ಮುಂಬೈ: ರಾಕಿಂಗ್ ಸ್ಟಾರ್ ಯಶ್ (Rocking Star Yash) ನಟನೆಯ ಟಾಕ್ಸಿಕ್ (Toxic) ಚಿತ್ರವು ಶೂಟಿಂಗ್ ಹಂತದಲ್ಲೇ ಸಖತ್ ಸೌಂಡ್ ಮಾಡುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಗಮನವನ್ನು ಚಿತ್ರ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟಾಕ್ಸಿಕ್ (Toxic) ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಇದೀಗ ಚಿತ್ರಕ್ಕೆ ಸಂಬಂಧಿಸಿದಂತೆ ಮೇಜರ್ ಅಪ್ಡೇಟ್ ಒಂದು ಹೊರಬಿದ್ದಿದ್ದು, ಸಿನಿಮಾತಂಡವನ್ನು ಹಾಲಿವುಡ್ನ ಮತ್ತೊಬ್ಬ ಸ್ಟಾರ್ ನಟಿ ಕೂಡಿಕೊಂಡಿದ್ದಾರೆ.
ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಕ್ರೇಜ್ ಗಿಟ್ಟಿಸಿಕೊಂಡಿರುವ ನಟ ಯಶ್ ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಟಾಕ್ಸಿಕ್ (Toxic) ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳು ಮುಂಬೈನಲ್ಲಿ ಭರದಿಂದ ಸಾಗಿದ್ದು, ಚಿತ್ರತಂಡ ಅಲ್ಲಿಯೇ ಬೀಡುಬಿಟ್ಟಿದೆ. ಕೆಲ ದಿನಗಳ ಹಿಂದಷ್ಟೇ ಹಾಲಿವುಡ್ನ ಖ್ಯಾತ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ (JJ Perry) ಚಿತ್ರತಂಡವನ್ನು ಕೂಡಿಕೊಂಡಿದ್ದರು. ಇದೀಗ ಹಾಲಿವುಡ್ನ ಖ್ಯಾತ ನಟಿ ಟೆಟಿಯಾನಾ ಗೈದರ್ (Tetiana Gaidar) ಟಾಕ್ಸಿಕ್ ಚಿತ್ರವನ್ನು ಕೂಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಖತ್ ವೈರಲ್ ಆಗಿದೆ.
ಹಾಲಿವುಡ್ನ ಆ್ಯಕ್ಷನ್ ಕ್ವೀನ್ ಎಂದೇ ಹೆಸರುವಾಸಿಯಾಗಿರುವ ಟೆಟಿಯಾನಾ ಗೈದರ್ (Tetiana Gaidar) ಕುಂಗ್ ಫೂ ಸೇರಿದಂತೆ ಅನೇಕ ಸಾಹಸ ಕಲೆಗಳಲ್ಲಿ ಪರಿಣಿತಿಯನ್ನು ಹೊಂದಿದ್ದು, ಟಾಕ್ಸಿಕ್ (Toxic) ಸಿನಿಮಾದ ಸೆಟ್ನಲ್ಲಿರುವ ವಿಡಿಯೋವನ್ನು ನಟಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟ ಯಶ್ (Yash) ಇರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ತಿಳಿಸಬೇಕಿದೆ.
ಯಶ್ (Yash) ನಟನೆಯ ‘ಕೆಜಿಎಫ್ 2’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಯಶ್ (Yash) ಅವರು ಮುಂದಿನ ಸಿನಿಮಾ ಘೋಷಣೆ ಮಾಡೋಕೆ ಒಂದು ವರ್ಷಕ್ಕೂ ಅಧಿಕ ಕಾಲ ಸಮಯ ತೆಗೆದುಕೊಂಡರು. ಇದೀಗ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಜೊತೆ ಮುಂದಿನ ಚಿತ್ರಕ್ಕಾಗಿ ಯಶ್ ಕೈ ಜೋಡಿಸಿದ್ದು, ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಈ ಸಿನಿಮಾಗೆ ಜಂಟಿಯಾಗಿ ಬಂಡವಾಳ ಹೂಡುತ್ತಿದೆ.