More

    ಭೀಕರ ಅಪಘಾತ: ಸಾವಿಗೀಡಾದ ಹತ್ತೂ ಮಂದಿ ಒಂದೇ ಕುಟುಂಬದವರು; ಮನ ಕಲಕುವ ಪರಿಸ್ಥಿತಿಯಲ್ಲಿ ಮಗು

    ಮೈಸೂರು: ಇಂದು ಮೈಸೂರಿನಲ್ಲಿ ಇನ್ನೋವಾ ಕಾರು ಮತ್ತು ಖಾಸಗಿ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವಿಗೀಡಾದವರ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿದ್ದು, ಸತ್ತ ಹತ್ತೂ ಮಂದಿ ಒಂದೇ ಕುಟುಂಬದವರು ಎಂಬುದು ತಿಳಿದುಬಂದಿದೆ.

    ಮೈಸೂರಿನ ಕೊಳ್ಳೆಗಾಲದ ಬಳಿ ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರೆಲ್ಲರೂ ಬಳ್ಳಾರಿ ತಾಲೂಕಿನ ಸಂಗನಕಲ್ಲ ಗ್ರಾಮಸ್ಥರು. ಮೈಸೂರಿನ ಕೆ. ಆರ್. ಆಸ್ಪತ್ರೆಗೆ ಭೇಟಿ ನೀಡಿದ ಬಳ್ಳಾರಿ ಗ್ರಾಮಾಂತರ ಶಾಸಕ ಹಾಗೂ ಸಚಿವ ನಾಗೇಂದ್ರ ಸಾವಿಗೀಡಾದವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದು, ಮೃತಪಟ್ಟ ಎಲ್ಲರೂ ಒಂದೇ ಕುಟುಂಬದವರು ಎಂಬುದನ್ನು ತಿಳಿಸಿದ್ದಾರೆ.

    ಇದನ್ನೂ ಓದಿ: ಭೀಕರ ಅಪಘಾತ: ಮೂರು ಕುಟುಂಬದ 9 ಮಂದಿ ಸಾವು, ಮೂವರ ಪರಿಸ್ಥಿತಿ ಗಂಭೀರ

    ಮೃತ ಹತ್ತು ಮಂದಿ ಒಂದೇ ಕುಟುಂಬದವರು. ಲಿಂಗಾಯತ ಸಮುದಾಯದ ಇವರ ವೃತ್ತಿ ಖಾನಾವಳಿಗಳಿಗೆ ರೊಟ್ಟಿ ಮಾಡಿಕೊಡುವುದು. ಮನೆಯವರೆಲ್ಲ ಸೇರಿ ರೊಟ್ಟಿ ಮಾರಿ ಜೀವನ ನಡೆಸುತ್ತಿದ್ದರು. ಚುನಾವಣೆಯಲ್ಲಿ ನನ್ನ ಪರವಾಗಿ ಈ ಕುಟುಂಬದವರು ಕೆಲಸ ಮಾಡಿದ್ದರು. ನಾನು ಈ ಕುಟುಂಬವನ್ನ ಬಹಳ ಹತ್ತಿರದಿಂದ ಬಲ್ಲೆ. ಎಲ್ಲರಿಗೂ ಅನ್ನ ಹಾಕುತ್ತಿದ್ದವರೇ ಇಂದು ದುರ್ಮರಣಕ್ಕೆ ಒಳಗಾಗಿದ್ದಾರೆ. ಬದುಕುಳಿದವರ ಪರಿಸ್ಥಿತಿಯೂ ಗಂಭೀರವಾಗಿದೆ. ಅದರಲ್ಲೂ ಒಂದು ಮಗುವಿನ ಸ್ಥಿತಿ ಮನಕಲುಕುತ್ತಿದೆ. ಗಾಯಗೊಂಡಿರುವ ಮಗು ತಂದೆಯನ್ನು ಕೇಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಶಾಸಕ, ಇವರ ಜೊತೆ ಇದೇ ಕುಟುಂಬದ ಇನ್ನಷ್ಟು ಜನರು ಪ್ರವಾಸಕ್ಕೆ ಬರಬೇಕಿತ್ತು. ಆದರೆ ಕಾರಣಂತರದಿಂದ ಪ್ರವಾಸಕ್ಕೆ ಬಂದಿಲ್ಲ ಎಂದರು.

