More

  ದೆಹಲಿಯಲ್ಲಿ ಮತ್ತೆ ತಾಪಮಾನ ಏರಿಕೆ: ಮುಂದಿನ 6 ದಿನ ಎಚ್ಚರ ವಹಿಸುವಂತೆ ಐಎಂಡಿ ಸೂಚನೆ

  ನವದೆಹಲಿ: ರಾಷ್ಟ್ರರಾಜಧಾನಿ ಜನತೆಗೆ ಕೆಲ ದಿನಗಳ ಕಾಲ ಬಿಸಿಲಿನ ತಾಪಮಾನದಿಂದ ವಿರಾಮ ಸಿಕ್ಕಿತ್ತು. ಆದರೆ ಈಗ ಮತ್ತೆ ಬಿಸಿಲಿನ ತಾಪ ತಟ್ಟಬಹುದು. ದೆಹಲಿ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ತೀವ್ರ ಶಾಖದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 6 ದಿನಗಳ ಕಾಲ ಇಡೀ ದೆಹಲಿ-ಎನ್‌ಸಿಆರ್‌ನಲ್ಲಿ ಶಾಖದ ಅಲೆಯ ಸಾಧ್ಯತೆಯಿದೆ. ತಾಪಮಾನ ಮತ್ತೊಮ್ಮೆ 47 ಡಿಗ್ರಿ ತಲುಪಬಹುದು ಎಂದು ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

  ಇದನ್ನು ಓದಿ: ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ಚೀನಾ ಪ್ರಜೆ; ಆತ್ಮಹತ್ಯೆಗೆ ಯತ್ನಿಸಿ ಬಿಹಾರ ಜೈಲಿನಲ್ಲಿ ಮೃತಪಟ್ಟಿದ್ದೇಕೆ?

  ಮುಂದಿನ ಎರಡು ದಿನಗಳವರೆಗೆ ಆರೆಂಜ್ ಅಲರ್ಟ್ ಮತ್ತು 4 ದಿನಗಳವರೆಗೆ ಯಲ್ಲೋ ಅಲರ್ಟ್ ಅನ್ನು ಐಎಂಡಿ ಘೋಷಿಸಿದೆ. ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದ ಏಳು ಸ್ಥಳಗಳಲ್ಲಿ ಸೋಮವಾರ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರಲ್ಲಿ ಪ್ರಯಾಗರಾಜ್ 46.3 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ದೇಶದ ಅತ್ಯಂತ ಬಿಸಿಯಾದ ಸ್ಥಳವಾಗಿದೆ. ಇದರ ನಂತರ ರಾಜ್ಯದ ವಾರಣಾಸಿ ನಗರದಲ್ಲಿ 45.3 ತಾಪಮಾನ ದಾಖಲಾಗಿದೆ. ಕಾನ್ಪುರ ಮತ್ತು ಹಮೀರ್‌ಪುರದಲ್ಲಿ ತಾಪಮಾನವು 45ಕ್ಕಿಂತ ಹೆಚ್ಚಿತ್ತು.

  ಮುಂದಿನ 6 ದಿನದಲ್ಲಿ ಹಗಲಿನಲ್ಲಿ ಗಂಟೆಗೆ 25 ರಿಂದ 35 ಕಿಲೋಮೀಟರ್​​ ವೇಗದಲ್ಲಿ ಬಲವಾದ ಗಾಳಿ ಬೀಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್​ ಮತ್ತು ಕನಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. (ಏಜೆನ್ಸೀಸ್​​)

  ಕೊಲೆ ಪ್ರಕರಣದಲ್ಲಿ ನಟ ದರ್ಶನ ಅರೆಸ್ಟ್​​​​​ ಆಗಿದ್ದಕ್ಕೆ ನಟಿ ಸಂಜನಾ ಗಲ್ರಾನಿ ಹೇಳಿದ್ದೇನು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts