

Amit Shah: ಪೆಹಲ್ಗಾಮ್ನಲ್ಲಿ ಪಾಕ್ ಉಗ್ರ ದಾಳಿ ಮಾಡಿದ್ದರಿಂದ ಭಾರತ ಆಪರೇಷನ್ ಸಿಂಧೂರ(Operation Sindhoora) ಮೂಲಕ ತಕ್ಕ ಪ್ರತಿಕಾರ ತೀರಿಸಿಕೊಂಡಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದರು.
ದೇಶವನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ಯವರನ್ನು ಶ್ಲಾಘಿಸಿರುವ ಶಾ, ಭಾರತ ಆಪರೇಷನ್ ಮೂಲಕ ಜಗತ್ತಿಗೆ ಬಲವಾದ ಸಂದೇಶವನ್ನು ರವಾನಿಸಿದೆ ಎಂದು ಹೇಳಿದರು.
ಜೈಪುರದ ದದಿಯಾ ಗ್ರಾಮದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಮೋದಿ ಜಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದ 4ನೇ ಅತಿದೊಡ್ಡ ಅರ್ಥಿಕತೆಯಾಗಿದೆ. ಹೆಚ್ಚುವರಿಯಾಗಿ 27 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ ಎಂದರು.
ಮೋದಿ ಅವರು ಮಾಡಿದ ದೊಡ್ಡ ಕೆಲಸವೆಂದರೆ ದೇಶವನ್ನು ಸುರಕ್ಷಿತವಾಗಿರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಾವಧಿಯಲ್ಲಿ ಹಲವಾರು ಭಯೋತ್ಪದಕ ದಾಳಿಗಳು ನಡೆಯುತ್ತಿದ್ದವು. ಉರಿ ದಾಳಿಯ ನಂತರ ಮೋದಿಯವರು ಸರ್ಜಿಕಲ್ ಸ್ಟ್ರೈಕ್(Surgical strike), ಪುಲ್ವಾಮ ದಾಳಿಯ ನಂತರ ಏರ್ಸ್ಟ್ರೈಕ್ (Airstrike) ಹಾಗೂ ಪಹಲ್ಗಾಮ್ ದಾಳಿ(Pahalgam attack) ಯ ನಂತರ ಆಪರೇಷನ್ ಸಿಂಧೂರ ನಡೆಸಿದರು. ಅಲ್ಲದೇ, ಭಾರತದ ಮೇಲೆ ದಾಳಿ ಮಾಡಿದರೆ ದೊಡ್ಡದಾಗಿ ಪ್ರತಿಕಾರ ತಗೆದುಕೊಳ್ಳುತ್ತದೆ ಎಂಬ ಬಲವಾದ ಸಂದೇಶವನ್ನು ಜಗತ್ತಿಗೆ ಕಳುಹಿಸಿದ್ದೇವೆ ಎಂದು ಹೇಳಿದರು.
ಜಮ್ಮು&ಕಾಶ್ಮೀರ(Jammu & Kashmir)ದ ಪಹಲ್ಗಾಮ್ನಲ್ಲಿ 26 ನಾಗರಿಕರ ಮೇಲೆ ನಡೆದ ಉಗ್ರದಾಳಿಗೆ ಪ್ರತಿಕಾರವಾಗಿ ಪಾಕ್ ಅಕ್ರಮಿತ ಕಾಶ್ಮೀರ ( Pakistan-occupied Kashmir) ದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಅಪರೇಷನ್ ಸಿಂಧೂರವನ್ನು ಪ್ರಾರಂಭಿಸಿತ್ತು.(ಏಜೆನ್ಸೀಸ್)