ತಾಂತ್ರಿಕ ದೋಷ; ದೆಹಲಿ ನಿಲ್ದಾಣದಲ್ಲಿ 'ಇಂಡಿಗೋ ವಿಮಾನ' ತುರ್ತು ಭೂಸ್ಪರ್ಶ| indigo

indigo airlines
Published on

ನವದೆಹಲಿ; ಇಂದು (17) ಇಂಫಾಲ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಸಣ್ಣ ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ದೆಹಲಿಗೆ ಹಿಂತಿರುಗಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಫಾಲ್‌ಗೆ ಹೊರಟಿದ್ದ 6E5118 ವಿಮಾನದ ಪ್ರಯಾಣದ ಸ್ವಲ್ಪ ಸಮಯದ ಬಳಿಕ ತಾಂತ್ರಿಕ ದೋಷ ಕಂಡುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್‌ಗಳು ವಿಮಾನವನ್ನು ದೆಹಲಿಗೆ ಯು-ಟರ್ನ್ ಮಾಡಿದ್ದಾರೆ.

ವಿಮಾನಯಾನ ಸಂಸ್ಥೆ ಹೇಳಿದ್ದೇನು?

ದೆಹಲಿಯಿಂದ ಇಂಫಾಲ್‌ಗೆ ಕಾರ್ಯನಿರ್ವಹಿಸುತ್ತಿದ್ದ 6E 5118 ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಸಣ್ಣ ತಾಂತ್ರಿಕ ದೋಷ ಪತ್ತೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್‌ಗಳು ಹಿಂತಿರುಗಲು ನಿರ್ಧರಿಸಿದರು ಮತ್ತು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದರು ಎಂದು ಇಂಡಿಗೋ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

(ಏಜೆನ್ಸೀಸ್)

ವಿಮಾನವು ಅಗತ್ಯ ತಪಾಸಣೆಗೆ ಒಳಗಾಯಿತು ಮತ್ತು ಸ್ವಲ್ಪ ಸಮಯದ ನಂತರ ಪ್ರಯಾಣವನ್ನು ಪುನರಾರಂಭಿಸಿತು. ನಮ್ಮ ಗ್ರಾಹಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ಯಾವಾಗಲೂ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ವಕ್ತಾರರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net