ನವದೆಹಲಿ: ‘ಆಡಳಿತ ದಕ್ಷತಾ ಇಲಾಖೆ’ ಸ್ಥಾಪಿಸಿ ಉದ್ಯಮಿಗಳಾದ ಎಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಅವರಿಗೆ ಅದರ ನೇತೃತ್ವ ವಹಿಸಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೆ ಎರಡು ಮಹತ್ವದ ಸ್ಥಾನಗಳಿಗೆ ಹೆಸರನ್ನು ಅಂತಿಮಗೊಳಿಸಿದ್ದಾರೆ.
ತುಳಸಿ ಗಬಾರ್ಡ್ ಅವರನ್ನು ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ಹಾಗೂ ಮಾರ್ಕೆ ರುಬಿಯೊ ಅವರನ್ನು ಯುಎಸ್ ರಾಜ್ಯ ಕಾರ್ಯ ದರ್ಶಿ ಸ್ಥಾನಕ್ಕೆ ನೇಮಿಸಲಿರುವುದಾಗಿ ಟ್ರಂಪ್ ಘೋಷಿಸಿದ್ದಾರೆ. ‘ದೇಶ ಹಾಗೂ ಅಮೆರಿಕನ್ನರ ಸ್ವಾತಂತ್ರ್ಯಕ್ಕಾಗಿ ಎರಡು ದಶಕಕ್ಕೂ ಅಧಿಕ ಕಾಲದಿಂದ ತುಳಸಿ ಹೋರಾಡಿದ್ದು, ಡೆಮಾ ಕ್ರಟಿಕ್ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಮಾಜಿ ಅಭ್ಯರ್ಥಿ ಆಗಿದ್ದ ಅವರು ಎರಡೂ ಪಕ್ಷಗಳ ಬೆಂಬಲ ಹೊಂದಿರುತ್ತಾರೆ. ಅವ ರೀಗ ಹೆಮ್ಮೆಯ ರಿಪಬ್ಲಿಕನ್’ ಎಂದು ಟ್ರಂಪ್ ಹೇಳಿದ್ದಾರೆ. ತುಳಸಿ 18 ಬೇಹುಗಾರಿಕಾ ಸಂಸ್ಥೆಗಳ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ.
ವಿದೇಶಿ ಸಂಬಂಧ ಹಾಗೂ ಗುಪ್ತಚರ ಸಮಿತಿಗಳ ಹಿರಿಯ ಸದಸ್ಯ, ರಿಪಬ್ಲಿಕನ್ ಸೆನೆಟರ್ ಮಾರ್ಕೆ ರುಬಿಯೊ ಹೆಸರನ್ನು ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಅಂತಿಮಗೊಳಿಸಿದ ಟ್ರಂಪ್, ‘ಅವರು ನಮ್ಮ ರಾಷ್ಟ್ರದ ಪ್ರಬಲ ಪ್ರತಿಪಾದಕ, ಮಿತ್ರರಾಷ್ಟ್ರಗಳಿಗೆ ನಿಜವಾದ ಸ್ನೇಹಿತ ಹಾಗೂ ವಿರೋಧಿಗಳಿಗೆ ಎಂದಿಗೂ ಹಿಂದೆ ಸರಿಯದ ಯೋಧ’ ಎಂದು ಬಣ್ಣಿಸಿದ್ದಾರೆ. ಅದಾಗ್ಯೂ ಮಾರ್ಕೆ ಅವರ ವಿದೇಶಾಂಗ ನೀತಿಯ ದೃಷ್ಟಿಕೋನಗಳಿಗೆ ಸಂಬಂಧಿಸಿದಂತೆ ಈ ಸ್ಥಾನಕ್ಕೆ ಅವರನ್ನು ಆರಿಸಿಕೊಂಡ ಬಗ್ಗೆ ಕೆಲವು ರಿಪಬ್ಲಿಕನ್ ಸದಸ್ಯರಿಂದ ವಿರೋಧ ವ್ಯಕ್ತವಾಗಿದೆ ಎಂದೂ ಹೇಳಲಾಗುತ್ತಿದೆ.
ತುಳಸಿ ಯಾರು?: ಇವರು ಅಮೆರಿಕದ ಸಮೊವಾದ ಯುಎಸ್ ಪ್ರಾಂತ್ಯದಲ್ಲಿ ಜನಿಸಿದರು. ಇವರ ತಾಯಿ ಕ್ರಮೇಣ ಹಿಂದು ಧರ್ಮ ಅನುಯಾಯಿಯಾದ ಕಾರಣ ಈಕೆಗೆ ತುಳಸಿ ಎಂದು ಹೆಸರು ಬದಲಿಸಿದ್ದರು. ಬಳಿಕ ತುಳಸಿ ಕೂಡ ಹಿಂದು ಧರ್ಮ ಪಾಲಿಸಲು ಆರಂಭಿಸಿದರು. ಈಕೆ ಹವಾಯಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ಗೆ 21ನೇ ವಯಸ್ಸಿ ನಲ್ಲೇ ಆಯ್ಕೆಯಾದರು. ಸೇನಾಧಿಕಾರಿಯೂ ಆಗಿದ್ದರಿಂದ ಇರಾಕ್ನಲ್ಲಿ ನಿಯೋಜಿತಗೊಂಡಿ ದ್ದರು. ನಂತರ ಹವಾಯಿ ಕಾಂಗ್ರೆಸ್ಗೆ ಆಯ್ಕೆ ಯಾದ ತುಳಸಿ, ಬಳಿಕ ಕಾಂಗ್ರೆಸ್ನಲ್ಲಿನ ಮೊದಲ ಹಿಂದು ಮತ್ತು ಅಮೆರಿಕನ್ ಸಮೊವನ್ ಎಂದೆನಿಸಿಕೊಂಡಿ ದ್ದರು. ಭಗವದ್ಗೀತೆ ಮೇಲೆ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದಿದ್ದರು. ತುಳಸಿ 2013ರಿಂದ 2021ರ ವರೆಗೆ ಡೆಮಾಕ್ರಟಿಕ್ ಪಕ್ಷವನ್ನು ಪ್ರತಿನಿಧಿಸಿ, 2020ರ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ನಾಮನಿರ್ದೇಶನಗೊಳ್ಳಲು ಯತ್ನಿಸಿದರು. ಆದರೆ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ಗೆ ಬೆಂಬಲ ಸೂಚಿಸಿದ್ದರು.
ಅಮೆರಿಕದ ಜನರ ಸ್ವಾತಂತ್ರ್ಯ, ಸುರಕ್ಷೆ, ಭದ್ರತೆ ಹಾಗೂ ರಕ್ಷಣೆ ಸಲುವಾಗಿ ನಿಮ್ಮ ಸಂಪುಟದ ಸದಸ್ಯೆ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ಕಾರ್ಯೋನ್ಮುಖಳಾಗಲು ಕಾಯುತ್ತಿದ್ದೇನೆ.
| ತುಳಸಿ ಗಬಾರ್ಡ್
Toxic ಅಖಾಡಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ Hollywood Star; ವಿಡಿಯೋ ವೈರಲ್