More

    ಮೊಬೈಲ್​ ಪತ್ತೆಗೆ ಡ್ಯಾಂ ನೀರು ಖಾಲಿ ಮಾಡಲು ಮೌಖಿಕ ಆದೇಶ ಕೊಟ್ಟ ಅಧಿಕಾರಿಗೆ ಬಿತ್ತು ಭಾರೀ ದಂಡ!

    ರಾಯಪುರ್​: ಸೆಲ್ಫಿ ತೆಗೆಯುವ ವೇಳೆ ನೀರುಪಾಲಾಗಿದ್ದ ಸಹೋದ್ಯೋಗಿಯ ದುಬಾರಿ ಮೊಬೈಲ್​ ಫೋನ್​ ಅನ್ನು ಮರಳಿ ಪಡೆಯಲು ಇಡೀ ಜಲಾಶಯದ ನೀರನ್ನು ಖಾಲಿ ಮಾಡುವಂತೆ ಮೌಖಿಕ ಆದೇಶ ನೀಡಿದ್ದ ಸರ್ಕಾರಿ ಅಧಿಕಾರಿ ಇದೀಗ ಭಾರೀ ದಂಡ ತೆತ್ತಿದ್ದಾರೆ.

    ದಂಡ ಎಷ್ಟು?

    ಈ ಘಟನೆಯ ಬೆನ್ನಲ್ಲೇ ಜಲಸಂಪನ್ಮೂಲ ಇಲಾಖೆಯ ಅಧೀಕ್ಷಕ ಅಭಿಯಂತರರು ನೀರು ಖಾಲಿ ಮಾಡಿಸಲು ಮೌಖಿಕ ಆದೇಶ ನೀಡಿದ ಅಧಿಕಾರಿಯ ಸಂಬಳದಿಂದ ನಷ್ಟವನ್ನು ಏಕೆ ವಸೂಲಿ ಮಾಡಬಾರದು ಎಂದು ಮೇಲಧಿಕಾರಿಗೆ ಪತ್ರ ಬರೆದಿದ್ದರು. ಬಳಿಕ ಮೇಲಾಧಿಕಾರಿ ಸೂಚನೆಯಂತೆ ಅಧಿಕಾರಿಯ ಬಳಿ 53 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಲಾಗಿದೆ.

    ನಡೆದಿದ್ದೇನು?

    ಈ ಘಟನೆ ಛತ್ತೀಸ್​ಗಢದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‌ನ ಖೇರ್ಕಟ್ಟಾ ಅಣೆಕಟ್ಟಿನಲ್ಲಿ ನಡೆದಿದೆ. ಆಹಾರ ಇಲಾಖೆಯ ಆಧಿಕಾರಿ ರಾಜೇಶ್​ ವಿಶ್ವಾಸ್​ ಎಂಬುವವರು ಖೇರ್ಕಟ್ಟಾ ಅಣೆಕಟ್ಟಿನ ಸುತ್ತ ಭಾನುವಾರ ಸಂಜೆ ವಾಯುವಿಹಾರ ನಡೆಸುತ್ತಿದ್ದರು. ಈ ವೇಳೆ ಸೆಲ್ಫಿ ತೆಗೆಯುವಾಗ ತಮ್ಮ ಕೈನಿಂದ 1 ಲಕ್ಷ ರೂಪಾಯಿ ಬೆಲೆ ಬಾಳುವ ಮೊಬೈಲ್​ ಫೋನ್​ ಜಾರಿ ನೀರಿನೊಳಗೆ ಬಿದ್ದಿದೆ. ದುಬಾರಿ ಬೆಲೆಯ ಫೋನ್ ಕೆಳಗೆ ಬೀಳುತ್ತಿದ್ದಂತೆ, ಜಲಾಶಯದ 15 ಅಡಿ ಆಳದ ನೀರಿನಲ್ಲಿ ಹುಡುಕಾಡಲು ಆರಂಭದಲ್ಲಿ ನುರಿತು ಈಜುಗಾರರನ್ನು ಕರೆತರಲಾಯಿತು. ಆದರೆ, ನೀರಿನ ಅಡಿಯಲ್ಲಿ ಮಣ್ಣು ಮತ್ತು ಕಲ್ಲುಗಳಿದ್ದ ಕಾರಣ ಮೊಬೈಲ್ ಫೋನ್ ಪತ್ತೆಯಾಗಲಿಲ್ಲ.

    ಬಳಿಕ ಸ್ವಲ್ಪ ನೀರನ್ನು ಖಾಲಿ ಮಾಡಿದರೆ ಮೊಬೈಲ್​ ಹುಡುಕಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಬಳಿಕ ತಮಗೆ ಗೊತ್ತಿದ್ದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯನ್ನು ರಾಜೇಶ್​ ವಿಶ್ವಾಸ್​ ಸಂಪರ್ಕಿಸಿದರು. ಬಳಿಕ ಜಲಸಂಪನ್ಮೂಲ ಇಲಾಖೆಯ ಅಧಿಕಾರಿ ಒಬ್ಬರು ನೀರು ಖಾಲಿ ಮಾಡಲು ಮೌಖಿಕ ಆದೇಶ ಮಾಡಿದರು. ಅದರಂತೆ ನೀರು ಖಾಲಿ ಮಾಡಿ ಮೊಬೈಲ್​ ಫೋನ್​ ಕೂಡ ಪತ್ತೆಹಚ್ಚಲಾಯಿತು. ಇದೀಗ ತಾವು ಮಾಡಿ ತಪ್ಪಿಗೆ ದುಬಾರು ದಂಡ ತೆತ್ತಿದ್ದಾರೆ.

    ಸುಮಾರು 21 ಲಕ್ಷ ಲೀಟರ್​ ನೀರನ್ನು ಹೊರತೆಗೆದು ಮೊಬೈಲ್​ ಹುಡುಕಿ ಕೊಟ್ಟಿದ್ದಾರೆ. ನೀರನ್ನು ಹೊರತೆಗೆಯಲು ಸುಮಾರು 7,000-8,000 ಸಾವಿರ ರೂಪಾಯಿ ಮೌಲ್ಯದ ಡೀಸೆಲ್​ ಬಳಸಲಾಗಿದ್ದು ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಂದ ಮೌಖಿಕವಾಗಿ ಆದೇಶ ಹೊರಡಿಸಲಾಗಿತ್ತು. ನನ್ನ ಕ್ರಮದಿಂದ ಯಾರಿಗೂ ಹಾನಿಯಾಗಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಧಿಕಾರಿಯ ಬೇಜವಾಬ್ದಾರಿತನದಿಂದ ಸೋಮವಾರದಿಂದ-ಗುರುವಾರದ ವರೆಗೆ ಸುಮಾರು 21 ಲಕ್ಷ ನೀರು ಪೋಲಾಗಿದ್ದು ಇದನ್ನು 1.500 ಸಾವಿರ ಕೃಷಿ ಭೂಮಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಮೊಬೈಲ್ ಫೋನ್ ನೀರಿಗೆ ಬಿತ್ತೆಂದು ಜಲಾಶಯವನ್ನೇ ಖಾಲಿ ಮಾಡಿಸಿದ ಅಧಿಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts