗೂ ಗಲಾಟೆ ಆಗುತ್ತಿದೆ. ಎರಡೂ ವಿಲ್ ನೋಂದಣಿ ಆಗಿಲ್ಲ. ಎರಡು ವಿಲ್ ಗಳಿಗೂ ಸಾಕ್ಷಿಗಳು ಸಹ ಅವರವರೇ. ಈಗ ಏನು ಮಾಡುವುದು. ನನಗೆ ಆಸ್ತಿ ಬಿಟ್ಟುಕೊಡಲು ಇಷ್ಟವಿಲ್ಲ.

    ಉತ್ತರ: ಎರಡು ವಿಲ್​ಗಳನ್ನು ಒಬ್ಬರೇ ವ್ಯಕ್ತಿ ಮಾಡಿದಾಗ ಯಾವುದು ಕೊನೆಯ ವಿಲ್ ಆಗಿರುತ್ತದೋ ಅದೇ ಊರ್ಜಿತವಾಗುತ್ತದೆ. ಸಾಮಾನ್ಯವಾಗಿ ಮೊದಲ ವಿಲ್ ಬರೆದಿದ್ದು ನಂತರ ಎರಡನೇ ವಿಲ್ ಬರೆಸಿದರೆ, ಮೊದಲ ವಿಲ್ ಬರೆಸಿದ್ದರ ಬಗ್ಗೆ ಎರಡನೆಯ ವಿಲ್​ನಲ್ಲಿ ತಿಳಿಸಿರುತ್ತಾರೆ. ಅದನ್ನು ರದ್ದು ಮಾಡಿರುವ ಬಗ್ಗೆಯೂ ತಿಳಿಸಿರುತ್ತಾರೆ. ನೀವು ನಿಮ್ಮ ವಿಲ್ ಆಧಾರದ ಮೇಲೆ ಆಸ್ತಿ ನಿಮ್ಮದು ಎಂದು ಹಕ್ಕು ಘೊಷಣೆಯ ದಾವೆ ಹಾಕಿಕೊಳ್ಳಬೇಕು. ನ್ಯಾಯಾಲಯದಲ್ಲಿ ಎರಡು ವಿಲ್​ಗಳಲ್ಲಿ ಯಾವುದು ಕೊನೆಯದು ಎಂದು ಪರಿಗಣಿಸುತ್ತಾರೆ. ಆ ವಿಲ್ ಸಂಶಯಾತ್ಮಕ ಪರಿಸ್ಥಿತಿಯಲ್ಲಿ ಮಾಡಲ್ಪಟ್ಟ ವಿಲ್ ಆಗಿರದಿದ್ದರೆ ಅದನ್ನು ಸಿಂಧು ಎಂದು ಪರಿಗಣಿಸಿ ನಿಮ್ಮ ಹಕ್ಕನ್ನು ಘೊಷಿಸುತ್ತಾರೆ. ನಿಮ್ಮ ವಿಷಯದಲ್ಲಿ ಎರಡು ವಿಲ್​ಗಳಿಗೂ ಸಾಕ್ಷಿಗಳು ಸಹ ಅವರವರೇ ಆಗಿರುವುದರಿಂದ ನೀವು ಹಠ ಮಾಡುವುದಕ್ಕಿಂತ ರಾಜಿ ಮಾಡಿಕೊಳ್ಳುವುದು ಉತ್ತಮ. ವಿಲ್ ಸಾಕ್ಷಿಗಳ ಹೇಳಿಕೆ ನಿಮ್ಮ ಪ್ರಕರಣದಲ್ಲಿ ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ನ್ಯಾಯಾಲಯದಲ್ಲಿ ಎರಡು ವಿಲ್​ಗಳನ್ನು ಸಹ ಸಿಂಧು ಎಂದು ಪರಿಗಣಿಸದೇ ಹೋದರೆ, ಆಗ, ನಿಮ್ಮ ತಾತನ ಆಸ್ತಿ ಅವರ ಇಬ್ಬರು ಮಕ್ಕಳಿಗೆ (ನಿಮ್ಮ ತಾಯಿಗೆ ಮತ್ತು ನಿಮ್ಮ ಚಿಕ್ಕಮ್ಮನಿಗೆ) ಸಮವಾಗಿ ಹೋಗುತ್ತದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

    (ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಹಿರಿಯ ಮಧ್ಯಸ್ಥಿಕೆಗಾರರು).

    ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ ಮಕ್ಕಳಿಗೆ ಹೊಸ ಪುಸ್ತಕ ಕೊಡಿ: ಸಿಎಂಗೆ ಸಮಾನ ಮನಸ್ಕರ ಒಕ್ಕೂಟದ ಮನವಿ

    ಭೀಕರ ಅಪಘಾತ: ಸಾವಿಗೀಡಾದ ಹತ್ತೂ ಮಂದಿ ಒಂದೇ ಕುಟುಂಬದವರು; ಮನ ಕಲಕುವ ಪರಿಸ್ಥಿತಿಯಲ್ಲಿ ಮಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts