

ಮುಂಬೈ: ಸಿನಿಮಾ ಕಲಾವಿದರು ಎಂದರೆ ಪಾತ್ರಗಳಿಗೆ ತಕ್ಕಂತೆ ಬಣ್ಣ ಹಚ್ಚಿ ನಟನೆ ಮಾಡುತ್ತಾರೆ. ಪರದೆ ಮೇಲೆ ಕಣ್ಣೀರು, ನಗು, ಸಂಸಾರ, ಅಪ್ಪ, ಅಮ್ಮ, ಮದುವೆ ಎಂದು ನಟನೆ ಮಾಡುತ್ತಾರೆ. ಆದರೆ ಸೀರಿಯಲ್ ನಟರೊಬ್ಬರು ಸ್ವತಃ ತಾವು ಅನುಭವಿಸುತ್ತೀರುವ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಬಾಲಿವುಡ್ ಮತ್ತು ಟಿವಿ ಜಗತ್ತಿನಲ್ಲಿ ಒಬ್ಬ ನಟ ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳುವುದು ಸಾಮಾನ್ಯ. ಸಂಬಂಧಗಳು ರೂಪುಗೊಳ್ಳುವುದನ್ನು ಮತ್ತು ಹದಗೆಡುವುದನ್ನು ನಾವು ನೋಡುತ್ತೇವೆ. ಆದರೆ ಈ ಬಾರಿ ವಿಷಯ ಬೇರೆಯೇ ಇದೆ. ಬಡೇ ಅಚ್ಚೆ ಲಗ್ತೆ ಹೇ ಖ್ಯಾತಿಯ ನಕುಲ್ ಮೆಹ್ತಾ ಅವರು 18 ನೇ ಬಾರಿಗೆ ಮದುವೆಯಾಗಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅದರ ವಿಡಿಯೋವನ್ನು ಅವರೇ ಹಂಚಿಕೊಂಡಿದ್ದಾರೆ.
ಓಯ್... ಗಾಬರಿಯಾಗಬೇಡಿ! ವಾಸ್ತವವಾಗಿ, ಟಿವಿ ನಟ ನಕುಲ್ ಮೆಹ್ತಾ ಅವರು ತಮ್ಮ ಜೀವನದಲ್ಲಿ 17 ಬಾರಿ ವರ ಆಗಿದ್ದಾರೆ ಮತ್ತು ಅವರ 18 ನೇ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ. ಇಲ್ಲಿಯವರೆಗೆ ತೆರೆಮೇಲೆ 17 ಬಾರಿ ಮದುವೆಯಾಗಿದ್ದೇನೆ. ನಿಜ ಜೀವನದಲ್ಲಿ 1 ಬಾರಿ ಮದುವೆಯಾಗಿದ್ದೇನೆ. ನಾನು ಎಷ್ಟು ಬಾರಿ ಅಂತ ಮದುವೆಯಾಗಲಿ ಎಂದು ವಿಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ನಕುಲ್ ಮೆಹ್ತಾ ಅವರು ಈ ವೀಡಿಯೊದಲ್ಲಿ ಈಗ ಅವರ 'ಬಡೆ ಅಚ್ಚೆ ಲಗ್ತೆ ಹೇ ಸೀಸನ್ 3' ನಲ್ಲಿ ತಮ್ಮ ಮತ್ತು ದಿಶಾ ಪರ್ಮಾರ್ ಅವರ ಮದುವೆಯ ದೃಶ್ಯ ಅಂದರೆ ರಾಮ್ ಮತ್ತು ಪ್ರಿಯಾ ಅವರ ವಿವಾಹದ ದೃಶ್ಯ ಚಿತ್ರೀಕರಣ ನಡೆಯುತ್ತಿದೆ. ಮತ್ತೆ ಮತ್ತೆ ಮದುಮಗ ಎಂದು ಬೇಸರದಿಂದ ಹೇಳಿದ್ದಾರೆ. ಅದೇನೇ ಇರಲಿ, ನಕುಲ್‌ನ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಅದೃಷ್ಟ ಎಂದರೆ ನಿಂದೆ ಗುರು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ನಿಜ ಜೀವನದಲ್ಲಿ, ನಕುಲ್ ಮೆಹ್ತಾ 2012ರಲ್ಲಿ ಜಾನಕಿ ಪರೇಖ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಮುದ್ದಾದ ಮಗನಿದ್ದಾನೆ. ನಕುಲ್ ಮೆಹ್ತಾ ಇದುವರೆಗೆ ಕೇವಲ 4ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೆ ಅವರು ಜನರ ಪ್ರೀತಿಯನ್ನು ಪಡೆದಿದ್ದಾರೆ. ಅವರು ತೆಲುಗು ಚಲನಚಿತ್ರಗಳು ಮತ್ತು ಹಲವಾರು ವೆಬ್‌ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ನಿರ್ಮಾಪಕರೂ ಹೌದು.