More

  ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ಚೀನಾ ಪ್ರಜೆ; ಆತ್ಮಹತ್ಯೆಗೆ ಯತ್ನಿಸಿ ಬಿಹಾರ ಜೈಲಿನಲ್ಲಿ ಮೃತಪಟ್ಟಿದ್ದೇಕೆ?

  ಪಾಟ್ನಾ: ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಿದ ಚೀನಾದ ಪ್ರಜೆಯೊಬ್ಬ ಬಿಹಾರದಲ್ಲಿ ಸಿಕ್ಕಿಬಿದ್ದ ನಂತರ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದರು, ನಂತರ ಚಿಕತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಮುಜಾಫರ್‌ಪುರ ಜಿಲ್ಲೆಯ ಜೈಲಿನಲ್ಲಿದ್ದ ಚೀನಾದ ವ್ಯಕ್ತಿಯೊಬ್ಬರು ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನು ಓದಿ: ಕೊಲೆ ಪ್ರಕರಣದಲ್ಲಿ ನಟ ದರ್ಶನ ಅರೆಸ್ಟ್​​​​​ ಆಗಿದ್ದಕ್ಕೆ ನಟಿ ಸಂಜನಾ ಗಲ್ರಾನಿ ಹೇಳಿದ್ದೇನು?

  ಚೀನಾದ ಶಾಂಡೊಂಗ್ ಪ್ರಾಂತ್ಯದ ನಿವಾಸಿ ಲಿ ಜಿಯಾಕಿ ಅವರನ್ನು ಜೂನ್ 6ರಂದು ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿ ಚೌಕ್ ಬಳಿ ವೀಸಾ ಸೇರಿದಂತೆ ಸರಿಯಾದ ಪ್ರಯಾಣ ದಾಖಲೆಗಳಿಲ್ಲದ ಕಾರಣ ಬಂಧಿಸಲಾಯಿತು. ಆತನಿಂದ ಚೀನಾದ ನಕ್ಷೆ, ಮೊಬೈಲ್ ಫೋನ್, ಚೀನಾ, ನೇಪಾಳ ಮತ್ತು ಭಾರತದ ಕರೆನ್ಸಿಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ವಿದೇಶಿ ಕಾಯಿದೆ, 1946ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನಂತರ ಅವರನ್ನು ಅಮರ್ ಶಹೀದ್ ಖುದಿರಾಮ್ ಬೋಸ್ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿತ್ತು ಆ ನಂತರ ಅವರು ಜೈಲಿನಲ್ಲಿದ್ದರು ಎಂದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಚೀನಾದ ಪ್ರಜೆ ಲಿ ಜಿಯಾಕಿ ಅವರು ಜೂನ್ 7ರಂದು ಜೈಲು ಆಸ್ಪತ್ರೆಯ ಶೌಚಾಲಯದಲ್ಲಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು. ಅವರು ಕನ್ನಡಕವನ್ನು ಮುರಿದು ಗಾಜಿನಿಂದ ತನ್ನ ಪ್ರಮುಖ ಅಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ್ದಾರೆ. ಮಾಹಿತಿ ಬಂದ ಕೂಡಲೇ ಜೈಲು ಪೊಲೀಸರು ಅವರನ್ನು ಆಸ್ಪತ್ರೆಗೆ (ಎಸ್‌ಕೆಎಂಸಿಎಚ್) ದಾಖಲಿಸಲಾಯಿತು. ಮಂಗಳವಾರ ಚಿಕಿತ್ಸೆ ವೇಳೆ ಚೀನಾ ಪ್ರಜೆ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​​)

  NEET-UG 2024 ಪರೀಕ್ಷೆ; ಪ್ರೆಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಉತ್ತರಿಸುವಂತೆ ಎನ್​​ಟಿಎಗೆ ಸುಪ್ರೀಂಕೋರ್ಟ್​​ ನೋಟಿಸ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts