Expensive Buffalo : ಎರಡು ದುಬಾರಿ ರೋಲ್ಸ್ ರಾಯ್ಸ್ ಕಾರು ಖರೀದಿಸುವಷ್ಟು ಹಣ ನಿಮ್ಮ ಬಳಿ ಇದ್ದರೆ, ಆ ಹಣದಲ್ಲಿ ನೀವು ಎಮ್ಮೆಯನ್ನು ಖರೀದಿಸಬಹುದು. ಇದೇನಪ್ಪಾ ಕಾರಿಗೂ ಎಮ್ಮೆಗೂ ಹೋಲಿಕೆ ಸರಿನಾ? ಎಮ್ಮೆ ಅಷ್ಟೊಂದು ಬೆಲೆ ಬಾಳುತ್ತಾ? ನಿಜಕ್ಕೂ ಇದನ್ನು ನಂಬಬೇಕಾ? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಬರಬಹುದು. ಆದರೆ, ನಾವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ಇದು ಭಾರತದ ದುಬಾರಿ ಎಮ್ಮೆಯ ಕತೆ.
ಹೌದು, ಹರಿಯಾಣದ ಅನ್ಮೋಲ್ ಹೆಸರಿನ ಹೆಮ್ಮೆ ಭಾರತದ ಅತ್ಯಂತ ದುಬಾರಿ ಎಮ್ಮೆಯಾಗಿದೆ. ಈ ಎಮ್ಮೆ ಬರೋಬ್ಬರಿ 23 ಕೋಟಿ ರೂ. ಬೆಲೆ ಬಾಳುತ್ತದೆ. ಇದು 1500 ಕೆಜಿ ತೂಗುತ್ತದೆ.
ಪುಷ್ಕರ್ ಮೇಳ ಮತ್ತು ಮೀರತ್‌ನಲ್ಲಿ ನಡೆದ ಅಖಿಲ ಭಾರತ ರೈತರ ಮೇಳದಂತಹ ಪ್ರಮುಖ ಕೃಷಿ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಲಾದ ಈ ಅನ್ಮೋಲ್ ಎಮ್ಮೆ, ಇಂದು ಭಾರತದ ರೈತ ಸಮುದಾಯದಲ್ಲಿ ಅಮೂಲ್ಯವಾದ ನೋಟವಾಗಿದೆ. ಅನ್ಮೋಲ್ ಅದರ ಗಾತ್ರ, ವಂಶಾವಳಿ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.
ಇದನ್ನೂ ಓದಿ: ತುಳಸಿ ಅಮೆರಿಕದ ಗುಪ್ತಚರ ಮುಖ್ಯಸ್ಥೆ; ಅಮೆರಿಕಾ ಸಂಸತ್ತಿನ ಮೊದಲ ಹಿಂದು ಮಹಿಳೆ
ಎಂಟು ವರ್ಷದ ಅನ್ಮೋಲ್ ಇದೀಗ ಭಾರತದ ಅತ್ಯಂತ ಬೆಲೆಬಾಳುವ ಎಮ್ಮೆ ಎನಿಸಿಕೊಂಡಿದೆ. ಪುಷ್ಕರ ಮೇಳದಲ್ಲಿ ಈ ಎಮ್ಮೆಯನ್ನು ಕೊಳ್ಳಲು ಅನೇಕರು ಮುಂದೆ ಬಂದರು. ಆದರೆ, ಅದನ್ನು ಮಾರುವುದಿಲ್ಲ ಎನ್ನುತ್ತಾರೆ ಮಾಲೀಕ ಪಾಲ್ಮಿಂದ್ರ ಗಿಲ್.
ಅಂದಹಾಗೆ ಅನ್ಮೋಲ್ ಎಮ್ಮೆಗೆ ನಿತ್ಯದ ಆಹಾರಕ್ಕಾಗಿ ಬರೋಬ್ಬರಿ 1,500 ರೂ. ಖರ್ಚು ಮಾಡಲಾಗುತ್ತದೆ. ಅದರ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಣ ಹಣ್ಣುಗಳು ಮತ್ತು ಹೆಚ್ಚಿನ ಕ್ಯಾಲೋರಿ ಆಹಾರವನ್ನು ನೀಡಲಾಗುತ್ತದೆ. ದೈನಂದಿನ ಆಹಾರದಲ್ಲಿ 4 ಕೆಜಿ ದಾಳಿಂಬೆ, 30 ಬಾಳೆಹಣ್ಣು, 20 ಮೊಟ್ಟೆ, 5 ಕೆಜಿ ಹಾಲು ಮತ್ತು 1/4 ಕೆಜಿ ಬಾದಾಮಿ ಇರುತ್ತದೆ. ಜೊತೆಗೆ ಎಣ್ಣೆ ಕಾಯಿ, ಕಡಲೆ, ತುಪ್ಪ, ಸೋಯಾಬೀನ್ ಮತ್ತು ಜೋಳವನ್ನೂ ನೀಡಲಾಗುತ್ತದೆ. ಸಾಸಿವೆ ಮತ್ತು ಬಾದಾಮಿ ಎಣ್ಣೆಯಿಂದ ದಿನಕ್ಕೆ ಎರಡು ಬಾರಿ ಮಸಾಜ್ ಮಾಡಿದ ನಂತರ, ಸ್ನಾನ ಮಾಡಿಸಲಾಗುತ್ತದೆ.
ಇನ್ನು ಅನ್ಮೋಲ್ ಎಷ್ಟು ಬೆಲೆ ಬಾಳುತ್ತದೆ ಅಂದರೆ ಅದರ ಹಣದಲ್ಲಿ ಎರಡು ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿ ಮಾಡಬಹುದು ಅಥವಾ ಹತ್ತು ಮರ್ಸಿಡಿಸ್ ಬೆಂಜ್ ವಾಹನಗಳು ಮತ್ತು ನೋಯ್ಡಾದಲ್ಲಿ ಡಜನ್‌ಗಿಂತಲೂ ಹೆಚ್ಚು ಐಷಾರಾಮಿ ಮನೆಗಳನ್ನು ಖರೀದಿಸಬಹುದು. (ಏಜೆನ್ಸೀಸ್)
ಸೌತ್ ಬ್ಯೂಟಿ ತ್ರಿಷಾಗೆ ತಂದೆ, ಸಹೋದರ, ಅಂಕಲ್, ಲವರ್ ಆಗಿ ನಟಿಸಿದ ಏಕೈಕ ನಟ ಇವರೇ ನೋಡಿ… Trisha
ಮನೆ ಛಾವಣಿ ಸೀಳಿಕೊಂಡು ಆಕಾಶದಿಂದ ಬಿತ್ತು ನಿಗೂಢ ವಸ್ತು! ಒಂದೇ ರಾತ್ರಿಯಲ್ಲಿ ಬಡವ ಕೋಟ್ಯಧೀಶನಾಗಿಬಿಟ್ಟ | Luck