ಏಷ್ಯಾಕಪ್​ 2023| ಶ್ರೀಲಂಕಾ ವಿರುದ್ಧ 10ವಿಕೆಟ್​ ಜಯ; 8ನೇ ಬಾರಿಗೆ ಕಪ್​ ಗೆದ್ದು ಬೀಗಿದ ಭಾರತ

India Srilanka
Published on

ಕೊಲಂಬೋ: ಶ್ರೀಲಂಕಾ ವಿರುದ್ಧ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ತಂಡವು 10ವಿಕೆಟ್​ಗಳ ಅಂತರದಲ್ಲಿ ಭರ್ಜರಿ ಜಯಗಳಿಸುವ ಮೂಲಕ 8ನೇ ಬಾರಿಗೆ ಏಷ್ಯಾಕಪ್​ ಮುಡಿಗೇರಿಸಿಕೊಂಡಿದೆ.

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡವು ವೇಗಿ ಮೊಹಮ್ಮದ್​ ಸಿರಾಜ್ (7-1-21-6) ಮಾರಕ​ ದಾಳಿಗೆ 15.2 ಓವರ್​ಗಳಲ್ಲಿ 50ರನ್​ಗಳಿಗೆ ಸರ್ವಪತನವಾಯಿತು.

ಸುಲಭ ಗುರಿ ಬೆನ್ನಟ್ಟಿದ್ದ ಭಾರತ ತಂಡವು ವಿಕೆಟ್​ ನಷ್ಟವಿಲ್ಲದೆ 6.1 ಓವರ್​ಗಳಲ್ಲಿ 51ರನ್​ ಗಳಿಸುವ ಮೂಲಕ ಜಯದ ನಗೆ ಬೀರಿತ್ತು. ಭಾರತದ ಪರ ಶುಭಮಾನ್​ ಗಿಲ್​ (27 ರನ್​, 16 ಎಸೆತ, 6 ಬೌಂಡರಿ), ಇಶಾನ್​ ಕಿಶನ್​ (23 ರನ್​, 18 ಎಸೆತ, 3 ಬೌಂಡರಿ)ರನ್​​ ಗಳಿಸಿ ಔಟಾಗದೆ ಉಳಿದರು.

ಭಾರತದ ಗೆಲುವಿನ್ನಲಿ ಪ್ರಮುಖ ಪಾತ್ರ ವಹಿಸಿದ ವೇಗಿ ಮೊಹಮ್ಮದ್​ ಸಿರಾಜ್​​ ಏಳು ಓವರ್​ಗಳಲ್ಲಿ 21ರನ್​ ನೀಡಿ 6ವಿಕೆಟ್​ ಕಬಳಿಸಿದ್ಧಾರೆ. ಇದರಲ್ಲಿ ಒಂದೇ ಓವರ್​ನಲ್ಲಿ ಮೇಡನ್​ ಸಹಿತ ನಾಲ್ಕು ವಿಕೆಟ್​ ಪಡೆದಿದ್ದು, ಪಂದ್ಯದ ದಿಕ್ಕನ್ನೇ ಬದಲಿಸಿತ್ತು. ಹಾರ್ದಿಕ್​ ಪಾಂಡ್ಯ (2.2-0-3-3), ಜಸ್ಪ್ರೀತ್​ ಬುಮ್ರಾ (5-1-23-1)​ ರನ್​ ನೀಡಿ ವಿಕೆಟ್​ ಪಡೆದಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net