    ಭೀಕರ ಅಪಘಾತ: ಸಾವಿಗೀಡಾದ ಹತ್ತೂ ಮಂದಿ ಒಂದೇ ಕುಟುಂಬದವರು; ಮನ ಕಲಕುವ ಪರಿಸ್ಥಿತಿಯಲ್ಲಿ ಮಗು

    ಇದನ್ನೂ ಓದಿ: ಒಂಟಿಯಾಗಿದ್ದ, 3 ಮಕ್ಕಳ ವೃದ್ಧತಾಯಿ ಕೋಣೆಯಲ್ಲಿ ಶವವಾಗಿ ಪತ್ತೆ!; ಪ್ರಕರಣ ಸಂಬಂಧ 5 ತಂಡಗಳ ರಚನೆ

    ಈ ಸಾವು ನನಗೆ ವೈಯಕ್ತಿಕವಾಗಿ ಬಹಳ ನೋವು ಕೊಟ್ಟಿದೆ. ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಅವರ ಊರಿನಲ್ಲಿ ಒಂದೇ ಕಡೆ ಮಾಡುತ್ತೇವೆ. ಅವರ ಮನೆಗಳಿಗೆ ಖುದ್ದು ಭೇಟಿ ಕೊಟ್ಟು ವೈಯಕ್ತಿಕ ಪರಿಹಾರ ನೀಡುತ್ತೇನೆ ಎಂದು ಸಚಿವ ನಾಗೇಂದ್ರ ತಿಳಿಸಿದ್ದಾರೆ.

    ಇದನ್ನೂ ಓದಿ: ಪತಿಗಿಂತ ಪತ್ನಿಗೇ ಹೆಚ್ಚು ಸಂಪಾದನೆ; ಜೀವನಾಂಶ ನೀಡಲಾಗದು ಎಂಬುದನ್ನು ಎತ್ತಿ ಹಿಡಿದ ಕೋರ್ಟ್

    ಭೀಕರ ಅಪಘಾತ: ಸಾವಿಗೀಡಾದ ಹತ್ತೂ ಮಂದಿ ಒಂದೇ ಕುಟುಂಬದವರು; ಮನ ಕಲಕುವ ಪರಿಸ್ಥಿತಿಯಲ್ಲಿ ಮಗುಸಚಿವ ಎಚ್.ಸಿ. ಮಹದೇವಪ್ಪ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದು, ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಘಟನೆ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೇನೆ. ಸಿಎಂ ಸಹ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಸ್ಥಿತಿ ಸ್ಥಿರವಾಗಿದೆ. ಒಬ್ಬರ ಸ್ಥಿತಿ ಮಾತ್ರ ಸ್ವಲ್ಪ ಕಷ್ಟಕರವಾಗಿದೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡುತ್ತೇವೆ. ಮೃತ ದೇಹಗಳ ಶವಪರೀಕ್ಷೆ ನಡೆಯುತ್ತಿದೆ. ಬಳಿಕ ಶವಗಳನ್ನು ಅವರ ಗ್ರಾಮಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಲಾರಿಯೊಳಕ್ಕೇ ಸಿಲುಕಿತು ಅರ್ಧ ಕಾರು, 6 ಮಂದಿ ಸ್ಥಳದಲ್ಲೇ ಸಾವು: ಭೀಕರತೆಗೆ ಎದೆ ನಲುಗಿತು ಎಂದ ಸಿಎಂ, ಪರಿಹಾರ ಘೋಷಣೆ

    ನಿಮ್ಮ ದಾಖಲೆ ಬಳಸಿ ಬೇರೆಯವರು ಸಿಮ್ ಖರೀದಿಸಿದ್ದರೆ ತಿಳಿಯುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts