ಹುಡುಗರು ಸೊಂಟದ ಮೇಲೆ ಕೈ ಇಟ್ಟರೆ, ದೂರು ನೀಡುವ ಬದಲು ಎಂಜಾಯ್​ ಮಾಡಿ: ನಟಿ ರೇಖಾ ನಾಯರ್​ ವಿವಾದ

Rekha Nair
Published on

ಚೆನ್ನೈ: ಕಾಲಿವುಡ್​ ನಟ ಪಾರ್ಥಿಬನ್​ ನಿರ್ದೇಶನದ ಇರವಿನ್​ ನಿಹಾಲ್​ ಸಿನಿಮಾದಲ್ಲಿ ಬೆತ್ತಲೆ ದೃಶ್ಯದಲ್ಲಿ ನಟಿಸುವ ಮೂಲಕ ಭಾರೀ ಸುದ್ದಿಯಾಗಿದ್ದ ನಟಿ ರೇಖಾ ನಾಯರ್​ ಇದೀಗ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ. ಅಂದಹಾಗೆ ರೇಖಾ ಅವರಿಗೆ ವಿವಾದಗಳು ಹೊಸದೇನಲ್ಲ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಮಹಿಳೆಯರು ತುಂಬಾ ಸೆಕ್ಸಿಯಾಗಿರುವಂತಹ ಉಡುಗೆಗಳನ್ನು ಧರಿಸುತ್ತಾರೆ. ನಿಮ್ಮ ಬಗ್ಗೆ ಏನು? ಎಂದು ಸಂದರ್ಶನದಲ್ಲಿ ಆ್ಯಂಕರ್​ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ರೇಖಾ, ತುಂಬಾ ಹಾಟ್​ ಆಗಿರುವಂತಹ ಉಡುಪು ಧರಿಸಿದ ಸಂದರ್ಭದಲ್ಲಿ ಯಾರಾದರೂ ಹುಡುಗರು ಅವರ ಸೊಂಟದ ಮೇಲೆ ಕೈ ಇಟ್ಟರೆ, ದೂರು ನೀಡುವ ಬದಲು ಅದನ್ನು ಅನುಭವಿಸಿ, ಎಂಜಾಯ್​ ಮಾಡಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೀಗ ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.

ಅಂದಹಾಗೆ ರೇಖಾ ಅವರು ಕೆಲ ಸಿನಿಮಾ ಮತ್ತು ಟೆಲಿವಿಷನ್​ ಶೋಗಳಲ್ಲಿ ನಟಿಸಿದ್ದಾರೆ. ವಿವಾದಗಳಿಂದಲೇ ಆಗಾಗ ರೇಖಾ ಸದ್ದು ಮಾಡುತ್ತಿರುತ್ತಾರೆ. ಇರವಿನ್​ ನಿಹಾಲ್ ಸಿನಿಮಾದಲ್ಲಿ ಪಾರ್ಥಿಬನ್​ ತಾಯಿಯ ಪಾತ್ರ ಮಾಡಿರುವ ನಟಿ ರೇಖಾ ನಾಯರ್, ತಮ್ಮ ಎದೆಯ ಭಾಗವನ್ನು ತೋರಿಸುವ ದೃಶ್ಯವೊಂದರಲ್ಲಿ ನಟಿಸಿದ್ದಾರೆ. ಇದೇ ದೃಶ್ಯದಿಂದಾಗಿ ನಟ-ವಿಮರ್ಶಕ ಬೈಲ್ವಾನ್ ರಂಗನಾಥನ್​ ಅವರು ರೇಖಾ ನಾಯರ್ ಅವರನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಕಟುವಾಗಿ ಟೀಕಿಸಿದ್ದರು. ಇದರ ಬೆನ್ನಲ್ಲೇ ರಂಗನಾಥನ್​ ಅವರು ಮುಂಜಾನೆ ಜಾಗಿಂಗ್​ ಮಾಡುವಾಗ ಸಾರ್ವಜನಿಕ ಸ್ಥಳದಲ್ಲಿ ಎದುರಾದ ಅವರನ್ನು ರೇಖಾ ನಾಯರ್​ ತರಾಟೆಗೆ ತೆಗೆದುಕೊಂಡಿದ್ದರು. ಇದು ಭಾರೀ ಸುದ್ದಿಯಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net