ಸಿರಿಯಾದ ಸರ್ಕಾರಿ ಪಡೆಗಳ ಮೇಲೆ ದಾಳಿ ಮಾಡಿದ ಇಸ್ರೇಲ್: 15 ಸಾವು! Israel attacks Syria

152293290
Published on

Israel attacks Syria: ದಕ್ಷಿಣ ಸಿರಿಯಾ (South Syria)ದಲ್ಲಿ ಇಸ್ರೇಲ್(Israel) ನಡೆಸಿದ ದಾಳಿಯಲ್ಲಿ ಕನಿಷ್ಟ 15 ಮಂದಿ ಸಿರಿಯನ್​ ರಕ್ಷಣಾ ಮತ್ತು ಅಂತರಿಕ ಸಚಿವಾಲಯದ ಸಿಬ್ಬಂದಿ ಸಾವಿಗೀಡಾಗಿದ್ದಾರೆ.

ಡಮಾಸ್ಕಸ್(Damascus) ​ನಲ್ಲಿರುವ ಸಿರಿಯನ್ ರಕ್ಷಣಾ ಸಚಿವಾಲಯ(Syrian Ministry of Defense) ಮತ್ತು ದಕ್ಷಿಣ ಸಿರಿಯಾದಲ್ಲಿರುವ ಸರ್ಕಾರಿ ಪಡೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಪಡೆಗಳು(Israeli forces) ದಾಳಿ ಮಾಡಿವೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು (Benjamin Netanyahu), ಸಿರಿಯಾದ ಹೊಸ ಅಡಳಿತದಿಂದ ನಮ್ಮ ಡ್ರೂಜ್​ ಸಹೋದರರನ್ನು ರಕ್ಷಿಸಲು ಮಿಲಿಟರಿ ಕ್ರಮ ಅಗತ್ಯ ಎಂದು ಹೇಳಿದರು. ಸಿರಿಯಾದ ಮಧ್ಯಂತರ ಅಧ್ಯಕ್ಷ ಅಹ್ಮದ್​ ಅಲ್​- ಶರಾ (Ahmed Al-Shara) ನೇತೃತ್ವದ ಅಡಳಿತವನ್ನು ವೇಶಧಾರಿ ಜಿಹಾದಿಗಳು ಎಂದು ನೆತನ್ಯಾಹು ಬಣ್ಣಿಸಿದ್ಧಾರೆ.

ಸಿರಿಯಾ ಮೇಲೆ ಇಸ್ರೇಲ್​ ದಾಳಿ ಮಾಡಿದ್ದು ಏಕೆ..?

ಸಿರಿಯಾದಲ್ಲಿ ಡ್ರೂಜ್ ಅಲ್ಪಸಂಖ್ಯಾತರನ್ನು ರಕ್ಷಿಸಲು ಮತ್ತು ಸಿರಿಯನ್ ಪಡೆಗಳು ಗಡಿ ಪ್ರದೇಶಗಳ ಹತ್ತಿರ ಹೋಗುವುದನ್ನು ತಡೆಯಲು ದಾಳಿ ಅಗತ್ಯವಾಗಿದೆ ಎಂದು ಇಸ್ರೇಲ್ ಹೇಳಿದೆ. ಡ್ರೂಜ್ ಸಮುದಾಯದ ಮೇಲಿನ ದಾಳಿಗಳನ್ನು ತಡೆಯಲು ಸಿರಿಯನ್ ಪಡೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಇಸ್ರೇಲ್ ಆರೋಪಿಸಿದೆ.

"ಇಸ್ರೇಲ್‌ನಲ್ಲಿರುವ ನಮ್ಮ ಡ್ರೂಜ್ ನಾಗರಿಕರೊಂದಿಗಿನ ಆಳವಾದ ಸಹೋದರ ಮೈತ್ರಿ ಮತ್ತು ಸಿರಿಯಾದ ಡ್ರೂಜ್‌ನೊಂದಿಗೆ ಅವರ ಕೌಟುಂಬಿಕ ಮತ್ತು ಐತಿಹಾಸಿಕ ಸಂಬಂಧಗಳಿಂದಾಗಿ ಸಿರಿಯಾದ ಡ್ರೂಜ್‌ ಸಮುದಾಯ(Druze community) ಕ್ಕೆ ಹಾನಿಯಾಗದಂತೆ ತಡೆಯಲು ಇಸ್ರೇಲ್ ಬದ್ಧವಾಗಿದೆ" ಎಂದು ನೆತನ್ಯಾಹು ಹೇಳಿದರು.

ಈ ವಾರದ ಆರಂಭದಲ್ಲಿ ಡ್ರೂಜ್ ಮತ್ತು ಬೆಡೋಯಿನ್ ಸಶಸ್ತ್ರ ಪಡೆಗಳ ನಡುವಿನ ಘರ್ಷಣೆಯನ್ನು ನಿಭಾಯಿಸಲು ಸಿರಿಯನ್ ಸರ್ಕಾರಿ ಪಡೆಗಳು ಸ್ವೀಡಾವನ್ನು ಪ್ರವೇಶಿಸಿದ ನಂತರ 79 ಡ್ರೂಜ್ ಹೋರಾಟಗಾರರು ಮತ್ತು 55 ನಾಗರಿಕರು ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net